ದಿನ ಭವಿಷ್ಯ: ಸೆಪ್ಟೆಂಬರ್ 20 ಬುಧವಾರ 2023– ಈ ರಾಶಿಯವರಿಗೆ ಇಂದು ವರಮಾನ ಹೆಚ್ಚಳ
Published 19 ಸೆಪ್ಟೆಂಬರ್ 2023, 20:39 IST
ಪ್ರಜಾವಾಣಿ ವಿಶೇಷ
ಮೇಷ
ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ. ಷೇರು ಮಾರಾಟದಿಂದ ಅಧಿಕ ಲಾಭ. ವಿದ್ಯಾರ್ಥಿಗಳಿಗೆ ಗುರಿ ಮುಟ್ಟುವ ವಿಚಾರದಲ್ಲಿ ಅತಿಯಾದ ಪ್ರಯತ್ನ ಅಗತ್ಯ. ಮನರಂಜನೆಗಾಗಿ ಖರ್ಚು ಸಂಭವಿಸುವುದು.
ವೃಷಭ
ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆತು ಮುಂದಿನ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಎಲ್ಲಾ ವ್ಯವಹಾರಗಳೂ ಸಾಮಾನ್ಯ ಗತಿಯಲ್ಲಿ ಮುಂದುವರಿಯಲಿದೆ.
ಮಿಥುನ
ಒರಟು ವ್ಯಕ್ತಿತ್ವದಿಂದ ಅಥವಾ ನಿಮ್ಮ ಕಹಿಯ ಮಾತುಗಳಿಂದ ಸಹಭಾಗಿಗೆ ಅಥವಾ ಮಕ್ಕಳಿಗೆ ನೋವಾಗಬಹುದು. ಜಮೀನು ಖರೀದಿ ಅಥವಾ ರಿಯಲ್ ಎಸ್ಟೇಟ್ ವ್ಯವಹಾರಗಳಿಂದ ವರಮಾನ ಹೆಚ್ಚಿಸಿಕೊಳ್ಳಬಹುದು.
ಕರ್ಕಾಟಕ
ಆಡಿದ ಮಾತುಗಳನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಪ್ರಯತ್ನವಿರಲಿ. ಸ್ವಂತ ಉದ್ಯೋಗ ನಡೆಸುವವರು ಜವಾಬ್ದಾರಿಗಳನ್ನು ಕಡಿಮೆ ಮಾಡಿಕೊಳ್ಳುವ ಬಗ್ಗೆ ಹೆಚ್ಚಿನ ಗಮನಹರಿಸಿ. ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ಇರಲಿ.
ಸಿಂಹ
ತರಬೇತಿ ಹೊಂದಿದ ಮರದ ಕೆತ್ತನೆಯ ಕುಶಲಕರ್ಮಿಗಳಿಗೆ ಆದಾಯ ಮತ್ತು ಬೇಡಿಕೆ ಹೆಚ್ಚಲಿದೆ. ಕಾನೂನಿಗೆ ಗೌರವ ಕೊಡುವುದನ್ನು ಮರೆಯದಿರಿ. ಸ್ವಂತ ಉದ್ಯೋಗ ನಡೆಸುವವರ ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ.
ಕನ್ಯಾ
ಕಾರ್ಖಾನೆಯ ನಿರಂತರತೆಯನ್ನು ಗಮನವಿಟ್ಟುಕೊಳ್ಳುವುದಕ್ಕಾಗಿ ಈಗಿರುವ ವ್ಯವಸ್ಥೆಗೆ ಹೊರತಾಗಿ ಪರ್ಯಾಯ ವ್ಯವಸ್ಥೆಗೆ ತಯಾರಾಗಿರಿ. ಲೇಖನಮಾಲೆಯನ್ನು ಸಿದ್ಧಪಡಿಸುವ ಹಲವು ದಿನದ ಕನಸು ಈಡೇರಲಿದೆ.
ತುಲಾ
ಕುಟುಂಬದ ಹಿರಿಯರ ಆರೋಗ್ಯ ನಷ್ಟದಿಂದಾಗಿ ಆಸ್ಪತ್ರೆಯ ತಿರುಗಾಟದ ಕ್ಲೇಶ ಉಂಟಾಗುವುದು. ಉದ್ಯೋಗದ ಕಾರಣ ಪರಸ್ಥಳದಲ್ಲಿ ವಾಸ ಮಾಡುವ ಅನಿವಾರ್ಯತೆ ಬರಬಹುದು.
ವೃಶ್ಚಿಕ
ಕಚೇರಿಯಲ್ಲಿ ಇಂದಿನ ನಿಮ್ಮ ನಿಸ್ವಾರ್ಥ ಕೆಲಸಗಳಿಂದಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಲಾಭ ಪಡೆಯುವಿರಿ. ಕಾಗದ ಕಾರ್ಖಾನೆ ಮಾಲೀಕರಿಗೆ ವರಮಾನದಲ್ಲಿ ಗಣನೀಯ ಏರಿಕೆ. ಗೃಹದಲ್ಲಿ ಶಾಂತಿ ಕಾಪಾಡಿ.
ಧನು
ಇತ್ತೀಚಿನ ದಿನದಲ್ಲಿ ಸಂಪಾದನೆಯ ವಿಚಾರದಲ್ಲಿ ವೈರಾಗ್ಯ ಹೊಂದಿರುವ ನೀವು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಪರಿಶ್ರಮದಿಂದ ದುಡಿದರೆ ಪ್ರಗತಿಯ ಹಾದಿಯನ್ನು ಕಾಣುವಿರಿ. ಮನಸ್ತಾಪ ಬೇಡ.
ಮಕರ
ದೈಹಿಕ ಕೆಲಸವನ್ನು ಮಾಡಿ ದುಡಿಮೆ ಮಾಡುತ್ತಿರುವವರು ದೇಹಕ್ಕೆ ಸ್ವಲ್ಪಮಟ್ಟಿನ ವಿಶ್ರಾಂತಿ ನೀಡಬೇಕಾಗುತ್ತದೆ. ಸ್ನೇಹಪರ ಸ್ವಭಾವದಿಂದಾಗಿ ವೈಯಕ್ತಿಕ ಸ್ಥಾನಮಾನಗಳು ಲಭಿಸುವುದು. ತಪ್ಪುಗಳನ್ನು ಸರಿಪಡಿಸಿಕೊಳ್ಳಿ.
ಕುಂಭ
ಚರ್ಮಸಂಬಂಧ ಅನಾರೋಗ್ಯವು ಕಾಣಿಸಿದಲ್ಲಿ ಆಯುರ್ವೇದದ ಮೊರೆ ಹೋಗುವುದರಿಂದ ಸಮಸ್ಯೆಗೆ ಶಾಶ್ವತವಾಗಿ ಉತ್ತರ ದೊರಕಲಿದೆ. ಕೈ ಬಿಟ್ಟು ಹೋಗಿದ್ದ ಯೋಜನೆ ಪುನಃ ನಿಮ್ಮನ್ನು ಅರಸಿ ಬರುವುದು.
ಮೀನ
ಸರ್ಕಾರಿ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪರಿಪೂರ್ಣ ಪ್ರಯತ್ನ ಹಾಕುವುದು ಅಗತ್ಯ. ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಬಾಧಿಸಬಹುದು ಆದ್ದರಿಂದ ಜಾಗ್ರತೆ ವಹಿಸಿರಿ.