ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಏಪ್ರಿಲ್ 20 ಶನಿವಾರ 2024– ಸಹೋದ್ಯೋಗಿಗಳ ಬೆಂಬಲ ಚೆನ್ನಾಗಿರಲಿದೆ
Published 19 ಏಪ್ರಿಲ್ 2024, 18:31 IST
ಪ್ರಜಾವಾಣಿ ವಿಶೇಷ
author
ಮೇಷ
ನಿಮ್ಮ ಮನೋಭಾವವನ್ನು ಬದಲಿಸಿಕೊಳ್ಳುವಂತೆ ಆಗಲಿದೆ. ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕೆಂಬುದು ತಿಳಿಯಲಿದೆ. ಮನೆ ನಿರ್ಮಾಣದ ಕೆಲಸಗಳನ್ನು ಪೂರ್ತಿಗೊಳ್ಳುವ ಹಂತ ತಲುಪಲಿದೆ.
ವೃಷಭ
ವಾಸ್ತವವಾಗಿ ಕಚೇರಿಯಲ್ಲಿರುವ ವಿಷಯಗಳು ಹಾಗೂ ತಲುಪುತ್ತಿರುವ ವಿಚಾರಗಳ ನಡುವೆ ಇರುವ ವ್ಯತ್ಯಾಸವು ಇಂದು ನಿಮಗೆ ತಿಳಿಯುತ್ತದೆ. ಜಾತ್ರೆಯಂಥ ಮಹೋತ್ಸವದಲ್ಲಿ ಚಿನ್ನದ ಮೇಲೆ ಜಾಗ್ರತೆ ಇರಲಿ.
ಮಿಥುನ
ನಿಮ್ಮ ಸಾಂಸಾರಿಕ ವಿಚಾರದಲ್ಲಿ ಬೇರೆಯವರ ಸಲಹೆಗಳನ್ನು ಕಡೆಗಣಿಸುವುದು ಮತ್ತು ಹೋಲಿಕೆಯನ್ನು ಮಾಡಿಕೊಳ್ಳದೇ ಇರುವುದು ಒಳ್ಳೆಯದು.
ಕರ್ಕಾಟಕ
ವಿವಾಹದ ಭಾವನೆಗಳನ್ನು ತಂದೆ ತಾಯಿಯ ಬಳಿ ವ್ಯಕ್ತಪಡಿಸಲು ಇದು ಸುಸಮಯ. ಆಭರಣಗಳಿಗಾಗಿ ಹಣ ಖರ್ಚು ಮಾಡುವಿರಿ. ಸಹೋದ್ಯೋಗಿಗಳ ಬೆಂಬಲ ಚೆನ್ನಾಗಿರುತ್ತದೆ.
ಸಿಂಹ
ಆರ್ಥಿಕ ಜೀವನದ ಪುನರುಜ್ಜೀವನಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಅಕ್ರಮವಾದ ವ್ಯವಹಾರ ಕೈಬಿಡುವುದು ಕ್ಷೇಮಕರ. ಗೃಹೋಪಯೋಗಿ ವಸ್ತುಗಳ ಮಾರಾಟದಿಂದ ಲಾಭ ಬರಲಿದೆ.
ಕನ್ಯಾ
ಅತ್ಯಾಪ್ತರಿಗಾಗಿ ಉಡುಗೊರೆ ಕೊಡುವ ಸಲುವಾಗಿ ಹುಡುಕುತ್ತಿರುವ ವಸ್ತುವು ಲಭ್ಯವಾಗುವುದು. ಜಾಹೀರಾತುಗಳ ಮೂಲಕ ವಹಿವಾಟನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡಬಹುದು.
ತುಲಾ
ಮುಖ್ಯ ಗಣ್ಯರ ಭೇಟಿಯಲ್ಲಿ ನಿಮ್ಮ ಉಡುಗೆ ತೊಡುಗೆಗಳು ಪ್ರಾಮುಖ್ಯತೆ ಹೊಂದುತ್ತವೆ. ಮನೋಬಲವು ಹೆಚ್ಚಿರುವುದರಿಂದ ದೈಹಿಕ ವೈಕಲ್ಯತೆ ಅಡ್ಡಿ ಪಡಿಸುವುದಿಲ್ಲ.
ವೃಶ್ಚಿಕ
ಸಜ್ಜನರ ಸಹವಾಸ ಹಾಗೂ ಜನಬಳಕೆಯಿಂದಾಗಿ ಪ್ರಾಪಂಚಿಕವಾದ ಜ್ಞಾನ ವೃದ್ಧಿ. ಸ್ನೇಹಪರ, ದಾನ-ಧರ್ಮದ ಸ್ವಭಾವದಿಂದಾಗಿ ವೈಯಕ್ತಿಕ ಸ್ಥಾನಮಾನಗಳು ಲಭಿಸುವುದು. ವಾಹನ ಚಲಾಯಿಸುವಾಗ ಎಚ್ಚರವಿರಲಿ.
ಧನು
ವಿದೇಶದಲ್ಲಿ ನೆಲೆಸಿರುವವರಿಗೆ ಸ್ವಸ್ಥಾನದಲ್ಲಿ ಇರುವಂಥ ಪೋಷಕರ ಬಗ್ಗೆ ತಲೆಬಿಸಿಯಾಗುತ್ತದೆ. ಗೃಹ ವಿನ್ಯಾಸಗಾರರಿಗೆ ಹಾಗೂ ಆಂತರಿಕ ವಿನ್ಯಾಸಗಾರರಿಗೆ ಉತ್ತಮ ಅವಕಾಶಗಳು ದೊರೆಯಲಿವೆ.
ಮಕರ
ಮಂಗಳಕರವಾದ ಕಾರ್ಯಕ್ರಮಕ್ಕೆ ದೃಷ್ಟಿದೋಷಗಳನ್ನು ಉಂಟುಮಾಡುವಂಥ ಅಮಂಗಳಕಾರಿ ವ್ಯಕ್ತಿಗಳನ್ನು ಆಹ್ವಾನಿಸದಿರಿ. ಸಂಬಂಧಗಳನ್ನು ಗಟ್ಟಿಪಡಿಸಲು ಸ್ವಗೃಹದಲ್ಲಿ ಕಾರ್ಯಕ್ರಮ ಆಯೋಜಿಸಿ.
ಕುಂಭ
ಮಾರುಕಟ್ಟೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ ನಂತರದಲ್ಲಿ ಷೇರುಗಳನ್ನು ಕೊಳ್ಳವ ಯೋಜನೆಗೆ ಮುಂದಾಗಿ. ಭಾವನಾತ್ಮಕ ಪ್ರವೃತ್ತಿಯು ಹೆಚ್ಚು ಕೆಲಸ ಮಾಡಿಸುವಂತೆ ಮಾಡಬಹುದು.
ಮೀನ
ಮಾತೃ ಸಂಬಂಧಿ ಬಂಧುಗಳ ಆಗಮನದಿಂದ ಸಂತೋಷ ಹೊಂದುವಿರಿ. ಸುಖಮಯವಾಗಿರುವ ಜೀವನವನ್ನು ಮೂರನೇ ವ್ಯಕ್ತಿಗಳ ಮಾತನ್ನು ಕೇಳಿ ಹಾಳುಮಾಡಿಕೊಳ್ಳದಿರಿ.