ದಿನ ಭವಿಷ್ಯ: ಮೇ 5 ಸೋಮವಾರ 2025- ಪ್ರೇಮಿಗಳಿಗೆ ಸಹೋದರರಿಂದ ಸ್ಪಂದನೆ ಸಿಗಲಿದೆ
Published 4 ಮೇ 2025, 18:37 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವಸ್ತ್ರವಿನ್ಯಾಸ ಸಲಹೆಗಾರರಿಗೆ ಪ್ರತಿಷ್ಠಿತ ಗಾರ್ಮೆಂಟ್ ಸಂಸ್ಥೆಯೊಂದರಲ್ಲಿ ಉದ್ಯೋಗ ಸಿಗುವುದು. ವಿದೇಶಿ ಸಂಸ್ಥೆಯೊಂದಿಗೆ ವ್ಯವಹಾರಿಕ ಒಪ್ಪಂದ ಮಾಡಿಕೊಳ್ಳಲು ಸೂಕ್ತ. ನೃತ್ಯ , ನಟನೆ ಕಲಿಯಲು ಆಸಕ್ತಿ ಉಂಟಾಗುವುದು.
ವೃಷಭ
ಸಾಲ ಕೊಟ್ಟವರ ಎದುರು ಅಗೌರವವಾಗುವ ಸನ್ನಿವೇಶ ಎದುರಾಗಲಿದೆ. ಅವಿವಾಹಿತರಿಗೆ ನಿರೀಕ್ಷೆಗೆ ಪೂರಕವಾದ ಪ್ರಚೋದನೆ ಲಭಿಸಲಿದೆ. ಕುಶಲಕಾರ್ಮಿಕರಿಗೆ ಬೇಡಿಕೆಗಳು ಹೆಚ್ಚಲಿವೆ.
ಮಿಥುನ
ಶತ್ರುಗಳ ಬಣ್ಣ ಬಯಲಾಗುವುದು ಸಂತೋಷಕ್ಕೆ ಕಾರಣವಾಗುತ್ತದೆ. ಕಾರ್ಖಾನೆಯ ಒಂದಷ್ಟು ಯೋಜನೆಯನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳುವ ಅವಕಾಶಗಳು ಲಭಿಸಲಿವೆ.
ಕರ್ಕಾಟಕ
ವಿನಾಕಾರಣ ಪರಿಶ್ರಮದಿಂದ ಫಲ ಸಿಗಲಿಲ್ಲವೆಂದು ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ. ಪರಿಶ್ರಮವು ಮುಂದಿನ ದಿನಕ್ಕೆ ಅಡಿಪಾಯವಾಗಲಿದೆ. ಬೆನ್ನು ಮತ್ತು ಕಾಲಿನ ನೋವು ನಿವಾರಣೆಗೆ ವ್ಯಾಯಾಮ ಮಾಡಿ.
ಸಿಂಹ
ತತ್ವ ಆದರ್ಶಗಳ ಪಾಠದ ಜತೆಗೆ ಹಿರಿಯರ ಅನುಭವದ ಸಲಹೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿರಿ. ವೀರಾಂಜನೇಯನಿಗೆ ಜೇನುತುಪ್ಪ ಅಭಿಷೇಕ ಮಾಡಿಸುವುದರಿಂದ ಮನೋವ್ಯಾಧಿಗಳು ದೂರಾಗಲಿವೆ.
ಕನ್ಯಾ
ಆಲೋಚನೆಯನ್ನು ಇನ್ನೊಬ್ಬರಲ್ಲಿ ಹಂಚಿಕೊಳ್ಳುವುದರಿಂದ ಅಭಿವೃದ್ಧಿ ಕುಂಠಿತವಾಗಬಹುದು. ಅಂಜಿಕೆ ಬೇಡ. ನಿಮ್ಮ ಆಲೋಚನೆಯನ್ನು ಪ್ರದರ್ಶಿಸಿ ಮೆಚ್ಚುಗೆ ಪಡೆಯುವಿರಿ.
ತುಲಾ
ಮಾರುಕಟ್ಟೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ. ಷೇರು ಕೊಳ್ಳುವ ಯೋಜನೆಗೆ ಮುಂದಾಗಿ. ಜೀವನ ರೂಪಿಸಿಕೊಳ್ಳಲು ನಿರ್ಧರಿಸಿದ ಪ್ರೇಮಿಗಳಿಗೆ ತಮ್ಮ ಸಹೋದರರಿಂದ ಸ್ಪಂದನೆ ಸಿಗಲಿದೆ.
ವೃಶ್ಚಿಕ
ಕೆಟ್ಟ ವಿಚಾರಗಳ ಬಗ್ಗೆ ಮಾತನಾಡುವುದು ಸಹೋದರರಲ್ಲಿ ಭಿನ್ನಾಭಿಪ್ರಾಯ ಬೆಳೆಯಲು ಕಾರಣವಾಗುತ್ತದೆ. ಕಬ್ಬಿಣ ಮತ್ತು ತಾಮ್ರದ ವ್ಯಾಪಾರಿಗಳಿಗೆ ಲಾಭ ಸಿಗಲಿದೆ. ಹಣದ ಚಿಂತೆ ಇರುವುದಿಲ್ಲ.
ಧನು
ಹಳೆಯ ಕಾರಿನ ಅಥವಾ ಯಂತ್ರೋಪಕರಣದ ಮಾರಾಟ ವಿಷಯವನ್ನು ಕೈಬಿಡುವುದು ಉತ್ತಮ. ಸರಕು ಸಾಗಣೆದಾರರಿಗೆ ಆದಾಯದಲ್ಲಿ ಹೆಚ್ಚಳ ಕಂಡುಬಂದರೂ ಕಾರ್ಯದ ಒತ್ತಡದಿಂದ ವೃತ್ತಿಯಲ್ಲಿ ನಿರಾಶೆಯಾಗುವುದು.
ಮಕರ
ವಿದ್ಯೆಯಲ್ಲಿ ಯಶಸ್ಸನ್ನು ಹೊಂದುವ ಎಲ್ಲಾ ಲಕ್ಷಣಗಳೂ ಕಂಡರೂ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವ ಪರಿಸ್ಥಿತಿ ಎದುರಾಗಬಹುದು. ಪರಿಸ್ಥಿತಿ ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಳ್ಳುವ ಯತ್ನದಲ್ಲಿ ಸಫಲರಾಗುವಿರಿ.
ಕುಂಭ
ಮಾಡುತ್ತಿರುವ ಪರೋಪಕಾರದ ಕೆಲಸಗಳಿಗೆ ಸಕಾರಾತ್ಮಕ ಪ್ರತಿಫಲ ಕಟ್ಟಿಟ್ಟ ಬುತ್ತಿ. ಲಾಭದಾಯಕವೆನಿಸುವ ಕೆಲಸ ಅಥವಾ ವ್ಯಕ್ತಿಗಳೊಂದಿಗೆ ಮಾತ್ರ ವ್ಯವಹರಿಸುವಿರಿ. ಹಣ್ಣಿನ ವ್ಯಾಪಾರಿಗಳಿಗೆ ಇಂದು ಲಾಭದ ದಿನ.
ಮೀನ
ಕೆಲಸ ಕಾರ್ಯಗಳಲ್ಲಿ ಕಷ್ಟಗಳು ಎದುರಾಗಬಹುದು. ಕರ್ತವ್ಯ ನಿರ್ಲಕ್ಷಿಸಬೇಡಿ. ಸಹೋದ್ಯೋಗಿಗಳು ಸಹಕಾರ ನೀಡುವಂತೆ ಅಪೇಕ್ಷಿಸುವುದು ವ್ಯರ್ಥ. ಸತ್ಕಾರ್ಯಗಳಿಂದಾಗಿ ಮನೆಯಲ್ಲಿ ಸಡಗರವಿರುವುದು.