ಭಾನುವಾರ, 20 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
08/06/2025 - 14/06/2025
ವಾರ ಭವಿಷ್ಯ | 2025ರ ಜೂನ್ 15 – 21: ಸರ್ಕಾರಿ ಕೆಲಸಗಳಲ್ಲಿ ಅನುಕೂಲ
Published 14 ಜೂನ್ 2025, 18:35 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಸೌಂದರ್ಯದ ಕಡೆ ಹೆಚ್ಚು ಗಮನ ಕೊಡುವಿರಿ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಸಂಸಾರದಲ್ಲಿ ಸಂತೋಷವಿರುತ್ತದೆ. ರಕ್ತದಲ್ಲಿ ದೋಷವಿರುವವರು ಎಚ್ಚರವಹಿಸಿ. ಸಂಗಾತಿಗೆ ನೀವು ಸಾಕಷ್ಟು ಸಹಕಾರ ನೀಡುವಿರಿ. ಮಕ್ಕಳಿಂದ ನಿರೀಕ್ಷಿತ ಪ್ರಮಾಣದ ಸಹಕಾರ ಇರುವುದಿಲ್ಲ. ವೃತ್ತಿಯಲ್ಲಿದ್ದ ಗೊಂದಲಗಳು ದೂರವಾಗುತ್ತವೆ. ವಿದೇಶಿ ವ್ಯವಹಾರ ಮಾಡುವವರಿಗೆ ಲಾಭ ಹೆಚ್ಚುತ್ತದೆ.
ವೃಷಭ
ನಿಮ್ಮ ನಿರ್ಧಾರಗಳ ಬಗ್ಗೆ ನಿಮಗೆ ನಂಬಿಕೆ ಇರುವುದಿಲ್ಲ. ಆದಾಯವು ಉತ್ತಮವಾಗಿರುತ್ತದೆ. ನಿಮ್ಮ ನಡವಳಿಕೆಯಲ್ಲಿ ನಿಮ್ಮ ಹಿರಿಯರ ಪ್ರಭಾವವನ್ನು ಕಾಣಬಹುದು. ಮಕ್ಕಳಿಂದ ನಿಮಗೆ ಆರ್ಥಿಕ ಸಹಾಯ ಸಿಗುತ್ತದೆ. ಗಣಿತ ವಿದ್ಯಾರ್ಥಿಗಳಿಗೆ ಹೆಚ್ಚು ಈಗ ಯಶಸ್ಸು ಇರುತ್ತದೆ. ಸರ್ಕಾರಿ ಸಂಸ್ಥೆಗಳ ಮುಖ್ಯಸ್ಥರಾಗಿರುವವರಿಗೆ ಆದಾಯ ಹೆಚ್ಚುತ್ತದೆ. ಮಹಿಳೆಯರಿಗೆ ಸ್ವಲ್ಪ ಅನಾರೋಗ್ಯ ಕಾಡಬಹುದು. ಸಂಸಾರದಲ್ಲಿ ಸುಖವಿದ್ದರೂ ಒಮ್ಮೊಮ್ಮೆ ಕಾವೇರಿದ ಸಂದರ್ಭ ಇರುತ್ತದೆ. ಕಚೇರಿ ಕೆಲಸದ ಮೇಲೆ ವಿದೇಶದ ಪ್ರವಾಸ ಮಾಡಬಹುದು.
ಮಿಥುನ
ಬಹಳ ಜಾಣ ನಡವಳಿಕೆ ನಿಮ್ಮಲ್ಲಿ ಇರುತ್ತದೆ. ಆದಾಯವು ಸ್ವಲ್ಪ ಕಡಿಮೆ ಇರುತ್ತದೆ. ನಿಮ್ಮ ಆಸಕ್ತಿಯಿಂದ ಕೃಷಿ ಭೂಮಿಯನ್ನು ವಿಸ್ತರಣೆ ಮಾಡಿಕೊಳ್ಳಬಹುದು. ಉಷ್ಣ ಸಂಬಂಧಿ ದೋಷಗಳು ನಿಮ್ಮನ್ನು ಕಾಡಬಹುದು. ಸಂಗಾತಿಯ ಸಹಕಾರ ಮತ್ತು ಆರ್ಥಿಕ ಸಹಾಯ ನಿಮಗೆ ಸಿಗುತ್ತದೆ. ಹಿರಿಯರು ವಿದೇಶಕ್ಕೆ ಹೋಗಿ ಬರುವ ಯೋಗವಿದೆ. ವೃತ್ತಿಯಲ್ಲಿ ಹೆಚ್ಚು ಶ್ರಮಪಡಬೇಕಾಗಬಹುದು.
ಕರ್ಕಾಟಕ
ಮನಸಿನಲ್ಲಿ ಆನಂದವಿದ್ದರೂ ಸ್ವಲ್ಪ ಅಳುಕು ಇರುತ್ತದೆ. ಆದಾಯವು ಕಡಿಮೆ ಇರುತ್ತದೆ. ನಿಮ್ಮ ಚಟುವಟಿಕೆಗಳಲ್ಲಿ ನಿರುತ್ಸಾಹವಿರುತ್ತದೆ. ಮಧ್ಯವರ್ತಿಗಳಿಗೆ ಹೆಚ್ಚಿನ ಕಮಿಷನ್ ಹಣ ದೊರೆಯುತ್ತದೆ. ಕೆಲವರಿಗೆ ಪಿತ್ತ ವಿಕಾರ ಅಥವಾ ಚರ್ಮವ್ಯಾಧಿ ಕಾಡಬಹುದು. ಪ್ರೀತಿ, ಪ್ರೇಮದಲ್ಲಿ ಯಶಸ್ಸು ದೊರೆಯುತ್ತದೆ. ವಿದೇಶಿ ಪ್ರಯಾಣ ಮಾಡುವವರು ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡಿಕೊಳ್ಳಿ. ತಂದೆಯ ಜತೆ ಸಂಬಂಧವನ್ನು ಸರಿಯಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ವೃತ್ತಿಯಲ್ಲಿ ಅನುಕೂಲವಿರುತ್ತದೆ.
ಸಿಂಹ
ಶಕ್ತಿ ಕುಂದಿದಂತೆ ಅನ್ನಿಸಬಹುದು. ಆದಾಯವು ಉತ್ತಮವಾಗಿರುತ್ತದೆ. ವ್ಯಾಪಾರ ವ್ಯವಹಾರಗಳಿಂದ ಆದಾಯ ಹೆಚ್ಚುವುದು. ನಿಮ್ಮ ಕೆಲಸ ಕಾರ್ಯಗಳಿಗೆ ಹಿರಿಯರಿಂದ ಸಹಕಾರ, ಮಾರ್ಗದರ್ಶನ ದೊರೆಯುವುದು. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಲಭಿಸುತ್ತದೆ. ಶೀತ ಬಾಧೆ ಕೆಲವರನ್ನು ಕಾಡಬಹುದು. ಸಂಗಾತಿಯ ಕಠಿಣ ನಿಲುವುಗಳು ನಿಮಗೆ ಸಂಕಷ್ಟ ತರುತ್ತವೆ. ಉದ್ಯೋಗದಲ್ಲಿ ಪ್ರಗತಿ ಇರುತ್ತದೆ. ಸರ್ಕಾರಿ ಕೆಲಸಗಳಲ್ಲಿ ಅನುಕೂಲವಿರುತ್ತದೆ.
ಕನ್ಯಾ
ಹಿರಿಯರ ಮಾತಿನಂತೆ ನಡೆಯುವುದು ಬಹಳ ಉತ್ತಮ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಯಾವುದೇ ಕೆಲಸ ಮಾಡಲು ಮನಸು ಇರುವುದಿಲ್ಲ. ಸಂಸಾರದಲ್ಲಿ ಸ್ವಲ್ಪ ಸಂತೋಷ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಸ್ವಲ್ಪ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಸಂಗಾತಿಯು ನಿಮ್ಮ ಮಾತಿಗೆ ಸ್ವಲ್ಪವೂ ಬೆಲೆ ಕೊಡುವುದಿಲ್ಲ. ಬೆಳ್ಳಿ ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭ ಬರುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ನಿಮ್ಮ ಬುದ್ಧಿವಂತಿಕೆ ಬಳಸಿ ಉತ್ತಮ ಸ್ಥಾನ ಪಡೆಯಬಹುದು.
ತುಲಾ
ಎಲ್ಲ ಕೆಲಸಗಳನ್ನು ಬೇರೆಯವರಿಂದ ಮಾಡಿಸಲು ಪ್ರಯತ್ನ ಪಡುವಿರಿ. ಆದಾಯವು ಕಡಿಮೆ ಇರುತ್ತದೆ. ಹೈನುಗಾರಿಕೆ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಭೂಮಿಯ ವ್ಯವಹಾರ ಮಾಡುವವರಿಗೆ ಲಾಭವಿರುತ್ತದೆ. ಮಕ್ಕಳಿಂದ ಯಾವುದೇ ರೀತಿಯ ಗೌರವ ಲಭಿಸುವುದಿಲ್ಲ. ಹಳೆಯ ಕಾಯಿಲೆಗಳು ಮರುಕಳಿಸುವ ಸಾಧ್ಯತೆಗಳಿವೆ. ಸಂಗಾತಿಯ ಅಲಂಕಾರಕ್ಕಾಗಿ ಬಹಳ ಹಣ ಖರ್ಚಾಗುತ್ತದೆ. ಅನಿರೀಕ್ಷಿತ ಖರ್ಚುಗಳು ಎದುರಾಗುವ ಸಾಧ್ಯತೆಗಳಿವೆ.
ವೃಶ್ಚಿಕ
ಯಾವುದೇ ಕೆಲಸ ಮಾಡಲು ಮನಸಿರುವುದಿಲ್ಲ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ತಾಯಿಯಿಂದ ಪೂರಕ ಸಹಾಯ ದೊರೆಯುತ್ತದೆ. ಕಾನೂನು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಗತಿಯಿದೆ. ರಾಜಕಾರಣಿಗಳಿಗೆ ಜನಬೆಂಬಲ ಹೆಚ್ಚುತ್ತದೆ. ಗುಹ್ಯ ರೋಗಗಳು ಕೆಲವರನ್ನು ಬಾಧಿಸಬಹುದು. ಸಂಗಾತಿ ಮಾಡುವ ವ್ಯವಹಾರಗಳಿಂದ ನಷ್ಟವಾಗುತ್ತದೆ. ನಿಮ್ಮ ಕಷ್ಟಗಳಿಗೆ ಹಿರಿಯರು ಸ್ಪಂದಿಸುವರು.
ಧನು
ಆತ್ಮವಿಶ್ವಾಸವು ಹೆಚ್ಚಾಗಿರುತ್ತದೆ. ಆದಾಯ ಸ್ವಲ್ಪ ಉತ್ತಮವಾಗುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಬಂಧುಗಳ ವಿರೋಧ ಬರಬಹುದು. ಕೃಷಿ ಭೂಮಿ ಅಭಿವೃದ್ಧಿ ಪಡಿಸುವವರಿಗೆ ಹೆಚ್ಚು ಲಾಭವಿರುತ್ತದೆ. ಪ್ರಸೂತಿ ತಜ್ಞರಿಗೆ ಈಗ ಬೇಡಿಕೆ ಹೆಚ್ಚುತ್ತದೆ. ಸಂಗಾತಿಯ ಸಹಾಯದಿಂದ ನಿಮ್ಮ ಆದಾಯವನ್ನು ಹೆಚ್ಚು ಮಾಡಿಕೊಳ್ಳಬಹುದು. ಸರ್ಕಾರಿ ವ್ಯವಹಾರಗಳಲ್ಲಿ ಲಾಭ ಹೆಚ್ಚುತ್ತದೆ. ತಾಯಿಯ ಸಲಹೆಯಿಂದ ಅನಿರೀಕ್ಷಿತ ಲಾಭ ಬರುವ ಸಾಧ್ಯತೆ ಇದೆ.
ಮಕರ
ವಾರದ ಆರಂಭ ಬಹಳ ಆನಂದದಾಯಕವಾಗಿರುತ್ತದೆ. ವಿದೇಶಿ ವ್ಯವಹಾರಗಳಿಂದ ಆದಾಯ ಹೆಚ್ಚುತ್ತದೆ. ಮೂಳೆ ತಜ್ಞರಿಗೆ ಹೆಚ್ಚು ಆದಾಯವಿರುತ್ತದೆ. ಬಟ್ಟೆಯನ್ನು ತಯಾರು ಮಾಡುವವರಿಗೆ ಲಾಭ ಹೆಚ್ಚುತ್ತದೆ. ಸರ್ಕಾರಿ ವ್ಯಾಪಾರ ವ್ಯವಹಾರಗಳು ನಷ್ಟಕ್ಕೆ ಕಾರಣವಾಗಬಹುದು. ಪ್ರೀತಿ ಪ್ರೇಮದಲ್ಲಿರುವವರಿಗೆ ಹಿರಿಯರ ಒಪ್ಪಿಗೆ ದೊರೆಯುತ್ತದೆ. ಸಾಂಪ್ರದಾಯಿಕ ಕೃಷಿ ಮಾಡುವವರಿಗೆ ನಿರೀಕ್ಷಿತ ಲಾಭವಿದೆ. ಉದ್ಯೋಗದಲ್ಲಿ ಸ್ವಲ್ಪ ಒತ್ತಡಗಳು ಹೆಚ್ಚಾಗಬಹುದು.
ಕುಂಭ
ಆದಾಯವು ಕಡಿಮೆ ಇದ್ದರೂ ನಿಭಾಯಿಸುವ ಶಕ್ತಿ ಇರುತ್ತದೆ. ಆಸ್ತಿಯನ್ನು ಕೊಳ್ಳಲು ನಿಮ್ಮ ಸಹೋದರಿಯರು ಸಹಾಯ ಮಾಡುವರು. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಶೀತ ಸಂಬಂಧಿ ಕಾಯಿಲೆ ಇರುವವರು ಬಹಳ ಎಚ್ಚರವಾಗಿರಿ. ಸಂಗಾತಿಯ ಕಠಿಣನುಡಿಗಳು ನಿಮ್ಮನ್ನು ಗಾಬರಿಗೊಳಿಸಬಹುದು.
ಮೀನ
ಆದಾಯವು ಉತ್ತಮವಾಗಿರುತ್ತದೆ. ಸಂಗೀತಗಾರರಿಗೆ ಸಾಕಷ್ಟು ಪ್ರೋತ್ಸಾಹ ಸಿಗುತ್ತದೆ. ನಡವಳಿಕೆಯಿಂದ ನೀವು ಜನರನ್ನು ಸಂಪಾದನೆ ಮಾಡಬಹುದು. ಹೈನುಗಾರಿಕೆ ಅಭ್ಯಾಸ ಮಾಡುತ್ತಿರುವವರಿಗೆ ಅಭಿವೃದ್ಧಿ ಇರುತ್ತದೆ. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಲಾಭವಿರುತ್ತದೆ. ಹರಿತವಾದ ಆಯುಧಗಳನ್ನು ಉಪಯೋಗಿಸುವಾಗ ಹೆಚ್ಚು ಎಚ್ಚರವಾಗಿರಿ. ಸಂಗಾತಿಯ ಜತೆಗೂಡಿ ಮಾಡಿದ ವ್ಯವಹಾರಗಳಲ್ಲಿ ಹೆಚ್ಚು ಲಾಭವಿರುತ್ತದೆ.
ADVERTISEMENT
ADVERTISEMENT