ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ಉದ್ಯಮಿಗಳಿಗೆ ಅನುಕೂಲಕರ ಸನ್ನಿವೇಶ ನಿರ್ಮಾಣವಾಗಲಿದೆ
Published 2 ಜುಲೈ 2024, 22:45 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಆತ್ಮೀಯರಲ್ಲಿ ಭಾವನೆಗಳನ್ನು ಹಂಚಿಕೊಳ್ಳಲು ಸೂಕ್ತ ಸಮಯ ದೊರಕುವುದು. ಅತಿ ಆಲಸ್ಯ, ಬೇಜವಾಬ್ದಾರಿತನ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ. ಆರೋಗ್ಯದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳು ಎದುರಾಗಬಹುದು.
ವೃಷಭ
ಧಾರ್ಮಿಕ ಕೆಲಸಗಳಿಗಾಗಿ ಖರ್ಚುಗಳಿದ್ದರೂ ದೈವಬಲದಿಂದ ಎಲ್ಲಾ ವ್ಯವಹಾರಗಳಲ್ಲಿ ಉತ್ತಮ ಧನ ಆದಾಯವನ್ನು ಹೊಂದುವಿರಿ. ಮನೆಯಲ್ಲಿರುವ ಸಣ್ಣ ಮಕ್ಕಳ ಕೆಲವು ಮಾತುಗಳು ಶಿರೋವೇದನೆಗೆ ಕಾರಣವಾಗುವುದು.
ಮಿಥುನ
ಮೇಲಧಿಕಾರಿಗಳು ಹಾಗೂ ಹಿರಿಯರಿಂದ ಬಯಸಿದ ಉಪಕಾರವನ್ನು ಪಡೆಯಬಹುದು. ಚಿಕಿತ್ಸೆಗಳನ್ನು ತಪ್ಪಿಸದೆ ತೆಗೆದುಕೊಳ್ಳಿರಿ. ಹಳೆಯ ಸಮಸ್ಯೆಗಳೇ ಹೊಸ ರೂಪವನ್ನು ಪಡೆದು ಬರುವವು.
ಕರ್ಕಾಟಕ
ನಾಟಕ ಅಥವ ಸಿನಿಮಾದಲ್ಲಿ ನಟನೆ ಮಾಡುವಂಥವರಿಗೆ ಉತ್ತಮ ಅವಕಾಶಗಳ ಜತೆ ಹೆಸರು ಬರಲಿದೆ. ಭೇದ-ಭಾವ, ತಾರತಮ್ಯದ ಮಾತುಗಳು ಆಡುವುದನ್ನು ಕಡಿಮೆ ಮಾಡಿ. ಪುಣ್ಯಕ್ಷೇತ್ರಗಳಿಗೆ ಹೋಗಿಬರುವ ಸಾಧ್ಯತೆಗಳಿವೆ.
ಸಿಂಹ
ಸಂತಾನ ಪ್ರಾಪ್ತಿಯಾಗಲಿದ್ದು ಸಂಸಾರದಲ್ಲಿ ಸಂತೃಪ್ತ ಜೀವನ ನಡೆಸುವಂತಾಗುತ್ತದೆ. ಆತ್ಮ ವಿಶ್ವಾಸ ಹೆಚ್ಚಿಸಿ ಕೊಂಡು ಪರಿಶ್ರಮದಿಂದ ಪ್ರಗತಿಯ ಹಾದಿಗೆ ಹೋಗುವಿರಿ. ಹಾಳು ವ್ಯಸನಗಳಿಗೆ ಒಳಗಾಗುವ ಪರಿಸ್ಥಿತಿ ತಪ್ಪಿಸಿಕೊಳ್ಳಿರಿ.
ಕನ್ಯಾ
ಹೊಸದನ್ನು ಸಾಧಿಸುವ ಪ್ರಚೋದನೆ ನಿಮ್ಮನ್ನು ಸೆಳೆಯಲಿದೆ. ಈಗ ನಡೆಯುತ್ತಿರುವ ಕೆಲಸ ಕಾರ್ಯಗಳು ನಿಲ್ಲುವಂತಾಗಬಹುದು. ಶಿಸ್ತುಬದ್ಧ ನಿಯಮದ ಆಹಾರದಿಂದ ಆರೋಗ್ಯ ವೃದ್ಧಿಯಾಗುವುದು.
ತುಲಾ
ಮೂರನೇ ವ್ಯಕ್ತಿಯ ಮಾತುಗಳನ್ನು ಕೇಳಿಕೊಂಡು ಸಂಬಂಧಿಗಳಲ್ಲಿ ಇಲ್ಲಸಲ್ಲದ ವಿಚಾರಗಳಿಗೆ ಜಗಳನ್ನು ತೆಗೆಯದಿರಿ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಲು ಯೋಗಾಭ್ಯಾಸ ಅಥವಾ ಧ್ಯಾನ ಮಾಡುವುದನ್ನು ಅಭ್ಯಸಿಸಿ.
ವೃಶ್ಚಿಕ
ವಂಶದ ಕುಡಿಯು ನೀವು ಬಯಸಿದ ರೀತಿಯಲ್ಲಿಯೇ ಉತ್ತಮ ಜೀವನ ನಡೆಸುತ್ತಿರುವುದನ್ನು ಜನರು ಹೊಗಳುವುದು ಕೇಳಿ ಆನಂದ ಹೊಂದುವಿರಿ. ಉದ್ಯಮಿಗಳಿಗೆ ಅನುಕೂಲಕರ ಸನ್ನಿವೇಶ ನಿರ್ಮಾಣವಾಗಲಿದೆ.
ಧನು
ಅತ್ಯಂತ ಸೂಕ್ಷ್ಮ ಮನಸ್ಕರಾಗಿರುವ ನಿಮಗೆ ಇತರರು ಹೇಳ ಬಹುದಾದ ಮಾತುಗಳನ್ನು ಸ್ವೀಕರಿಸುವಂಥ ಸಾಮರ್ಥ್ಯ ಇಲ್ಲವಾಗುವುದು. ಇನ್ನೊಬ್ಬರಿಗೆ ಹೇಳಿಕೊಡುವ ಮುಂಚೆ ನಿಮ್ಮ ಜ್ಞಾನವು ಎಷ್ಟಿದೆ ಎಂದು ತಿಳಿಯಿರಿ.
ಮಕರ
ವಿದ್ಯುತ್ ಉಪಕರಣಗಳನ್ನು ಸರಿ ರೀತಿಯಲ್ಲಿ ಬಳಸದೇ ಇರುವುದರಿಂದ ಅಪಾಯಗಳು ಉಂಟಾಗಬಹುದು. ಆತ್ಮವಿಶ್ವಾಸ ಹೆಚ್ಚಿಸುವ ಕೆಲಸಗಳಲ್ಲಿ ತೊಡಗುವಿರಿ. ದುರ್ಗಾಪರಮೇಶ್ವರಿಯ ಆರಾಧನೆಯಿಂದ ಶುಭ.
ಕುಂಭ
ನಿನ್ನೆ ಇದ್ದಂಥ ವಸ್ತುಗಳು ಇಂದು ಕಾಣೆಯಾಗುವುದು. ನಿರ್ದಿಷ್ಟವಾಗಿ ಒಬ್ಬ ವ್ಯಕ್ತಿಯ ಮೇಲೆ ಅನುಮಾನವನ್ನು ತರಿಸುತ್ತದೆ. ವಿದೇಶಿ ಸಂಪರ್ಕಗಳಿಂದ ಉತ್ತಮ ಪ್ರಯೋಜನವು ಆಗಲಿದೆ. ಕೈಗಳ ಸ್ವಚ್ಚತೆಯ ಮೇಲೆ ಗಮನ ಹರಿಸಿ.
ಮೀನ
ಕುಟುಂಬದವರ ಜೊತೆ ನಡೆಯುತ್ತಿದ್ದ ಮುಸುಕಿನ ಗುದ್ದಾಟವನ್ನು ಮಾತನಾಡಿ ಬಗೆಹರಿಸಿಕೊಳ್ಳುವಿರಿ. ವ್ಯಾಪಾರದಲ್ಲಿ ಅನಿರೀಕ್ಷಿತ ಬದಲಾವಣೆಯನ್ನು ಕಾಣುವ ಸಾಧ್ಯತೆ ಇದೆ. ಇತರರ ವಿಷಯದಲ್ಲಿ ತಲೆ ಹಾಕದಿರಿ.