ವಾರ ಭವಿಷ್ಯ: 2025 ಜೂನ್ 22 ರಿಂದ 28ರವರೆಗೆ
Published 22 ಜೂನ್ 2025, 0:03 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
ಕೆಲವರಿಗೆ ಸಂಗೀತದಲ್ಲಿ ಆಸಕ್ತಿ ಬಹಳ ಹೆಚ್ಚಾಗುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ನಿಮ್ಮ ನಡವಳಿಕೆಯ ಮೇಲೆ ಹಿರಿಯರು ಪ್ರಭಾವ ಬೀರುವರು. ಹೈನುಗಾರಿಕೆ ಮಾಡುವವರಿಗೆ ಅಭಿವೃದ್ಧಿ ಇದೆ. ತಾಯಿಗಾಗಿ ಒಡವೆ ಮತ್ತು ವಸ್ತುಗಳನ್ನು ಕೊಳ್ಳುವಿರಿ. ಕೃಷಿಯಲ್ಲಿ ಹೆಚ್ಚು ಆಸಕ್ತಿ ಮೂಡುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶವಿಲ್ಲ. ಕೃಷಿ ವಿದ್ಯಾರ್ಥಿಗಳಿಗೆ ಹೆಚ್ಚು ಯಶಸ್ಸು ದೊರೆಯುತ್ತದೆ. ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು.
(ಅಶ್ವಿನಿ ಭರಣಿ ಕೃತಿಕ 1)
ವೃಷಭ
ದೇಹ ಸೌಂದರ್ಯದ ಬಗ್ಗೆ ಗಮನ ಕಡಿಮೆ ಮಾಡುವಿರಿ. ಆದಾಯವು ಉತ್ತಮವಾಗಿರುತ್ತದೆ. ಕೃಷಿಯಲ್ಲಿ ಹೆಚ್ಚು ಆಸಕ್ತಿ ಮೂಡುತ್ತದೆ. ಕ್ರೀಡಾಪಟುಗಳು ಸಿಕ್ಕ ಅವಕಾಶಗಳನ್ನು ಬಳಸಿ ಕೊಳ್ಳಲು ವಿಫಲರಾಗುವರು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೆಚ್ಚು ಯಶಸ್ಸು ಇರುತ್ತದೆ. ಮೂತ್ರ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ಸಂಗಾತಿಯ ಜತೆಗೂಡಿ ಮಾಡಿದ ವ್ಯವಹಾರಗಳಲ್ಲಿ ಲಾಭವಿರುತ್ತದೆ.
(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಮಿಥುನ
ಆತ್ಮವಿಶ್ವಾಸದಿಂದ ಮುನ್ನಡೆಯುವಿರಿ. ಆದಾಯವು ಉತ್ತಮವಾಗಿರುತ್ತದೆ. ಬಂಧುಗಳಿಂದ ನಿಮ್ಮ ಒಳ್ಳೆಯ ಕಾರ್ಯಗಳಿಗೆ ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಸಂಗೀತ ವಿದ್ಯಾರ್ಥಿಗಳಿಗೆ ಬಹಳ ಯಶಸ್ಸು ಲಭಿಸುತ್ತದೆ. ಮೂಳೆಗೆ ಸಂಬಂಧಿಸಿದ ದೋಷಗಳು ಕೆಲವರನ್ನು ಕಾಡಬಹುದು. ಉದ್ಯೋಗದಲ್ಲಿ ಇದ್ದ ಒತ್ತಡಗಳು ಸ್ವಲ್ಪ ಕಡಿಮೆಯಾಗುತ್ತವೆ.
(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಕರ್ಕಾಟಕ
ವೃತ್ತಿಯಲ್ಲಿ ಮೇಲ್ದರ್ಜೆಗೆ ಏರುವ ಬಗ್ಗೆ ಸಾಕಷ್ಟು ಚಿಂತನೆ ನಡೆಸುವಿರಿ. ಆದಾಯವು ಕಡಿಮೆ ಇರುತ್ತದೆ. ಸಂಸಾರದಲ್ಲಿ ಸುಖ ಮತ್ತು ಸಂತೋಷವಿರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ಸಿಗುವುದಿಲ್ಲ. ಪಿತ್ತವಿಕಾರಗಳು ಕೆಲವರನ್ನು ಕಾಡಬಹುದು. ಕೆಲವರಿಗೆ ಅನಿರೀಕ್ಷಿತ ವಿದೇಶಿ ಪ್ರಯಾಣ ಯೋಗವಿದೆ. ವೃತ್ತಿಯಲ್ಲಿದ್ದ ಗೊಂದಲಗಳು ನಿವಾರಣೆಯಾಗಿ ಹೊಸ ಸ್ಥಾನ ಸಿಗುವ ಸಾಧ್ಯತೆಗಳಿವೆ. ಮಹಿಳೆಯರ ಸಿದ್ಧ ಉಡುಪುಗಳನ್ನು ತಯಾರಿಸುವವರಿಗೆ ಲಾಭವಿದೆ.
( ಪುನರ್ವಸು 4 ಪುಷ್ಯ ಆಶ್ಲೇಷ)
ಸಿಂಹ
ಮನಸ್ಸಿನಲ್ಲಿ ಆಲಸೀತನವಿರುತ್ತದೆ. ಆದಾಯವು ಸ್ವಲ್ಪ ಉತ್ತಮವಾಗಿರುತ್ತದೆ. ನಿಮ್ಮೆಲ್ಲ ಕೆಲಸಗಳಿಗೆ ತಂದೆಯ ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಬಹಳ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ರಾಜಕಾರಣಿಗಳಿಗೆ ಅನಿರೀಕ್ಷಿತವಾಗಿ ಜನ ಬೆಂಬಲ ದೊರೆಯುತ್ತದೆ. ಕೆಲವರಿಗೆ ವಿದೇಶಕ್ಕೆ ಹೋಗಿ ಬರುವ ಕನಸು ನನಸಾಗುತ್ತದೆ. ಕಬ್ಬಿಣದ ವ್ಯಾಪಾರಿಗಳಿಗೆ ಸ್ವಲ್ಪ ಹಿನ್ನಡೆಯಾಗಬಹುದು. ಪ್ರೇಮಿಗಳಿಗೆ ಹಿರಿಯರ ಒಪ್ಪಿಗೆ ದೊರೆಯುವ ಸಾಧ್ಯತೆ ಇದೆ.
(ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಕನ್ಯಾ
ದ್ವಂದ್ವ ನಿರ್ಧಾರದಲ್ಲಿರುತ್ತೀರಿ. ಆದಾಯವು ಕಡಿಮೆ ಇರುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚುವ ಸಾಧ್ಯತೆ ಇದೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಇರುತ್ತದೆ. ಮೂಳೆ ತಜ್ಞರಿಗೆ ಬೇಡಿಕೆ ಹೆಚ್ಚುತ್ತದೆ. ಸಂಗಾತಿಯ ಆಲಸೀತನವು ನಿಮ್ಮನ್ನು ಕೆರಳಿಸುತ್ತದೆ. ಸ್ತ್ರೀಯರ ಬಟ್ಟೆಗಳಿಗೆ ಕಸೂತಿ ಮಾಡುವವರ ಆದಾಯ ಕಡಿಮೆಯಾಗಬಹುದು. ಹಿರಿಯರಿಂದ ಬರುವ ಆದಾಯ ಕಡಿಮೆಯಾಗುತ್ತದೆ.
( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ತುಲಾ
ಶ್ರೀಮಂತನಾಗಬೇಕೆಂಬ ಬಯಕೆ ಹೆಚ್ಚಾಗುತ್ತದೆ. ಆದಾಯವು ಕಡಿಮೆ ಇರುತ್ತದೆ. ಎಲ್ಲರ ಸಹಕಾರ ದೊರೆತು ನಿಮ್ಮ ಕೆಲಸಗಳು ಸುಗಮವಾಗಿ ಆಗುತ್ತವೆ. ವಿದೇಶದಲ್ಲಿ ಓದುತ್ತಿರುವವರಿಗೆ ಹೆಚ್ಚಿನ ಸೌಲಭ್ಯ ದೊರೆಯುತ್ತದೆ. ಆನುವಂಶೀಯ ಕಾಯಿಲೆಗಳು ಕೆಲವರನ್ನು ಕಾಡಬಹುದು. ವೃತ್ತಿಯಲ್ಲಿ ಹೆಚ್ಚಿನ ಆದಾಯ ದೊರೆಯುವ ಸಾಧ್ಯತೆಗಳಿವೆ. ಸಂಗಾತಿಯಿಂದ ಈಗ ಸಮಾಧಾನದ ಮಾತುಗಳು ಮತ್ತು ಆರ್ಥಿಕ ಸಹಾಯ ದೊರೆಯುತ್ತವೆ.
( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ವೃಶ್ಚಿಕ
ಆಲಸೀತನ ಮೈದುಂಬಿರುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ನಿಮ್ಮ ಮಕ್ಕಳಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಸಹಕಾರ ದೊರೆಯುತ್ತದೆ. ವಿದೇಶದಲ್ಲಿರುವವರು ಈಗ ಸ್ವದೇಶದಲ್ಲಿ ಸ್ಥಿರಾಸ್ತಿಯನ್ನು ಮಾಡಬಹುದು. ಕೆಲವು ಮಹಿಳೆಯರಿಗೆ ಆರೋಗ್ಯ ಸಮಸ್ಯೆಯಾಗಬಹುದು. ಮಹಿಳೆಯರ ಜತೆ ಮಾಡಿದ ವ್ಯವಹಾರಗಳು ನಷ್ಟಕ್ಕೆ ಕಾರಣವಾಗುತ್ತವೆ. ಸಂಗಾತಿಯ ಖರ್ಚು ಚಿಂತೆಗೀಡುಮಾಡುತ್ತದೆ. ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಪ್ರಗತಿ ಇರುವುದಿಲ್ಲ.
( ವಿಶಾಖಾ 4 ಅನುರಾಧ ಜೇಷ್ಠ)
ಧನು
ಆತ್ಮವಿಶ್ವಾಸವನ್ನು ಹೆಚ್ಚು ಮಾಡಿಕೊಳ್ಳುವಿರಿ. ಆದಾಯವು ಕಡಿಮೆ ಇದ್ದರೂ, ತೊಂದರೆ ಇರುವುದಿಲ್ಲ. ನಿಮ್ಮ ಕೆಲಸಗಳಿಗೆ ಬಂಧುಗಳು ತೊಂದರೆ ಮಾಡಬಹುದು. ನಿಮ್ಮ ಕೆಲವು ಪ್ರಬಂಧಗಳಿಗೆ ವಿದೇಶಿ ಮನ್ನಣೆ ದೊರೆಯುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಫಲಿತಾಂಶ ಪಡೆಯುವ ಯೋಗವಿದೆ. ಸ್ತ್ರೀರೋಗ ತಜ್ಞರಿಗೆ ಬೇಡಿಕೆ ಹೆಚ್ಚುತ್ತದೆ. ಸ್ತ್ರೀಯರ ಜತೆ ಮಾಡುವ ವ್ಯವಹಾರಗಳು ನಷ್ಟಕ್ಕೆ ಕಾರಣವಾಗಬಹುದು. ನಿಮ್ಮ ಸಂಗಾತಿಯಿಂದ ಆರ್ಥಿಕ ಸಹಕಾರ ಸಿಗುತ್ತದೆ.
(ಮೂಲ ಪೂರ್ವಾಷಾಢ ಉತ್ತರಾಷಾಢ 1)
ಮಕರ
ಶ್ರಮಪಟ್ಟು ಕೆಲಸ ಮಾಡಿ ಹೆಸರು ಗಳಿಸುವಿರಿ. ವಿದೇಶದಲ್ಲಿರುವವರಿಗೆ ಆದಾಯ ಹೆಚ್ಚುತ್ತದೆ. ನಿಮ್ಮ ವೈರಿಗಳನ್ನು ಗುರುತಿಸುವಿರಿ. ಭೂ ಸಂಬಂಧಿ ವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ನರಸಂಬಂಧಿ ದೋಷಗಳು ಕೆಲವರಿಗೆ ಕಾಡಬಹುದು. ಸಂಗಾತಿಯೊಂದಿಗೆ ಅನುಬಂಧ ಉತ್ತಮವಾಗಿರುತ್ತದೆ. ಕೃಷಿಯಿಂದ ಅಷ್ಟು ಲಾಭವಿರುವುದಿಲ್ಲ. ವೃತ್ತಿಯಲ್ಲಿ ಒತ್ತಡಗಳು ಕಡಿಮೆಯಾಗಿ ಸಂತೋಷದ ವಾತಾವರಣವಿರುತ್ತದೆ.
( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಕುಂಭ
ಆದಾಯವು ಸಾಮಾನ್ಯ ಮಟ್ಟದಲ್ಲಿ ಇರುತ್ತದೆ. ಬಹಳ ಚುರುಕಾಗಿ ಕೆಲಸ ಕಾರ್ಯಗಳನ್ನು ಮಾಡುವಿರಿ. ನಿಮಗೆ ಹಿರಿಯರ ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ಪಿತ್ತವಿಕಾರಗಳು ಕೆಲವರಲ್ಲಿ ಕಾಣಿಸಿಕೊಳ್ಳಬಹುದು. ಹರಿತವಾದ ಆಯುಧಗಳನ್ನು ಉಪಯೋಗಿಸುವಾಗ ಸ್ವಲ್ಪ ಎಚ್ಚರದಿಂದಿರಿ. ತಂದೆಯ ಸಹಕಾರದಿಂದ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲವಾಗುತ್ತದೆ.
( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)ಅ
ಮೀನ
ಆದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ಅಲಂಕಾರದ ಕಡೆಗೆ ಹೆಚ್ಚು ಗಮನ ಕೊಡುವಿರಿ. ಕಟ್ಟಡ ನಿರ್ಮಾಣಕಾರರಿಗೆ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಮಕ್ಕಳಿಂದ ನಿಮಗೆ ಆರ್ಥಿಕ ಸಹಕಾರ ಸಿಗುತ್ತದೆ. ಶೀತ ಅಥವಾ ಪಿತ್ತೋಷ್ಣಗಳು ನಿಮ್ಮನ್ನು ಕಾಡಬಹುದು. ರಾಜಕೀಯ ನಾಯಕರುಗಳಿಗೆ ತಮ್ಮ ಜನ ಬೆಂಬಲವನ್ನು ಹೆಚ್ಚಿಸಿಕೊಳ್ಳುವ ಅವಕಾಶ ದೊರೆಯುತ್ತದೆ. ವೃತ್ತಿಯಲ್ಲಿ ಅಭಿವೃದ್ಧಿಯನ್ನು ಕಾಣಬಹುದು.
( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)