ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ವಾರ ಭವಿಷ್ಯ | 11 ಜೂನ್‌ 2023ರಿಂದ 17 ಜೂನ್‌ 2023ರವರೆಗೆ
Published 10 ಜೂನ್ 2023, 19:55 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಗೃಹ ನಿರ್ಮಾಣ ಮಾಡುವ ಯೋಚನೆಯು ಮನೆಯವರ ಸಂತಸಕ್ಕೆ ಕಾರಣವಾಗುತ್ತದೆ. ಖಾಸಗಿ ಸಾಲಪಡೆದು ಸ್ವಂತಉದ್ಯಮ ಆರಂಭಿಸುವಯೋಚನೆ ಅಷ್ಟು ಸಮಂಜಸವಲ್ಲ. ಸಂಸಾರದಲ್ಲಿನ ಕೆಲವು ತಾಪತ್ರಯಗಳುನೀಗಿ ಮನಸ್ಸಿಗೆ ಸಮಾಧಾನ ಉಂಟಾ ಗುತ್ತದೆ. ಕಾನೂನು ವಿಷಯದಲ್ಲಿ ತೊಡಗಿರುವವರಿಗೆ ಶುಭ ವಾರ್ತೆಗಳಿರುತ್ತವೆ. ಅನುಭವಿ ಕಕ್ಷಿದಾರರೊಡನೆ ವ್ಯವಹರಿಸಿದ್ದರಿಂದ ವ್ಯವಹಾರ ವಿಸ್ತರಣೆಯಾಗುತ್ತದೆ. ಸಂಘ ಸಂಸ್ಥೆಗಳಲ್ಲಿ ಸಣ್ಣಪುಟ್ಟ ತಪ್ಪುಗಳನ್ನು ಮಾಡಿ ಸಮರ್ಥಿಸಿಕೊಳ್ಳಲು ಹೋಗಬೇಡಿರಿ. ಧನಾದಾಯವು ನಿಮ್ಮನಿರೀಕ್ಷೆಯನ್ನು ತಲುಪುತ್ತದೆ. ಧಾರ್ಮಿಕ ಕಾರ್ಯ ಗಳಿಂದ ಹೆಚ್ಚಿನಧನದಾಯಬರುತ್ತದೆ.ಅಧಿಕಾರಿಗಳನ್ನು ಗೌರವಿಸುವುದರಿಂದ ನಿಮ್ಮಕೆಲಸಸುಗಮವಾಗುತ್ತದೆ. ಉದ್ಯೋಗದಲ್ಲಿ ಸಮಸ್ಯೆಗಳು ಕಂಡು ಬಂದರು ಸಹ ನಿಧಾನವಾಗಿ ಪರಿಹಾರವಾಗುವುದು.
ವೃಷಭ
ಈಗ ಮಕ್ಕಳಿಂದ ಸಮಾಧಾನದ ಅಥವಾ ನೆಮ್ಮದಿಯ ಮಾತುಗಳನ್ನುಕೇಳುವಿರಿ. ತೈಲ ವ್ಯಾಪಾರಿ ಗಳಿಗೆ ಹೆಚ್ಚಿನ ವ್ಯವಹಾರವಿರುತ್ತದೆ. ರಾಸಾಯನಿಕ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚಿನ ಲಾಭವಿರುತ್ತದೆ. ಮನೆಗೆ ಬೆಲೆ ಬಾಳುವ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಖರೀದಿ ಮಾಡುವ ಯೋಗವಿದೆ. ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಅಪೇಕ್ಷಿಸಿದ ಸರ್ಕಾರಿ ಸಾಲಗಳು ಈಗ ದೊರೆಯುವ ಸಾಧ್ಯತೆ ಇದೆ. ವೃತ್ತಿರಂಗದಲ್ಲಿ ಹೆಚ್ಚಿನ ಪ್ರತಿ ಸ್ಪರ್ಧಿಗಳನ್ನು ಕಾಣಬಹುದು. ಉದ್ದಿಮೆದಾರರು ಕಾರ್ಮಿಕರ ಬಗ್ಗೆ ಮೃದು ಧೋರಣೆಯನ್ನು ತಳೆದಲ್ಲಿ ಮಾತ್ರ ಹೆಚ್ಚು ಉತ್ಪಾದನೆ ಮಾಡುವ ಸಾಧ್ಯತೆ ಇದೆ. ಧನದಾಯವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ರಫ್ತು ವ್ಯಾಪಾರದವರಿಗೆ ಸ್ವಲ್ಪ ಹಿನ್ನಡೆ ಆಗಬಹುದು.
ಮಿಥುನ
ಕಳೆದು ಹೋದ ಆಸ್ತಿಯ ಬಗ್ಗೆ ಹೆಚ್ಚು ಚಿಂತಿಸುವುದನ್ನು ಬಿಡಿರಿ. ವೃತ್ತಿಯಲ್ಲಿ ಶ್ರಮಪಟ್ಟು ಧನಗಳಿಸಿ ಪುನಃ ಆಸ್ತಿ ಸಂಪಾದನೆ ಮಾಡುವ ಯೋಗ ವಿದೆ. ಉದ್ಯೋಗದಲ್ಲಿ ಸ್ಥಳ ಬದಲಾವಣೆಯ ಅಂಶ ಕಾಣುತ್ತಿದೆ. ಉನ್ನತ ವಿದ್ಯೆ ಓದು ಓದುವವರಿಗೆ ಸೂಕ್ತ ಮಾರ್ಗದರ್ಶನ ದೊರೆಯುತ್ತದೆ. ಶರತ್ತುಗಳಿಗೆ ಒಪ್ಪಿ ಯಾವುದೇ ವ್ಯವಹಾರಗಳಿಗೂ ಕೈ ಹಾಕದಿರುವುದು ಒಳ್ಳೆಯದು.ಗಣ್ಯರ ಸಹವಾಸದಿಂದ ನಿಮ್ಮ ಬದುಕಿನ ಮುಂದಿನ ದಾರಿ ಹೊಸ ತಿರುವು ಪಡೆಯುತ್ತದೆ. ವೃತ್ತಿ ಯಲ್ಲಿ ಹೊಸ ವಾತಾವರಣಕ್ಕೆ ಒಗ್ಗಿ ಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಧನಾದಾಯವು ಮಧ್ಯಮ ಗತಿಯಲ್ಲಿರುತ್ತದೆ. ಬಾಯಿ ಹುಣ್ಣು ಅಥವಾ ಹಲ್ಲಿನ ತೊಂದರೆ ಕಾಣಿಸಬಹುದು. ವಿದೇಶದಲ್ಲಿರುವ ಸಂಗಾತಿಯನ್ನು ಹೋಗಿ ಸೇರಿಕೊಳ್ಳಲು ಈಗ ಸಕಾಲ. ಕುಟುಂಬದಲ್ಲಿ ಸಾಕಷ್ಟು ಶಾಂತಿ ಇರುತ್ತದೆ.
ಕರ್ಕಾಟಕ
ಎಷ್ಟೇ ಕಷ್ಟ ಬಂದರೂ ಎದೆಗುಂದದೆ ಮುನ್ನಡೆಯುವುದು ಬಹಳ ಸೂಕ್ತ, ಇದರ ಪರಿಣಾಮ ದಿಂದ ಜೀವನದಹಾದಿಯು ಹೆಚ್ಚು ಸುಗಮವಾಗಲಿದೆ. ಸಣ್ಣಮಕ್ಕಳ ವರ್ತನೆ ಹಿರಿಯರಿಗೆ ಬಹಳ ಸಂತೋಷ ತರುತ್ತದೆ. ಸಮಾಲೋಚನೆ ಮಾಡಿ ನಿರ್ಧಾರವನ್ನು ಕೈಗೊಂಡ ಕೆಲಸಗಳು ಹೆಚ್ಚು ಪರಿಣಾಮ ಬೀರುತ್ತದೆ. ಸಾಮಾಜಿಕ ಕ್ರಾಂತಿಗಳನ್ನು ಮಾಡುವವರಿಗೆ ಹೆಸರು ಬರುತ್ತದೆ. ಆರ್ಥಿಕ ಸ್ಥಿತಿಯು ನಿಮ್ಮ ನಿರೀಕ್ಷೆಯ ಹತ್ತಿರ ಬರುತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಮ ದರ್ಜೆಯ ಫಲಿತಾಂಶವಿರುತ್ತದೆ. ಸರ್ಕಾರಿ ಕೆಲಸ ಕಾರ್ಯಗಳು ಹೆಚ್ಚು ಸರಾಗವಾಗಿ ಆಗುತ್ತದೆ. ವ್ಯವಹಾರಗಳಲ್ಲಿ ಕೆಲವೊಂದು ನಿರ್ಧಾರಗಳನ್ನು ದೃಢವಾಗಿ ತೆಗೆದು ಕೊಂಡರೆ ಮಾತ್ರ ವ್ಯವಹಾರ ಸರಿದಾರಿಗೆ ಬರುವುದು. ಹರಿತವಾದ ಆಯುಧಗಳ ಜೊತೆ ಕೆಲಸ ಮಾಡುವ ವರು ಹೆಚ್ಚು ಎಚ್ಚರದಿಂದ ಕೆಲಸ ಮಾಡಿರಿ.
ಸಿಂಹ
ಸ್ವಂತ ಉದ್ಯೋಗ ಮಾಡುವವರು ಹೆಚ್ಚಿನ ಪ್ರಗತಿಯನ್ನು ಕಾಣುವರು.ಕೆಲಸಕಾರ್ಯಗಳಲ್ಲಿ ತಾಳ್ಮೆ ಹಾಗೂ ದೃಢ ನಿರ್ಧಾರಗಳು ಬಹಳ ಮುಖ್ಯ. ನಿಮ್ಮ ಬಂಧುಗಳ ಅಥವಾ ಒಡಹುಟ್ಟಿದವರ ವಿರೋಧವನ್ನು ಎದುರಿಸಬೇಕಾದೀತು. ಮಾರಾಟ ಮಾಡಬೇಕೆಂದಿದ್ದ ಆಸ್ತಿಯ ಬೆಲೆಯು ಕಡಿಮೆಯಾಗಬಹುದು. ಮಕ್ಕಳು ಓದಲು ವಿದೇಶಕ್ಕೆಹೋಗಬೇಕೆನ್ನುವ ಆಸೆ ಪೂರೈಸುವ ಸಾಧ್ಯತೆ ಇದೆ. ಸಂಗಾತಿಯಿಂದ ಖರ್ಚುಗಳು ಹೆಚ್ಚಾಗ ಬಹುದು. ವಿದೇಶ ವ್ಯವಹಾರ ಮಾಡುವವರಿಗೆ ಸ್ವಲ್ಪ ಕಾನೂನಿನ ತೊಡಕುಗಳು ಬಂದರೂ ಸಹ ನಂತರ ನಿವಾರಣೆಯಾಗುತ್ತದೆ. ಸರ್ಕಾರಿ ಸಂಸ್ಥೆಗಳೊಡನೆ ವ್ಯವಹಾರ ಮಾಡುವವರಿಗೆ ವ್ಯವಹಾರ ಹೆಚ್ಚಾಗುತ್ತದೆ. ಸ್ತ್ರೀಯರ ಅಭಿವೃದ್ಧಿಯಲ್ಲಿ ನಿಧಾನ ಗತಿಯನ್ನು ಕಾಣಬಹುದು. ಅನುವಂಶಿಯ ವ್ಯಾಪಾರಗಳಲ್ಲಿ ಹೆಚ್ಚಿನ ಲಾಭವಿರುತ್ತದೆ.
ಕನ್ಯಾ
ಉದ್ಯೋಗಸ್ಥರಿಗೆ ಮೇಲಧಿಕಾರಿಗಳ ಸಹಾಯ ಹಸ್ತ ದೊರೆಯುತ್ತದೆ. ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ಸಂಸ್ಥೆಯ ಮುಖ್ಯಸ್ಥರಾಗುವ ಯೋಗ ವಿದೆ. ಹಣದ ಒಳಹರಿವು ಮಧ್ಯಮ ಗತಿಯಲ್ಲಿರುತ್ತದೆ. ನಿಮ್ಮ ನಡವಳಿಕೆಯಿಂದ ಶತ್ರುಗಳನ್ನು ಸಂಪಾದನೆ ಮಾಡುವಿರಿ. ಆಸ್ತಿ ಮಾಡುವ ವಿಚಾರಗಳಲ್ಲಿ ಸಾಕಷ್ಟು ಗೊಂದಲಗಳಿರುತ್ತವೆ. ಮಕ್ಕಳ ಮನಸ್ಸನ್ನು ಅರಿಯಲು ಕಷ್ಟ ಪಡಬೇಕಾದೀತು. ಯಾವುದೋ ಒಂದು ಚಿಂತೆ ಕಾಡತೊಡಗುತ್ತದೆ. ಸರ್ಕಾರಿ ಸಂಸ್ಥೆಗಳಿಗೆ ಕಚ್ಚಾ ಮಾಲನ್ನು ಪೂರೈಸುವ ವ್ಯಕ್ತಿಗಳಿಗೆ ಹೆಚ್ಚಿನ ಪೂರೈಕೆ ಆದೇಶ ದೊರೆಯುತ್ತದೆ. ವೃತ್ತಿಯಲ್ಲಿ ಚಾಣಾಕ್ಷತನ ದಿಂದ ನಿಮ್ಮ ಕೆಲಸದ ಹೊರೆಯನ್ನು ಬೇರೆಯವರಿಗೆ ವರ್ಗಾಯಿಸುವಿರಿ. ಆಧುನಿಕ ಕೃಷಿಯನ್ನು ಮಾಡುವ ವರಿಗೆ ಸೂಕ್ತ ಸಹಾಯಧನಗಳು ದೊರೆಯುತ್ತವೆ. ಸ್ವಂತ ಆರೋಗ್ಯದ ಬಗ್ಗೆ ಎಚ್ಚರ ಇರಲಿ.
ತುಲಾ
ರಿಯಲ್ ಎಸ್ಟೇಟ್ ಉದ್ಯಮದವರಿಗೆ ಹೆಚ್ಚು ವ್ಯವಹಾರವಾಗಿ ಹೆಚ್ಚಿನ ಹಣ ಸಂಗ್ರಹವಾಗುತ್ತದೆ. ಪುಸ್ತಕ ವ್ಯಾಪಾರಿಗಳಿಗೆ ಹೆಚ್ಚಿನ ವ್ಯವಹಾರ ಆಗುವ ಸಾಧ್ಯತೆ ಇದೆ. ವಿದೇಶಿ ಚಾನೆಲ್ಗಳ ವಾರ್ತಾ ಏಜೆಂಟರು ಗಳಿಗೆ ಬೇಡಿಕೆಹೆಚ್ಚುತ್ತದೆ. ಹಣದಒಳಹರಿವು ಮಧ್ಯಮ ಗತಿಯಲ್ಲಿರುತ್ತದೆ. ಯುವಕರಿಗೆ ಹೊಸಹುದ್ದೆಯೊಂದು ದೊರೆಯುವ ಸಂದರ್ಭವಿದೆ. ಕಮಿಷನ್ ವ್ಯಾಪಾರ ಮಾಡುವವರಿಗೆ ಹೆಚ್ಚಿನ ಹಣ ದೊರೆಯುತ್ತದೆ. ಔಷಧಿ ತಯಾರಿಕ ಕಂಪನಿಗಳಿಗೆ ಹೆಚ್ಚುವ್ಯವಹಾರವಾಗಿ ಲಾಭ ಹೆಚ್ಚುತ್ತದೆ. ಕೃಷಿಉತ್ಪನ್ನಗಳಿಗೆ ಹೆಚ್ಚಿನಬೆಲೆ ದೊರೆಯು ತ್ತದೆ. ಸಾಹಸ ಕಲಾವಿಧರುಗಳಿಗೆ ಹೆಚ್ಚು ಅವಕಾಶ ದೊರೆತು ಧನಸಂಪಾದನೆಯಾಗುತ್ತದೆ. ನಿಮ್ಮ ಕೆಲವೊಂದು ಕಾರ್ಯಗಳಿಗೆ ಅಡ್ಡಿಗಳಾಗಬಹುದು. ಚಿತ್ರರಂಗದ ಕಥೆ ಬರೆಯುವವರಿಗೆ ಹೆಚ್ಚು ಕೆಲಸ ದೊರೆತು ಸಂಪಾದನೆ ಯಾಗುತ್ತದೆ.
ವೃಶ್ಚಿಕ
ಅನಿರೀಕ್ಷಿತವಾಗಿ ಸಂಪಾದನೆ ಮಾಡಲು ಕೆಲವೊಂದು ಉತ್ತಮ ಅವಕಾಶಗಳು ದೊರೆಯುತ್ತವೆ ಅವುಗಳನ್ನು ಸರಿಯಾಗಿಬಳಸಿಕೊಳ್ಳಿರಿ.ಆಸ್ತಿಖರೀದಿಗೆ ಮುನ್ನ ಸರಿಯಾಗಿ ದಾಖಲೆಗಳನ್ನು ಪರಿಶೀಲಿಸಿರಿ. ಸಕ್ರಿಯವಾಗಿ ಕೆಲಸಕಾರ್ಯಗಳನ್ನುಮಾಡಿಸಂತೋಷ ಪಡುವಿರಿ. ಅಧಿಕಾರಿ ಜನರು ಆತ್ಮ ವಿಶ್ವಾಸಕ್ಕೆ ಧಕ್ಕೆ ತರುವಂತ ಮಾತುಗಳನ್ನಾಡಬಹುದು. ಅನಿರೀಕ್ಷಿತ ವಾಗಿ ವಾಹನ ಖರೀದಿಗೆ ಮುಂದಾಗುವಿರಿ. ಹೂಡಿಕೆ ಬಂಡವಾಳಗಳಿಂದ ಲಾಭ ಬರುತ್ತದೆ. ಧನದಾಯವು ಮಂದಗತಿಯಲ್ಲಿರುತ್ತದೆ. ಜೀವನದಲ್ಲಿ ಸಹಾಯ ಮಾಡಬಲ್ಲ ವ್ಯಕ್ತಿಗಳೊಂದಿಗೆ ಸ್ನೇಹ ಸಂಬಂಧಗಳು ಬೆಳೆಯುತ್ತವೆ. ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಕೆಲಸದ ಒತ್ತಡಗಳ ಕಡಿಮೆಯಾಗಿ ಸಂಪಾದನೆ ಹೆಚ್ಚುತ್ತದೆ. ಸ್ವಂತ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಇರಲಿ.
ಧನು
ಸಂಸಾರಿಕವಾಗಿ ಸದ್ಯದ ಪರಿಸ್ಥಿತಿಯಲ್ಲಿ ಕುಟುಂಬದೊಡನೆ ಸರಿಯಾಗಿ ಹೊಂದಿಕೊಂಡು ಹೋಗುವಿರಿ. ಸಂಬಂಧಗಳಿಗೆ ಅತಿ ಹೆಚ್ಚುಬೆಲೆ ಕೊಡು ವಿರಿ. ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುವುದ ರಿಂದ ಹೆಚ್ಚು ಸಂತೋಷವಾಗುತ್ತದೆ. ಬದುಕಿನಲ್ಲಿ ಉನ್ನತಸ್ಥಾನಕ್ಕೆ ಏರಲು ಸಾಕಷ್ಟು ಪ್ರಯತ್ನ ಪಡುವಿರಿ. ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯುವಕಾಲ. ಸರಕು ಸಾಗಣೆ ಮಾಡುವವರಿಗೆ ಹೆಚ್ಚಿನ ಸಾಗಾಣಿಕೆ ಆದೇಶ ಗಳು ದೊರೆಯುತ್ತದೆ. ಭಾರಿ ವಾಹನ ತಯಾರಕರಿಗೆ ವ್ಯವಹಾರ ವೃದ್ಧಿಸುತ್ತದೆ. ಮೇಲಧಿಕಾರಿಗಳಿಗೆ ನೀವು ಕೊಟ್ಟ ಲೆಕ್ಕಪತ್ರಗಳ ಬಗ್ಗೆ ವಿಶ್ವಾಸ ಹಾಗೂ ನಂಬಿಕೆ ಮೂಡುತ್ತದೆ. ರಕ್ತ ಸಂಬಂಧಿ ಕಾಯಿಲೆ ಇರುವವರು ಎಚ್ಚರವಹಿಸಿರಿ. ಸಂಗಾತಿಗೆ ಆಸ್ತಿ ದೊರೆಯುವ ಸಂದರ್ಭವಿದೆ. ಧರ್ಮ ಪ್ರಚಾರಕರಿಗೆ ಬೇಡಿಕೆ ಹೆಚ್ಚುತ್ತದೆ.
ಮಕರ
ಸಮಸ್ಯೆಗಳನ್ನು ನಾಜೂಕಾಗಿ ಬಗ್ಗೆ ಹರಿಸಿಕೊಳ್ಳುವ ಕಡೆಗೆ ಗಮನ ಕೊಡುವುದು ಅಗತ್ಯ. ಸ್ನೇಹಿತರೊಡ ಗೂಡಿ ಮಾಡಿದ ವ್ಯಾಪಾರಗಳಲ್ಲಿ ಹೆಚ್ಚಿನ ಲಾಭ ಬರುತ್ತದೆ. ಸರ್ಕಾರಿ ಸಂಸ್ಥೆಗಳಿಗೆ ಗುತ್ತಿಗೆ ಆಧಾರಿತ ವ್ಯಕ್ತಿಗಳನ್ನು ಪೂರೈಸುವವರಿಗೆ ಹೆಚ್ಚುತ್ತದೆ. ಧನಾದಾ ಯವು ಸಾಮಾನ್ಯ ಗತಿಯಲ್ಲಿರುತ್ತದೆ. ಮಕ್ಕಳ ವಿಷಯ ದಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣಬಹುದು. ನಿಮ್ಮ ಸಂಗಾತಿಯು ಮಾಡುವ ಭೂಮಿಯವ್ಯವಹಾರಗಳಲ್ಲಿ ಹೆಚ್ಚಿನ ಲಾಭವನ್ನು ಕಾಣಬಹುದು. ಋಣಭಾರದಿಂದ ಮುಕ್ತವಾಗಲು ಹೆಚ್ಚು ಶ್ರಮವಹಿಸಿ ಸಂಪಾದನೆಯ ಮಾಡುವಿರಿ. ಬಡಗಿ ಕೆಲಸ ಮಾಡುವವರಿಗೆ ಕೈತುಂಬ ಕೆಲಸ ದೊರೆಯುತ್ತದೆ. ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಹೆಚ್ಚಿನ ವ್ಯಾಪಾರವಿರುತ್ತದೆ. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿದವರಿಗೆ ಹೆಚ್ಚು ಧನಸಂಗ್ರಹ ವಿರುತ್ತದೆ.
ಕುಂಭ
ವಿಚಾರಗಳನ್ನು ವಿವಾದಕ್ಕೆ ಒಳಗಾಗದಂತೆ ಜನರಿಗೆ ಅರ್ಥ ಮಾಡಿಸುವಲ್ಲಿ ಹಿರಿಯರು ಯಶಸ್ವಿ ಯಾಗುವರು. ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯನ್ನು ಕಂಡು ಸಮಾಧಾನಗೊಳ್ಳುವಿರಿ. ವಿಮಾ ಸಲಹೆಗಾರ ರಿಗೆ ಹೆಚ್ಚಿನ ವ್ಯವಹಾರ ನಡೆಯುತ್ತದೆ. ಕೌಟುಂಬಿಕ ಸಮಸ್ಯೆಗಳನ್ನು ಸರಾಗವಾಗಿ ಬಗೆಹರಿಸುವಿರಿ. ಕಟ್ಟಡ ವಿನ್ಯಾಸ ಮಾಡುವವರಿಗೆ ಒಳ್ಳೆಯ ಹೆಸರು ಬರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಸರ್ಕಾರಿ ವ್ಯಾಪಾರ ವ್ಯವಹಾರಗಳಲ್ಲಿ ಭಾಗವಹಿಸಲು ಅವಕಾಶ ದೊರೆಯುತ್ತದೆ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. ಬಹುಕಾಲ ದಿಂದ ಅನಾರೋಗ್ಯದಿಂದ ಬಳಲುತ್ತಿರುವವರು ಈಗ ಚೇತರಿಕೆಯನ್ನು ಕಾಣಬಹುದು. ವ್ಯಾಪಾರ ವ್ಯವಹಾರ ಮಾಡುವವರು ಲಾಭದ ಕಡೆಗೆ ಹೆಚ್ಚುಗಮನ ಕೊಡಿರಿ. ಪ್ರೀತಿ ಪ್ರೇಮಗಳು ಫಲ ಕೊಡುವ ಸಾಧ್ಯತೆ ಕಡಿಮೆ.
ಮೀನ
ವೈಯಕ್ತಿಕ ವಿಷಯಗಳ ಬಗ್ಗೆ ಹೆಚ್ಚಿನ ಗಮನ ಕೊಡುವುದು ಅಗತ್ಯ. ಅನವಶ್ಯಕ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳಬೇಡಿರಿ. ಧನಾದಾಯವು ನಿಮ್ಮ ನಿರೀಕ್ಷೆಯ ಹತ್ತಿರ ಬರುತ್ತದೆ. ರಸ್ತೆ ಗುತ್ತಿಗೆದಾರರಿಗೆ ಗುತ್ತಿಗೆಯ ಬಾಕಿ ಹಣ ಬರುತ್ತದೆ. ಮನೆ ನವೀಕರಣಕ್ಕೆ ಕೈ ಹಾಕುವ ಮುನ್ನ ಪೂರ್ವಸಿದ್ಧತೆ ಮಾಡಿಕೊಳ್ಳಿರಿ. ಸ್ವಂತ ವ್ಯವಹಾರ ನಡೆಸುವವರಿಗೆ ಸ್ವಲ್ಪಮಟ್ಟಿನ ಶ್ರಮ ಹೆಚ್ಚಾಗಬಹುದು. ಹಿರಿಯರಿಂದ ನಿಮ್ಮ ಕೆಲಸಗಳಿಗೆ ಸಹಕಾರ ದೊರೆಯುತ್ತದೆ. ವಿದೇಶಗಳಿಗೆ ಆಮದು ಮತ್ತು ರಫ್ತುಮಾಡುವವರಿಗೆ ವ್ಯವಹಾರಹೆಚ್ಚಾಗುತ್ತದೆ. ಕೃಷಿವಿಜ್ಞಾನವನ್ನು ಓದುತ್ತಿರುವವರಿಗೆ ಸಾಕಷ್ಟು ಏಳಿಗೆ ಇರುತ್ತದೆ. ಕಾಲು ನೋವುಗಳು ಕೆಲವರಿಗೆ ಸಾಕಷ್ಟು ಕಾಡಬಹುದು. ತಾಯಿಯ ಕಡೆಯಿಂದ ಸಹಾಯಗಳು ದೊರೆಯಬಹುದು. ನ್ಯಾಯಮೂರ್ತಿಗಳಿಗೆ ನ್ಯಾಯದಾನ ಮಾಡುವ ಮಾಡುವಾಗ ಮುಜುಗರ ಏರ್ಪಡಬಹುದು.