ವಾರ ಭವಿಷ್ಯ: 07-9-2025ರಿಂದ 13-9-2025 ರವರೆಗೆ; ಉದ್ಯೋಗದಲ್ಲಿರುವವರಿಗೆ ಅನುಕೂಲ
Published 6 ಸೆಪ್ಟೆಂಬರ್ 2025, 18:35 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
ಆರಂಭದಲ್ಲಿ ಸ್ವಲ್ಪ ಅನಾರೋಗ್ಯ ಇರಬಹುದು. ಮನಸ್ಸಿನಲ್ಲಿ ಕೋಪ ತುಂಬಿಕೊಂಡಿರುತ್ತದೆ. ಆದಾಯವು ಕಡಿಮೆಯಿದ್ದು, ಖರ್ಚು ಹೆಚ್ಚಾಗುವ ಸಂದರ್ಭವಿದೆ. ಹಿರಿಯರ ಸಹಕಾರ ಗಳಿಸಿಕೊಳ್ಳಲು ಪ್ರಯತ್ನಪಡುವಿರಿ. ಭೂಮಿಯ ವ್ಯಾಪಾರ ಮಾಡುವವರಿಗೆ ಲಾಭ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಮಿಶ್ರಫಲವಿರುತ್ತದೆ. ಅತಿ ಉಷ್ಣದಿಂದ ಆರೋಗ್ಯ ವ್ಯತ್ಯಾಸವಾಗಬಹುದು. ಸಂಗಾತಿಯ ಸಹಕಾರದಿಂದ ಸಂಸಾರದಲ್ಲಿ ಈಗ ಸಂತೋಷ ಹೆಚ್ಚುತ್ತದೆ. ಕೃಷಿಯಿಂದ ನಿರೀಕ್ಷಿತ ಲಾಭ ಬರುವ ಸಾಧ್ಯತೆ ಇದೆ. ಸಂಗಾತಿಯು ಸಂಸಾರಕ್ಕಾಗಿ ಹೆಚ್ಚು ಹಣ ಖರ್ಚುಮಾಡುವರು.
ವೃಷಭ
ಆದಾಯವು ಉತ್ತಮವಾಗಿರುತ್ತದೆ. ನಿಮ್ಮೆಲ್ಲಾ ಕೆಲಸಗಳಿಗೆ ಸಹೋದರಿಯರಿಂದ ಸಹಕಾರ ಸಿಗುತ್ತದೆ. ಭೂಮಿ ವ್ಯಾಪಾರ ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ. ಕ್ರೀಡಾಪಟುಗಳಿಗೆ ಹೆಚ್ಚಿನ ತರಬೇತಿ ಮತ್ತು ಸೌಕರ್ಯ ದೊರೆಯುತ್ತದೆ. ಸ್ತ್ರೀಯರ ನಡುವೆ ನಡೆಯುವ ವ್ಯವಹಾರಗಳು ನಷ್ಟಕ್ಕೆ ಕಾರಣವಾಗಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ ಇರುತ್ತದೆ. ಹಿರಿಯರಿಗಾಗಿ ಸ್ವಲ್ಪ ಹಣ ಖರ್ಚಾಗುವುದು. ವಿದೇಶದಲ್ಲಿ ಉದ್ಯೋಗದಲ್ಲಿರುವವರಿಗೆ ಅನುಕೂಲ ಹೆಚ್ಚುತ್ತದೆ.
ಮಿಥುನ
ಬಹಳ ಗೌರವಯುತವಾದ ನಡವಳಿಕೆ ಇರುತ್ತದೆ. ಸಮಾಜದಿಂದ ನಿಮಗೆ ಹೆಚ್ಚು ಗೌರವ ದೊರೆಯುತ್ತದೆ. ಆದಾಯವು ಉತ್ತಮವಾಗಿರುತ್ತದೆ. ಮಹಿಳೆಯರ ಆದಾಯವು ಹೆಚ್ಚಾಗುವುದು. ಹಿರಿಯರು ವ್ಯಾಪಾರ ವ್ಯವಹಾರಗಳಲ್ಲಿ ನಿಮಗೆ ಸಹಕಾರ ನೀಡುವವರು. ಹೆಚ್ಚು ಭೂಮಿಯನ್ನು ಕೊಳ್ಳುವ ಯೋಗವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶವನ್ನು ಪಡೆಯುವ ಯೋಗವಿದೆ. ಕೃಷಿಗಾಗಿ ಹೆಚ್ಚು ಹಣ ಖರ್ಚಾಗುವುದು. ಸಂಗಾತಿಯ ಆದಾಯದಲ್ಲೂ ಏರಿಕೆಯನ್ನು ಕಾಣಬಹುದು. ವೃತ್ತಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗುವ ಸಂದರ್ಭವಿದೆ.
ಕರ್ಕಾಟಕ
ವಾರದ ಆರಂಭ ಬಹಳ ಆನಂದದಾಯಕವಾಗಿರುತ್ತದೆ. ಆದಾಯವು ನಿರೀಕ್ಷೆಯ ಹತ್ತಿರ ಬರುತ್ತದೆ. ಕೆಲವೊಂದು ಕೆಲಸಗಳಿಗೆ ಬಂಧುಗಳ ಪ್ರತಿರೋಧ ಎದುರಾಗಬಹುದು. ವಿದ್ಯಾರ್ಥಿಗಳಿಗೆ ಕಷ್ಟಕ್ಕೆ ತಕ್ಕ ಫಲವಿರುತ್ತದೆ. ದೇಹದಲ್ಲಿ ಪಿತ್ತ ಜಾಸ್ತಿಯಾಗಿ ಆರೋಗ್ಯದಲ್ಲಿ ವ್ಯತ್ಯಾಸಗಳು ಕಾಣಿಸಬಹುದು. ಸಂಗಾತಿಯು ಈಗ ಕೆಲಸ ಕಾರ್ಯಗಳಿಗೆ ಹೆಚ್ಚಿನ ಸಹಕಾರ ನೀಡುವರು. ವಿದೇಶಕ್ಕೆ ಹಾಲಿನ ಉತ್ಪನ್ನಗಳನ್ನು ರಫ್ತು ಮಾಡುವವರಿಗೆ ಲಾಭ ಹೆಚ್ಚುವುದು. ವೃತ್ತಿಯಲ್ಲಿ ಹೆಚ್ಚು ಕೆಲಸ ಮಾಡಿ ಎಲ್ಲರ ಮೆಚ್ಚುಗೆ ಗಳಿಸುವಿರಿ.
ಸಿಂಹ
ಸ್ವಾಭಿಮಾನ ಹೆಚ್ಚಾಗಿರುತ್ತದೆ. ಆದಾಯವು ತಕ್ಕಮಟ್ಟಿಗೆ ಇರುತ್ತದೆ. ಕೃಷಿಯಿಂದ ಹೆಚ್ಚಿನ ಆದಾಯವಿರುತ್ತದೆ. ಸಹೋದರಿಯರಿಗಾಗಿ ಹಣ ಖರ್ಚಾಗುತ್ತದೆ. ಕೃಷಿಭೂಮಿಯನ್ನು ಕೊಳ್ಳುವ ಯೋಗವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಕೀಲು ನೋವು ಕಾಣಿಸಬಹುದು. ವಿದೇಶದಲ್ಲಿರುವ ಸಂಗಾತಿಯನ್ನು ಈಗ ಹೋಗಿ ಸೇರಿಕೊಳ್ಳಬಹುದು. ಕಬ್ಬಿಣದ ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭವಿರುತ್ತದೆ. ಹಿರಿಯರ ಆಸ್ತಿಯಿಂದ ಆದಾಯವನ್ನು ಕಾಣಬಹುದು.
ಕನ್ಯಾ
ಮನಸ್ಸಿನಲ್ಲಿ ಕೋಪ ತುಂಬಿಕೊಂಡಿರುತ್ತದೆ. ಆದಾಯವು ಕಡಿಮೆ ಇದ್ದು ಖರ್ಚು ಹೆಚ್ಚಾಗುವ ಸಂದರ್ಭವಿದೆ. ಹಿರಿಯರ ಸಹಕಾರ ಗಳಿಸಿಕೊಳ್ಳಲು ಪ್ರಯತ್ನಪಡುವಿರಿ. ಭೂಮಿಯ ವ್ಯಾಪಾರ ಮಾಡುವವರಿಗೆ ಲಾಭ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಮಿಶ್ರಫಲವಿರುತ್ತದೆ.ಅತಿ ಉಷ್ಣದಿಂದ ಆರೋಗ್ಯ ವ್ಯತ್ಯಾಸವಾಗಬಹುದು. ನಿಮ್ಮ ಸಂಗಾತಿಯ ಸಹಕಾರದಿಂದ ಸಂಸಾರದಲ್ಲಿ ಈಗ ಸಂತೋಷ ಹೆಚ್ಚುತ್ತದೆ. ಕೃಷಿಯಿಂದ ನಿರೀಕ್ಷಿತ ಲಾಭ ಬರುವ ಸಾಧ್ಯತೆ ಇದೆ. ಉದ್ಯೋಗದ ಸ್ಥಳದಲ್ಲಿ ಸ್ವಲ್ಪ ಒತ್ತಡಗಳಿರುತ್ತವೆ.
ತುಲಾ
ಸಂಗೀತಗಾರರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಆದಾಯದಷ್ಟೇ ಖರ್ಚೂ ಇರುತ್ತದೆ. ಹೊರದೇಶದಲ್ಲಿ ಇದ್ದವರು ಈಗ ಸ್ಥಿರಾಸ್ತಿಯನ್ನು ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ಮಾತ್ರ ಇರುತ್ತದೆ. ಬಂಧುಗಳ ನಡುವೆ ನಡೆದ ಹಣಕಾಸಿನ ವ್ಯವಹಾರದಲ್ಲಿ ನಿಮಗೆ ಲಾಭವಾಗುತ್ತದೆ. ಹಿರಿಯರಿಂದ ಆರ್ಥಿಕ ಸಹಾಯವನ್ನು ನಿರೀಕ್ಷೆ ಮಾಡಬಹುದು. ವೃತ್ತಿಯಲ್ಲಿ ಅನುಕೂಲಗಳು ಹೆಚ್ಚಾಗುತ್ತವೆ. ಸರ್ಕಾರಿ ವ್ಯವಹಾರಗಳಲ್ಲಿ ಲಾಭವು ನಿರೀಕ್ಷೆಗಿಂತ ಹೆಚ್ಚಾಗುತ್ತದೆ.
ವೃಶ್ಚಿಕ
ಕ್ರೀಡಾಪಟುಗಳಿಗೆ ಹೆಚ್ಚು ಅವಕಾಶಗಳು ದೊರೆಯುತ್ತವೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಬಂಧುಗಳಿಂದ ಸಾಕಷ್ಟು ಪ್ರತಿರೋಧವನ್ನು ಕಾಣಬಹುದು. ವಾಯುಯಾನ ಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವವರಿಗೆ ಸಾಕಷ್ಟು ಅಭಿವೃದ್ಧಿ ಇರುತ್ತದೆ. ಬಂಧುಗಳ ಜೊತೆ ಹಣಕಾಸಿನ ವ್ಯವಹಾರಗಳು ಬೇಡ. ಸಂಗಾತಿಯ ಕಡೆಯ ಹಿರಿಯರಿಂದ ನಿಮಗೆ ಹೆಚ್ಚು ಅನುಕೂಲಗಳಾಗುತ್ತವೆ. ಕೆಲವರಿಗೆ ಅನಿರೀಕ್ಷಿತ ಆದಾಯ ಇರುತ್ತದೆ. ವೃತ್ತಿಯಲ್ಲಿ ಹೆಚ್ಚು ಅನುಕೂಲಗಳನ್ನು ಕಾಣಬಹುದು.
ಧನು
ಗೌರವಯುತವಾಗಿ ಇರಲು ಬಯಸುವಿರಿ. ಆದಾಯವು ಸಾಮಾನ್ಯವಾಗಿರುತ್ತದೆ. ಹಣಕಾಸಿನ ವ್ಯವಹಾರಗಳು ಸದ್ಯಕ್ಕೆ ಖಂಡಿತ ಬೇಡ. ತಾಯಿಯಿಂದ ನಿಮ್ಮ ಕೆಲಸಕಾರ್ಯಗಳಿಗೆ ಸಹಕಾರ ದೊರೆಯುತ್ತದೆ. ಕೃಷಿಭೂಮಿಯನ್ನು ಕೊಳ್ಳಬಹುದು. ಮಹಿಳೆಯರ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಸಂಗಾತಿ ಆದಾಯದಲ್ಲಿ ಏರಿಕೆ ಉಂಟಾಗುತ್ತದೆ. ಆಭರಣ ಮಾರಾಟಗಾರರಿಗೆ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ಉದ್ಯೋಗದಲ್ಲಿ ನಿಮ್ಮ ಸಾಮರ್ಥ್ಯವನ್ನು ತೋರಿಸುವಿರಿ ಮತ್ತು ಅಧಿಕಾರಿಗಳ ಗಮನವನ್ನು ಸೆಳೆಯುವಿರಿ.
ಮಕರ
ವಾರದ ಆರಂಭ ಆಲಸ್ಯದಿಂದ ಕೂಡಿರುತ್ತದೆ. ಆದಾಯದಲ್ಲಿ ಸ್ವಲ್ಪ ಚೇತರಿಕೆಯನ್ನು ಕಾಣಬಹುದು. ವಿದೇಶಿ ವ್ಯವಹಾರ ಮಾಡುವವರ ಆದಾಯ ಹೆಚ್ಚುತ್ತದೆ. ಶತ್ರುಗಳನ್ನು ಪರಾಕ್ರಮದಿಂದ ಎದುರಿಸುವಿರಿ. ಶ್ರಮಪಟ್ಟು ಕೆಲಸ ಮಾಡಿ ಎಲ್ಲರ ಗಮನವನ್ನು ಸೆಳೆಯುವಿರಿ. ಹಿರಿಯರ ಜಮೀನು ಕೊಳ್ಳುವ ಸಾಧ್ಯತೆ ಕೆಲವರಿಗೆ ಇದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ವೈದ್ಯರುಗಳಿಗೆ ಬೇಡಿಕೆ ಹೆಚ್ಚುತ್ತದೆ. ಸಂಗಾತಿಯ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು.
ಕುಂಭ
ಯುವಕರ ನಡವಳಿಕೆಯಲ್ಲಿ ದ್ವಂದ್ವ ನೀತಿ ಇರುತ್ತದೆ. ಆದಾಯವು ಕಡಿಮೆ ಇರುತ್ತದೆ. ರಾಜಕೀಯ ಮುಖಂಡರುಗಳು ಮಾತನಾಡುವಾಗ ಬಹಳ ಎಚ್ಚರಿಕೆ ಇರಲಿ. ಸ್ಥಿರಾಸ್ತಿ ಖರೀದಿ ವಿಚಾರದಲ್ಲಿ ಸಾಕಷ್ಟು ಎಚ್ಚರಿಕೆ ಇರಲಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಸ್ತ್ರೀರೋಗ ತಜ್ಞರಿಗೆ ಬೇಡಿಕೆ ಹೆಚ್ಚಾಗುತ್ತದೆ. ಸಂಗಾತಿಯ ಸಹಾಯದಿಂದ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ ಇರುತ್ತದೆ. ಅನಿರೀಕ್ಷಿತವಾಗಿ ಕೆಲವು ವ್ಯಾಪಾರಗಳಲ್ಲಿ ಪಾಲುದಾರಿಕೆ ದೊರೆಯುತ್ತದೆ.
ಮೀನ
ಬಹಳ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಅವಮಾನಕರ ಘಟನೆಗಳು ನಡೆಯಬಹುದು. ಆದಾಯವು ಈಗ ಕಡಿಮೆ ಇರುತ್ತದೆ. ಸಹೋದರಿಯರಿಂದ ಹೆಚ್ಚು ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಈಗ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಉಸಿರಾಟದ ತೊಂದರೆ ಮತ್ತು ಕಣ್ಣಿನ ತೊಂದರೆ ಇರುವವರು ಎಚ್ಚರ ವಹಿಸಿರಿ. ಕೃಷಿಗೆ ಹೂಡಿದ್ದ ಹಣ ನಷ್ಟವಾಗಬಹುದು. ಆಭರಣ ತಯಾರಕರಿಗೆ ಅನಿರೀಕ್ಷಿತ ಲಾಭ ಬರುತ್ತದೆ. ಉದ್ಯೋಗದಲ್ಲಿ ಏಳಿಗೆ ಇರುತ್ತದೆ.