ಸರ್ಕಾರದ ಹಿಂದಿನ ದಾಖಲೆ ನೋಡಿದರೆ ಬಜೆಟ್ ಬಡವರ ನೋವು ಕಡಿಮೆ ಮಾಡುವ ಸಾಧ್ಯತೆ ಕಡಿಮೆ
– ಕಪಿಲ್ ಸಿಬಲ್ ರಾಜ್ಯಸಭಾ ಸದಸ್ಯ
ರಾಜ್ಯಗಳಿಗೆ ಏನು ಸಿಗಲಿದೆ?
16ನೇ ಹಣಕಾಸು ಆಯೋಗದ ಶಿಫಾರಸುಗಳ ಅನುಷ್ಠಾನವನ್ನು ಹಣಕಾಸು ಸಚಿವರು ಬಜೆಟ್‌ನಲ್ಲಿ ಘೋಷಿಸುವುದರಿಂದ ರಾಜ್ಯಗಳು ತಮ್ಮ ಪಾಲಿಗಾಗಿ ಕಾತರದಿಂದ ಕಾಯುತ್ತಿವೆ. ಕೇಂದ್ರವು ಸಂಗ್ರಹಿಸಿದ ತೆರಿಗೆ ಆದಾಯದಲ್ಲಿ ರಾಜ್ಯಗಳ ಪಾಲು ಈ ಪಾಲನ್ನು ರಾಜ್ಯಗಳಿಗೆ ವಿತರಿಸುವುದು ಮತ್ತು ಐದು ವರ್ಷಗಳ ಅವಧಿಗೆ (2026–27 ರಿಂದ 2030–31ರವರೆಗೆ) ವಿಶೇಷ ಅನುದಾನವನ್ನು ಹಣಕಾಸು ಆಯೋಗವು ಶಿಫಾರಸು ಮಾಡುತ್ತದೆ.
ಪರಿಷ್ಕರಿಸುತ್ತದೆಯೇ?
ಬಜೆಟ್ ಮಂಡನೆಗೆ ಎರಡು ದಿನ ಬಾಕಿ ಇದ್ದಾಗಲೇ ಕೇಂದ್ರ ಸರ್ಕಾರ ಜಿಡಿಪಿ ದರ ಮತ್ತು ಗ್ರಾಹಕ ಬೆಲೆ ಸೂಚ್ಯಂಕವನ್ನು (ಸಿಪಿಐ) ಪರಿಷ್ಕರಿಸಿದಂತೆ ಬಜೆಟ್ ಅಂಕಿ ಅಂಶಗಳನ್ನೂ ಪರಿಷ್ಕರಿಸುತ್ತದೆಯೇ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಪ್ರಶ್ನಿಸಿದ್ದಾರೆ. ‘ಬಜೆಟ್ ಪೂರ್ವದಲ್ಲಿನ ಜಿಡಿಪಿ ಪರಿಷ್ಕರಣೆಯು ನೀತಿ ನಿರೂಪಣೆಯ ಮೇಲೆ ಕೆಟ್ಟದಾದ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.