ಸಿಂಗಪುರ (ಎಎಫ್ಪಿ): ಕಳೆದ ಕೆಲವು ದಿನಗಳಿಂದ ಏಷ್ಯಾ ಮಾರುಕಟ್ಟೆಯಲ್ಲಿ ಇಳಿಮುಖವಾಗಿದ್ದ ಕಚ್ಚಾ ತೈಲ ಬೆಲೆ ಮಂಗಳವಾರ ಚೇತರಿಕೆ ಹಾದಿಗೆ ಮರಳಿದೆ. ಅಮೆರಿಕ ಬೆಂಚ್ಮಾರ್ಕ್ನ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (ಡಬ್ಲ್ಯುಟಿಐ) ದರ್ಜೆ ಕಚ್ಚಾ ತೈಲದ ಬೆಲೆ 32 ಸೆಂಟ್ಗಳಷ್ಟು ಹೆಚ್ಚಿದ್ದು, ಬ್ಯಾರೆಲ್ಗೆ 49.91 ಡಾಲರ್ನಷ್ಟಾಗಿದೆ. ಬ್ರೆಂಟ್ ಕಚ್ಚಾ ತೈಲವೂ ಕೂಡಾ 77 ಸೆಂಟ್ಗಳಷ್ಟು ಏರಿಕೆಯಾಗಿದ್ದು, ಬ್ಯಾರೆಲ್ಗೆ 60.31 ಡಾಲರ್ಗೆ ತಲುಪಿದೆ.

ಅಮೆರಿಕದಲ್ಲಿ ಪ್ರಮುಖ ಮೂರು ತೈಲ ಸಂಸ್ಕರಣಾಗಾರದ ಕಾರ್ಮಿಕರು ಮುಷ್ಕರ ಕೈಬಿಡಲು ನಿರ್ಧರಿಸಿರುವುದರಿಂದ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ವೇತನ ಹೆಚ್ಚಳ ಮಾಡುವಂತೆ ಮತ್ತು ಸಂಶೋಧನಾಗಾರದಲ್ಲಿ ಸೂಕ್ತ ಸುರಕ್ಷತೆ ಕಲ್ಪಿಸುವಂತೆ ಒತ್ತಾಯಿಸಿ ರಾಯಲ್ ಡಚಸ್ ಶೆಲ್ ಸಮೂಹದ ಪ್ರಮುಖ ಮೂರು ತೈಲ ಸಂಶೋಧನಾಗಾರದಲ್ಲಿನ 5 ಸಾವಿರಕ್ಕೂ ಅಧಿಕ ಕಾರ್ಮಿಕರು ಫೆಬ್ರುವರಿ 1ರಿಂದ ಮುಷ್ಕರ ಆರಂಭಿಸಿದ್ದರು.

ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದ್ದು, ಬೇಡಿಕೆ ಈಡೇರಿಸುವ ಭರವಸೆ ನೀಡದೆ. ಹೀಗಾಗಿ ಬುಧವಾರದಿಂದ ಕೆಲಸಕ್ಕೆ ಹಾಜರಾಗಲು ಕಾರ್ಮಿಕರು ಒಪ್ಪಿದ್ದಾರೆ ಎಂದು ರಾಯಲ್ ಡಚಸ್ ಶೆಲ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.