ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಮ್ಮಡಿ ಕೃಷ್ಣರಾಜ ಒಡೆಯರ್ ಸಾಧನೆ ಅಪಾರ: ಯದುವೀರ್

ಎಲ್ಲೇಮಾಳದಲ್ಲಿ ಸನಾತನ ಸಂಸ್ಕೃತಿ ಪುನರುತ್ಥಾನ ದಿನಾಚರಣೆ
Published 22 ಜುಲೈ 2023, 7:40 IST
Last Updated 22 ಜುಲೈ 2023, 7:40 IST
ಅಕ್ಷರ ಗಾತ್ರ

ಹನೂರು: ‘ಮುಮ್ಮಡಿ ಕೃಷ್ಣರಾಜ ಒಡೆಯರ್‌ ಕರ್ನಾಟಕಕ್ಕೆ ನೀಡಿದ ಕೊಡುಗೆ ಹಾಗೂ ಸೇವಾ ಕಾರ್ಯ ಶ್ಲಾಘನೀಯವಾಗಿದ್ದು, ಹಸಿರು ಪರಿಸರ ಉಳಿಸುವಲ್ಲಿ ಸಹ ಅಪಾರ ಶ್ರಮವಹಿಸಿದ್ದರು’ ಎಂದು ಮೈಸೂರು  ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಎಲ್ಲೇಮಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ ಪಟ್ಟಾಭಿಷೇಕದ ಸವಿನೆನಪಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಸನಾತನ ಸಂಸ್ಕೃತಿ ಪುನರುತ್ಥಾನ ದಿನಾಚರಣೆ’ ಅಂಗವಾಗಿ ಕೋಟಿ ಸಸಿ ನೆಡುವ ಕಾರ್ಯಕ್ರಮಕ್ಕೆ  ಚಾಲನೆ ನೀಡಿ ಅವರು ಮಾತನಾಡಿದರು.

‘ಮೈಸೂರು ಸಂಸ್ಥಾನದ ಮಹಾರಾಜರ ಆಳ್ವಿಕೆಯಲ್ಲಿ ಕರ್ನಾಟಕ ರಾಜ್ಯ ಉದ್ದಗಲಕ್ಕೂ ಮುಮ್ಮಡಿ ಕೃಷ್ಣರಾಜ ಒಡೆಯರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಸಾಕಷ್ಟು ಕೊಡುಗೆಗಳನ್ನು ನೀಡಿದ್ದರು. ಇದನ್ನು ರಾಜಮನತದವರು ಮುಂದುವರೆಸಿಕೊಂಡು ಬಂದಿದ್ದಾರೆ. ಚಾಮರಾಜನಗರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಸಾವಿರಾರು ಕೆರೆಕಟ್ಟೆ ನಿರ್ಮಿಸಿ, ಅಣೆಕಟ್ಟೆ ಕಟ್ಟಿಸಿ ನಾಡಿಗೆ ಶಾಶ್ವತ ಕೊಡುಗೆ ನೀಡಿದ್ದಾರೆ. ಮೈಸೂರು ಸುತ್ತ ಹಸಿರು ಆವರಣ ಉಳಿಸುವಲ್ಲಿ  ಪ‍್ರಮುಖ ಪಾತ್ರ ವಹಿಸಿದ್ದಾರೆ’ ಎಂದರು.

ಮಾನವ –ವನ್ಯಪ್ರಾಣಿಗಳ ಸಂಘರ್ಷ, ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿ ಉತ್ತಮ ಆರೋಗ್ಯಕ್ಕಾಗಿ ಉತ್ತಮ ಪರಿಸರ  ಉಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ಮುಖಂಡ ಆರ್.ನರೇಂದ್ರ ಮಾತನಾಡಿ, ಮೈಸೂರು ಮಹಾರಾಜರು ಪರಿಸರ ಬಗ್ಗೆ ಅಪಾರ ಕಾಳಜಿವಹಿಸಿದ್ದರು. ಮರಗಿಡಗಳ ನಾಟಿ, ನೀರು ಸಂಗ್ರಹ ಹೊಂಡ, ಕರೆಕಟ್ಟೆ ನಿರ್ಮಾಣ ಮಾಡಿಸಿದ್ದರು ಎಂದು ಸ್ಮರಿಸಿದರು.

ಧಾರವಾಡ ಆನಂದ ಯೋಗ ಮಂದಿರದ ಪ್ರಜ್ಞಾನಂದಾ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸ್ಕೃತಿ ಸೇವಾ ವಾರಿಧಿ-ಸಂಸೇವಾ ಕಾರ್ಯಕಾರಿ ಸಮಿತಿ ಅಧ್ಯಕ್ಷ ರಂ ಶಿವಶಂಕರ, ಕಾರ್ಯದರ್ಶಿ ಸುಷ್ಮ ಮಯ್ಯಾ, ಮಹದೇಶ್ವರಬೆಟ್ಟದ ಆರ್ಚಕ ಕೆ.ವಿ.ಮಹದೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದತ್ತೇಶ್ ಕುಮಾರ್, ಮುಖ್ಯ ಶಿಕ್ಷಕಿ ನಾಗಕನ್ನಿಕ, ಸಂಶೋಧಕ ದುಂಡಯ್ಯ, ಮುಖಂಡರಾದ ರಂಗಸ್ವಾಮಿ, ಮಹದೇವ್, ನಾಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT