‘16 ನಿರೀಕ್ಷಣಾ ಕೊಠಡಿಗಳು’
‘ಶ್ರೀಸಾನ್ನಿಧ್ಯ ಸಂಕೀರ್ಣವು ವೃತ್ತಾಕಾರದಲ್ಲಿದ್ದು, ಎರಡು ಅಂತಸ್ತು ಒಳಗೊಂಡಿದೆ. ಈ ಸಂಕೀರ್ಣದಲ್ಲಿ 16 ವಿಶಾಲ ನಿರೀಕ್ಷಣಾ ಕೊಠಡಿಗಳಿವೆ. ಪ್ರತಿ ನಿರೀಕ್ಷಣಾ ಕೊಠಡಿಯಲ್ಲಿ ಸುಮಾರು 800 ಜನರು ಕುಳಿತುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದು ವೀರೇಂದ್ರ ಹೆಗ್ಗಡೆ ಮಾಹಿತಿ ನೀಡಿದರು.
‘ಪ್ರತಿ ನಿರೀಕ್ಷಣಾ ಕೊಠಡಿಯೂ ಕುಡಿಯುವ ನೀರು, ಶೌಚಾಲಯ ಸೌಲಭ್ಯ, ಶಿಶುಪಾಲನಾ ಕೊಠಡಿ ಮತ್ತು ಕೆಫೆಟೇರಿಯಾ ಸೌಲಭ್ಯಗಳನ್ನು ಹೊಂದಿದೆ. ಡಿಜಿಟಲ್ ಟಿ.ವಿ.ಗಳ ಮೂಲಕ ಆಧ್ಯಾತ್ಮಿಕ ಮಾಹಿತಿ ನೀಡುವ ವ್ಯವಸ್ಥೆ ಇದೆ. ಇದರ ನಿರ್ವಹಣೆಗೆ ಸುಧಾರಿತ ಸರದಿ ನಿರ್ವಹಣೆ ವ್ಯವಸ್ಥೆ (ಕ್ಯುಎಂಎಸ್) ತಂತ್ರಜ್ಞಾನ ಅಳವಡಿಸಲಾಗಿದೆ. ಕೃತಕ ಬುದ್ಧಿಮತ್ತೆ ಆಧರಿತ 160 ಕ್ಯಾಮೆರಾಗಳ ಕಣ್ಗಾವಲು ಇದೆ’ ಎಂದರು.