ಕಲಬುರಗಿ: ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ವಿವಾದಿತ ವಕ್ಫ್ ತಿದ್ದುಪಡೆ ಮಸೂದೆ ವಿರುದ್ಧ ಮುಂದಿನ ದಿನಗಳಲ್ಲಿ ಜನ ಜಾಗೃತಿ ಮತ್ತು ಚಳವಳಿಯ ರೂಪರೇಷಗಳ ಕುರಿತು ಚರ್ಚಿಸಲು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸದಸ್ಯ ಅಸಗರ ಚುಲಬುಲ್ ಅಧ್ಯಕ್ಷತೆಯಲ್ಲಿ ಈಚೆಗೆ ಸಭೆ ಜರುಗಿತು.

ನೂರ್ ಬಾಗ್ನಲ್ಲಿ ವಿದ್ವಾಂಸರು, ಧರ್ಮಗುರು ಮತ್ತು ಬುದ್ಧಿಜೀವಿಗಳ ಸಮಾಲೋಚನಾ ಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಒಗ್ಗಟ್ಟಿನ ಪ್ರತಿಭಟನೆ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು. ಬಿಜೆಪಿ ಸರ್ಕಾರ ಮುಸ್ಲಿಮರ ವಿರುದ್ಧ ಸಿಎಎ, ತ್ರಿಬಲ್ ತಲಾಕ್, ಯುಜಿಸಿ, ಹಿಜಾಬ್, ಬುಲ್ಡೋಜರ್, ಬಾಬರಿ ಮಸೀದಿ ಧ್ವಂಸ, ಔರಂಗಜೇಬ್ ಸಮಾದಿ ಸೇರಿದಂತೆ ಹಲವು ವಿವಾದಗಳನ್ನು ಮುನ್ನೆಲೆಗೆ ತರುತ್ತಿದೆ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.

ವಕ್ಫ್ ಸಂರಕ್ಷಣಾ ಸಮಿತಿ ರಚಿಸಿ, ತಿದ್ದುಪಡಿ ಮಸೂದೆಯ ವಿರುದ್ಧ ಇತರೆ ಸಂಘಟನೆಗಳ ಸಹಯೋಗ ಪಡೆದು ಒಗ್ಗಟ್ಟಿನ ಪ್ರತಿಭಟನೆಯನ್ನು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಆಯೋಜಿಸಬೇಕು. ರಕ್ಷಣಾ ಸಮಿತಿಯು ಎಲ್ಲಾ ಸಂಸ್ಥೆಗಳ ಜವಾಬ್ದಾರಿಯುತ ವ್ಯಕ್ತಿಗಳನ್ನು ಒಳಗೊಂಡಿರುತ್ತದೆ. ಇದರ ವಿರುದ್ಧ ನಿರಂತರ ಪ್ರತಿಭಟನೆಗಾಗಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು. ಈ ಮಸೂದೆಯಿಂದ ಸಾಮಾನ್ಯ ಮುಸ್ಲಿಮರಿಗೆ ಆಗುವ ನಷ್ಟದ ಬಗ್ಗೆಯೂ ಅರಿವು ಮೂಡಿಸುವ ಬಗ್ಗೆ ನಿರ್ಧರಿಸಲಾಯಿತು.

ಸಭೆಯಲ್ಲಿ ಮುಖಂಡರಾದ ಮೌಲಾನಾ ಸೈಯದ್ ಅಬ್ದುಲ್ ಹಕೀಂ, ಮೌಲಾನಾ ಜಾವೇದ್ ಆಲಂ ಖಾಸ್ಮಿ, ಮೌಲಾನಾ ಗೌಸುದ್ದಿನ್ ಖಾಸ್ಮಿ, ಹಫೀಜ್ ಮುಹಮ್ಮದ್ ಓವೈಸ್ ಖಾದ್ರಿ, ಮೌಲಾನಾ ಅಬ್ದುಲ್ ಹಮೀದ್ ಬಾಖ್ವಿ ಖಾಸ್ಮಿ, ಮೌಲಾನಾ ಮುಹಮ್ಮದ್ ಶಫೀಕ್ ಖಾಸ್ಮಿ, ಪತ್ರಕರ್ತ ಅಜಿಜುಲಾ ಸರ್ಮಸತ್, ಅಜೀಂ ಗೋಲ್ಕಂಡಿ, ಸೈಯದ್ ಸಖಿ, ಸರ್ಮಸ್ತ್, ಮುಷ್ತಾಕ್ ಅಹ್ಮದ್ ಆದಿಲ್, ರಿಜ್ವಾನ್-ಉರ್-ರೆಹಮಾನ್ ಸಿದ್ದಿಕಿ, ಹೈದರ್ ಅಲಿ ಬಾಗ್ಬಾನ್ ಜವಾದ್ ಸೇರಿ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.