ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೌರತ್ವ ತಿದ್ದುಪಡಿ ಕಾಯ್ದೆ ವಾಪಸ್ಸಾಗಲಿ’

Published 14 ಮಾರ್ಚ್ 2024, 15:50 IST
Last Updated 14 ಮಾರ್ಚ್ 2024, 15:50 IST
ಅಕ್ಷರ ಗಾತ್ರ

ಸಿಂಧನೂರು: ದೇಶದ ಜನರ ಅಪಾರ ವಿರೋಧದ ನಡುವೆಯೂ ಪೌರತ್ವ ತಿದ್ದುಪಡಿ ಕಾಯ್ದೆ-2019ರ ಜಾರಿ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ರಾಜ್ಯ ಘಟಕ ಸಂಪೂರ್ಣವಾಗಿ ವಿರೋಧಿಸಿದೆ.

ಗುರುವಾರ ಹೇಳಿಕೆ ನೀಡಿರುವ ಟಿಯುಸಿಐ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಗಂಗಾಧರ್, ‘ದೇಶದ, ದುಡಿಯುವ ವರ್ಗ ಹಾಗೂ ಸಂವಿಧಾನದ ಹಿತಾಸಕ್ತಿಗೆ ಧಕ್ಕೆ ತರುವ ಸಿಎಎ ಕಾಯ್ದೆಯನ್ನು ಕೂಡಲೇ ಹಿಂಪಡೆಯುವಂತೆ ಹೋರಾಟ ನಡೆಸಬೇಕು. ಇದು ಮುಸ್ಲಿಮರಿಗೆ ಪೌರತ್ವ ನಿರಾಕರಿಸುವ, ಮುಸ್ಲಿಂ ವಿರೋಧಿ ದ್ವೇಷವನ್ನು ಯೋಜನೆಬದ್ಧವಾಗಿ ಹರಡುವ, ಬಹುಸಂಖ್ಯಾತ ಹಿಂದೂಗಳ ಹೆಸರಲ್ಲಿ ಬ್ರಾಹ್ಮಣವಾದಿ ರಾಜಕಾರಣ ಮಾಡುವ ಹಿಂದುತ್ವ ಫ್ಯಾಸಿಸ್ಟ್ ಕುತಂತ್ರವನ್ನು ಭಾರತದ ಜನ ಈಗಲಾದರೂ ಅತ್ಯಂತ ಎಚ್ಚರಿಕೆಯಿಂದ ಅರ್ಥಮಾಡಿಕೊಳ್ಳಬೇಕು’ ಎಂದು ತಿಳಿಸಿದ್ದಾರೆ.

ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟ ಮುಸ್ಲಿಮರು ಹಾಗೂ ಮುಸ್ಲಿಮೇತರರು ಭಾರತೀಯರು. ದೇಶ ಕಟ್ಟಿ ದೇಶ ನಡೆಸುವ ದಲಿತ, ಹಿಂದುಳಿದ ವರ್ಗದವರು ಭಾರತೀಯರು. ಬಹುಧರ್ಮಿಯ ಬಹು ಜನಾಂಗೀಯ ಭಾರತವನ್ನು ಕೆಡವಿ, ಹಿಂದೂ ರಾಷ್ಟ್ರ ಕಟ್ಟುವ ಆರ್‌ಎಸ್‍ಎಸ್‍ನ ಕುತಂತ್ರಕ್ಕೆ ಅವಕಾಶ ಸಿಗದಂತೆ ನೋಡಿಕೊಳ್ಳುವುದು ಕಾರ್ಮಿಕ ವರ್ಗದ ರಾಷ್ಟ್ರೀಯ ಕರ್ತವ್ಯವಾಗಿದೆ. ಕಾರ್ಮಿಕರೇ ಭಾರತ ದೇಶದ ನಿರ್ಮಾಣಕಾರಕರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT