ವಿಜಯಪುರ: ಜಿಲ್ಲೆಯಾದ್ಯಂತ ಸೋಮವಾರ ಸಂಜೆ ಗುಡುಗು, ಸಿಡಿಲಿನೊಂದಿಗೆ ಉತ್ತಮ ಮಳೆಯಾಗಿದೆ.

ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ರೈತ ಮಳಸಿದ್ದಪ್ಪ ಸಿದ್ಧಪ ಸುಧಾಮ ಅವರಿಗೆ ಸೇರಿದ ಎಮ್ಮೆಗೆ ಸಿಡಿಲು ಬಡಿದು ಸಾವಿಗೀಡಾಗಿದೆ.

ಚಡಚಣ, ಇಂಡಿ, ಸಿಂದಗಿ, ತಾಳಿಕೋಟೆ, ನಾಲತವಾಡ ವ್ಯಾಪ್ತಿಯಲ್ಲೂ ಗುಡುಗು, ಸಿಡಿಲಿನೊಂದಿಗೆ ಉತ್ತಮ ಮಳೆಯಾಗಿದೆ.

ಚಡಚಣ ತಾಲ್ಲೂಕಿನಾದ್ಯಂತ ಸೋಮವಾರ ಮಧ್ಯಾಹ್ನ ಭಾರಿ ಬಿರುಗಾಳಿ ಸಹಿತ ಸುರಿದ ಮಳೆಗೆ ಅಂಗಡಿಗಳು, ಹೋಟೆಲ್ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಪತ್ರಾಸ್ ಮನೆಗಳು ಭಾಗಶಃ ನೆಲಸಮಗೊಂಡಿವೆ.

ಚಡಚಣ ಪಟ್ಟಣದ ಹೊರ ವಲಯದಲ್ಲಿರುವ ಎಂ.ಇ.ಎಸ್. ಐಟಿಐ ಕಾಲೇಜಿನ ನಾಲ್ಕು ಕೊಠಡಿಗಳ ಚಾವಣಿ ಹಾರಿ ಹೋಗಿವೆ. ಕೊಠಡಿಗಳ ಒಳಗಡೆ ಇರುವ ಲಕ್ಷಾಂತರ ಮೌಲ್ಯದ ಕಂಪ್ಯೂಟರ್‌ಗಳು, ಕಾಗದ ಪತ್ರಗಳು ಮಳೆ ನೀರಿಗೆ ಆಹುತಿಯಾಗಿದ್ದು, ಅಂದಾಜು ₹ 10 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.

ಸಮೀಪದಲ್ಲಿರುವ ಓಂ ಪ್ರಾಥಮಿಕ ಶಾಲಾ ಕಾಲೇಜಿನ ಕಿಟಕಿ ಗಾಜಗಳು ಪುಡಿ ಪುಡಿಯಾಗಿದ್ದು, ಕಂಪೌಂಡ್ ನೆಲಸಮಗೊಂಡಿದೆ.

ರೇವತಗಾಂವ ಗ್ರಾಮದಲ್ಲಿರುವ ಬಿ.ಎಸ್.ಎನ್.ಎಲ್ ಟವರ್‌ವೊಂದು ನೆಲಸಮಗೊಂಡಿದೆ. ಹೊಲ ಗದ್ದೆಗಳಿಲ್ಲಿರುವ ನೂರಾರು ಗಿಡ ಮರಗಳು ಮುರಿದು ಬಿದ್ದಿವೆ.

ಚಡಚಣ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಲ್ಪ ಮಳೆಯಾಗಿದ್ದರೆ, ಬರಡೋಲ, ಲೋಣಿ, ಝಳಕಿ ಹೋರ್ತಿ ಸೇರಿದಂತೆ ಕರ್ನಾಟಕ –ಮಹಾರಾಷ್ಟ್ರ ಗಡಿ ಅಂಚಿನಲ್ಲಿ ಭಾರಿ ಮಳೆಯಾಗಿದೆ. ಹೊಲಗಳ ಒಡ್ಡುಗಳು ತುಂಬಿ ನಿಂತಿವೆ. ಬಿಸಿಲಿನಿಂದ ಬೇಸತ್ತಿದ್ದ ಜನಕ್ಕೆ ಮಳೆ ತಂಪೆರೆಯಿತು.

‘ಮಳೆಗಿಂತ ಬಿರುಗಾಳಿಗೆ ಚಡಚಣ ಪಟ್ಟಣ ವ್ಯಾಪ್ತಿ ಸೇರಿದಂತೆ ತಾಲ್ಲೂಕಿನಾದ್ಯಂತ ಸಾಕಷ್ಟು ಪತ್ರಾಸ್ ಮನೆಗಳು ಹಾರಿ ಹೋಗಿವೆ. ಹಲವಾರು ಮರಗಳು ಮುರುದು ಬಿದ್ದಿವೆ. ಕೆಲವು ನಿಂಬೆ ಹಣ್ಣಿನ ಗದ್ದೆಗಳೂ ನೆಲಸಮಗೊಂಡಿವೆ’ ಎಂದು ತಹಶೀಲ್ದಾರ್ ರಾಜೇಶ ಬುರ್ಲಿ ತಿಳಿಸಿದ್ದಾರೆ.
.Koppal Rains | ಕೊಪ್ಪಳ: ಜನರಿಗೆ ಹರ್ಷ ತಂದ ಮಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.