ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಗ್ನಿವೀರ್‌’ ಆಯ್ಕೆಗೆ ಮೂರು ಹಂತಗಳ ಪರೀಕ್ಷೆ

Published 9 ಆಗಸ್ಟ್ 2023, 23:31 IST
Last Updated 9 ಆಗಸ್ಟ್ 2023, 23:31 IST
ಅಕ್ಷರ ಗಾತ್ರ

ಭಾರತೀಯ ವಾಯುಪಡೆ 4,165 ‘ಅಗ್ನಿವೀರ್‌ ವಾಯು’ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಜುಲೈ 27ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಆ.17 ಅರ್ಜಿ ಸಲ್ಲಿಸಲು ಕೊನೆ ದಿನ. ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. 

ಕಳೆದ ಸಂಚಿಕೆಯಲ್ಲಿ ‘ಅಗ್ನಿವೀರ್‌ ವಾಯು’ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ, ವಿದ್ಯಾರ್ಹತೆ ಮತ್ತಿತತರ ವಿವರಗಳನ್ನು ಪ್ರಕಟಿಸಲಾಗಿತ್ತು. ಈ ಸಂಚಿಕೆಯಲ್ಲಿ ಪರೀಕ್ಷೆ ಹಂತಗಳ ಕುರಿತು ಮಾಹಿತಿ ನೀಡಲಾಗುತ್ತಿದೆ. ಅಗ್ನಿವೀರ್‌ ವಾಯು ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮೂರು ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ. ಇವುಗಳನ್ನು ಸ್ಟಾರ್ ಹಂತದ ಪರೀಕ್ಷೆಗಳು ಎನ್ನುತ್ತಾರೆ. ಪರೀಕ್ಷಾ ವಿವರಗಳು ಕೋಷ್ಠಕದಲ್ಲಿವೆ.

ಸ್ಟಾರ್‌ ಹಂತ-I   

ಈ ಹಂತದಲ್ಲಿ ಆನ್‌ಲೈನ್ ಲಿಖಿತ ಪರೀಕ್ಷೆಗೆ ಅಭ್ಯರ್ಥಿಗಳು ಆಧಾರ್ ಕಾರ್ಡ್‌ ನೊಂದಿಗೆ ಪ್ರವೇಶ ಪತ್ರದ ಕಲರ್ ಪ್ರಿಂಟ್‌ಔಟ್ ಅನ್ನು ಮಾತ್ರ ಕೊಂಡೊಯ್ಯಬೇಕು (ಯಾವುದೇ ಮೂಲ ದಾಖಲೆ/ ಫೋಟೊ ಕಾಪಿ ಅಗತ್ಯವಿಲ್ಲ).

ಸ್ಟಾರ್‌ ಹಂತ - II

ಹಂತ-I (ಆನ್‌ಲೈನ್) ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಸಾಮಾನ್ಯ ಅಂಕಗಳ ಆಧಾರದ ಮೇಲೆ ಕಟ್ ಆಫ್ ಅನ್ನು ಅನ್ವಯಿಸಿ ಅಭ್ಯರ್ಥಿಗಳ ಆಯ್ಕೆ ಪಟ್ಟಿ ತಯಾರಿಸುತ್ತಾರೆ. ಇಲ್ಲಿ ಪಾಸಾದ ಅಭ್ಯರ್ಥಿಗಳಿಗೆ ನೋಂದಾಯಿತ ಇ-ಮೇಲ್ ಐಡಿಗೆ ಹೊಸ ಪ್ರವೇಶ ಪತ್ರ ಕಳುಹಿಸಲಾಗುತ್ತದೆ. ಈ ಪ್ರವೇಶ ಪತ್ರವನ್ನು CASB ವೆಬ್ ಪೋರ್ಟಲ್ https://agnipathvayu.cdac.in ನಲ್ಲಿ ಅಭ್ಯರ್ಥಿಯ ಲಾಗಿನ್ ಐಡಿಯಲ್ಲಿ ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕು.

ಅಭ್ಯರ್ಥಿಗಳು ಈ ಕೆಳಗಿನ ದಾಖಲೆಗಳೊಂದಿಗೆ ಗೊತ್ತುಪಡಿಸಿದ ASC ಯಲ್ಲಿ ಹಂತ-II ಗಾಗಿ ನಿಗದಿತ ದಿನಾಂಕ ಮತ್ತು ಸಮಯದಂದು ವರದಿ ಮಾಡಬೇಕು: 

* ಹಂತ-II ಪ್ರವೇಶ ಕಾರ್ಡ್‌ನ ಕಲರ್ ಪ್ರಿಂಟ್ ಔಟ್.

* ಆನ್‌ಲೈನ್‌ಲ್ಲಿ ಭರ್ತಿ ಮಾಡಿದ ಅರ್ಜಿ ನಮೂನೆಯ ಕಲರ್ ಪ್ರಿಂಟ್ ಔಟ್.

* ಬರೆಯಲು HB ಪೆನ್ಸಿಲ್, ಎರೇಸರ್, ಶಾರ್ಪನರ್, ಗ್ಲೂ ಸ್ಟಿಕ್, ಸ್ಟೇಪ್ಲರ್ ಮತ್ತು ಕಪ್ಪು/ನೀಲಿ ಬಾಲ್ ಪಾಯಿಂಟ್ ಪೆನ್.

* ದೃಢೀಕರಿಸದ ಪಾಸ್‌ಪೋರ್ಟ್ ಗಾತ್ರದ ಬಣ್ಣದ ಛಾಯಾಚಿತ್ರದ ಎಂಟು ಪ್ರತಿಗಳು (ಇದನ್ನು ಆನ್‌ಲೈನ್ ಅರ್ಜಿ ನೋಂದಣಿಗಾಗಿ ಬಳಸಲಾಗಿದ್ದೇ ಆಗಿರಬೇಕು).

* ಮೂಲ ಮೆಟ್ರಿಕ್ಯುಲೇಷನ್ ಉತ್ತೀರ್ಣ ಪ್ರಮಾಣಪತ್ರ ಮತ್ತು ನಾಲ್ಕು ಸ್ವಯಂ-ದೃಢೀಕರಿಸಿದ ಪೋಟೊಕಾಪಿಗಳು (ಅಭ್ಯರ್ಥಿಯ ಹೆಸರು, ತಂದೆಯ ಹೆಸರು ಮತ್ತು ಅವನ/ಅವಳ ಜನ್ಮ ದಿನಾಂಕದ ಪರಿಶೀಲನೆಗೆ ಅಗತ್ಯವಿದೆ). 

* ಶೈಕ್ಷಣಿಕ ವಿದ್ಯಾರ್ಹತೆಯ ದಾಖಲೆಗಳು.

* ಹಂತ-I ಪರೀಕ್ಷೆಯ ಸಮಯದಲ್ಲಿ ಬಳಸಿದ ಮೂಲ ಹಂತ-I ಪ್ರವೇಶ ಕಾರ್ಡ್.

* NCC ‘A’, ‘B’ ಅಥವಾ ‘C’ ಪ್ರಮಾಣಪತ್ರದ ಮೂಲ ಮತ್ತು ನಾಲ್ಕು ಸ್ವಯಂ-ದೃಢೀಕರಿಸಿದ ಫೋಟೊಕಾಪಿಗಳು (ಅನ್ವಯಿಸಿದರೆ).

ಸ್ಟಾರ್ ಹಂತ III

ಎರಡು ಹಂತಗಳ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ವಾಯುಪಡೆಯ ವೈದ್ಯಕೀಯ ಕೇಂದ್ರದಲ್ಲಿ  ವೈದ್ಯಕೀಯ ಫಿಟ್ನೆಸ್ ಪರೀಕ್ಷೆ ನಡೆಯಲಿದೆ.

ಅರ್ಜಿ ಸಲ್ಲಿಕೆ ಕುರಿತ ವಿವರಗಳಿಗಾಗಿ  https://www.careerindianairforce cdac.in https://agnipathvayu.cdac.in/ , https://indianairforce.nic.in ಜಾಲತಾಣಗಳಿಗೆ ಭೇಟಿ ನೀಡಿ.⇒(ಮುಗಿಯಿತು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT