ಭಾರತದ ಗುರು-ಶಿಷ್ಯ ಪರಂಪರೆಯಲ್ಲಿ ಒಂದು ವಿಶಿಷ್ಟ ಪರಿಕಲ್ಪನೆಯಿದೆ. ಗುರುವು ತನ್ನ ಶಿಷ್ಯ ಯಶಸ್ವಿಯಾಗಬೇಕೆಂದು ಬಯಸುತ್ತಾನೆ ಮತ್ತು ಶಿಷ್ಯ ತನ್ನ ಗುರುವಿಗೆ ಜಯವಾಗಲಿ ಎಂದು ಬಯಸುತ್ತಾನೆ.

ಶಿಷ್ಯನು ಬೃಹತ್ ಮನಸ್ಸಿಗೆ, ಅಂದರೆ ಗುರುವಿಗೆ ಜಯವಾಗಲಿ ಎಂದು ಬಯಸುತ್ತಾನೆ. ಇದು ಆರೋಗ್ಯಕರ ವಿಚಾರ, ಏಕೆಂದರೆ ಶಿಷ್ಯನು ತನಗೆ ಗುರುವಿಗಿಂತ ಹೆಚ್ಚು ತಿಳಿದಿದೆ ಎಂದು ಭಾವಿಸಿದರೆ, ಅವನ ಕಲಿಕೆ ನಿಂತುಬಿಡುತ್ತದೆ. ಅವನ ಅಹಂಕಾರವೇ ಅವನ ಜ್ಞಾನವನ್ನು ನಾಶಪಡಿಸುತ್ತದೆ.

ಶಿಷ್ಯನ ಮನಸ್ಸು, ಅಂದರೆ ಸಣ್ಣ ಮನಸ್ಸು ಗೆದ್ದರೆ ಅದು ದುಃಖಕ್ಕೆಡೆಮಾಡಿಕೊಡುತ್ತದೆ, ಆದರೆ ಗುರುವಿಗೆ ಜಯವಾದರೆ ಅದು ಜ್ಞಾನದ ವಿಜಯ, ಅದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಮತ್ತು ಸಂತೋಷ ಉಂಟಾಗುತ್ತದೆ ಎಂದು ಶಿಷ್ಯನಿಗೆ ತಿಳಿದಿರುತ್ತದೆ.

ಶ್ರೇಷ್ಠ ಗುರುವಿಗೆ ತನ್ನ ಶಿಷ್ಯನ ಹಿನ್ನೆಲೆಯ ಪರಿಚಯವಿರುತ್ತದೆ. ಅವನನ್ನು ಹಂತ ಹಂತವಾಗಿ ಹೇಗೆ ಮುನ್ನಡೆಸಬೇಕೆಂದು ಅವನಿಗೆ ತಿಳಿದಿರುತ್ತದೆ.

ಉದಾಹರಣೆಗೆ, ಶ್ರೀಕೃಷ್ಣ ಒಬ್ಬ ಅದ್ಭುತ ಶಿಕ್ಷಕ! ಅವನು ಅರ್ಜುನನನ್ನು ಹಂತ ಹಂತವಾಗಿ ಮುನ್ನಡೆಸಿ ಜೀವನದ ಅಂತಿಮ ಗುರಿಯನ್ನು ಸಾಧಿಸಲು ಅವನಿಗೆ ಸಹಾಯ ಮಾಡಿದ. ಒಬ್ಬ ವಿದ್ಯಾರ್ಥಿಯು ಬೆಳೆಯುವ ಹಾದಿಯಲ್ಲಿ ತನ್ನ ಅನೇಕ ಗ್ರಹಿಕೆಗಳು ಚೂರುಚೂರಾಗುವುದನ್ನು ಗಮನಿಸಿ ಗೊಂದಲಕ್ಕೊಳಗಾಗುತ್ತಾನೆ. ಅರ್ಜುನನೂ ಪ್ರಾರಂಭದಲ್ಲಿ ತುಂಬಾ ಗೊಂದಲಕ್ಕೊಳಗಾಗಿದ್ದ.

ವಿದ್ಯಾರ್ಥಿಯಾಗಿ, ಮೊದಲಿಗೆ ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ ಎಂದು ನೀವು ಕಲಿತಿರುತ್ತೀರಿ. ನಂತರ, ನಿಮಗೆ ಸೂರ್ಯ ಮತ್ತು ಅವನ ಸುತ್ತ ತಿರುಗುವ ಗ್ರಹಗಳ ಕುರಿತು ಕಲಿಸುತ್ತಾರೆ. ಹೀಗೆ, ಬೆಳೆಯುವ ಪ್ರತಿಹಂತದಲ್ಲೂ ನಿಮ್ಮ ಗ್ರಹಿಕೆಗಳು ಭಗ್ನವಾಗುತ್ತವೆ. ಉತ್ತಮ ಶಿಕ್ಷಕರಿಗೆ ಇದು ತಿಳಿದಿರುತ್ತದೆ. ಅವರು ವಿದ್ಯಾರ್ಥಿಯು ಒಂದು ನಿರ್ದಿಷ್ಟ ಗ್ರಹಿಕೆಗೆ ಅಂಟಿಕೊಳ್ಳಲು ಬಿಡುವುದಿಲ್ಲ. ಏಕೆಂದರೆ, ಪ್ರತಿಯೊಂದು ಗ್ರಹಿಕೆಯೂ ಅಂತಿಮ ಗುರಿಯನ್ನು ತಲುಪುವ ಹಾದಿಯ ಹೆಜ್ಜೆಯಾಗಿರುತ್ತದೆ. ಮುಂದಿನ ಹಂತಗಳನ್ನು ತಲುಪಲು ಗ್ರಹಿಕೆಗಳನ್ನು ಮುರಿಯಲೇಬೇಕಾಗುತ್ತದೆ. ಒಬ್ಬ ಒಳ್ಳೆಯ ಶಿಕ್ಷಕ ತನ್ನ ಶಿಷ್ಯರ ಗೊಂದಲಗಳನ್ನು ನಿವಾರಿಸುತ್ತಾನೆ; ಅಗತ್ಯಬಿದ್ದರೆ ಕೆಲವೊಮ್ಮೆ ತಾನೇ ಇನ್ನೂ ಹೆಚ್ಚಿನ ಗೊಂದಲವನ್ನು ಸೃಷ್ಟಿಮಾಡುತ್ತಾನೆ.

ಬಾಲ್ಯದಲ್ಲಿ, ನಮಗೆ ಒಬ್ಬರು ಸಮಾಜ ವಿಜ್ಞಾನದ ಶಿಕ್ಷಕಿಯಿದ್ದರು. ಅವರು ತುಂಬಾ ಒಳ್ಳೆಯವರು. ಹೀಗಾಗಿ, ಎಲ್ಲರೂ ಅವರ ತರಗತಿಗಳನ್ನು ಇಷ್ಟಪಡುತ್ತಿದ್ದರು, ಆದರೆ ಸಮಾಜವಿಜ್ಞಾನದ ಪರೀಕ್ಷೆಯಲ್ಲಿ ಎಲ್ಲರೂ ಅತಿ ಕಡಿಮೆ ಅಂಕಗಳನ್ನು ಪಡೆಯುತ್ತಿದ್ದರು. ಇದಕ್ಕೆ ಪ್ರತಿಯಾಗಿ, ನಮ್ಮ ಭೌತಶಾಸ್ತ್ರದ ಶಿಕ್ಷಕರು ತುಂಬಾ ಕಟ್ಟುನಿಟ್ಟಿನವರಾಗಿದ್ದರು, ಅವರನ್ನು ನೋಡಿದರೆ ಎಲ್ಲರಿಗೂ ಭಯ. ಆದರೆ, ಭೌತಶಾಸ್ತ್ರದ ಪರೀಕ್ಷೆಯಲ್ಲಿ ಎಲ್ಲರೂ ಉತ್ತಮ ಅಂಕಗಳನ್ನು ಗಳಿಸುತ್ತಿದ್ದರು. ಉತ್ತಮ ಶಿಕ್ಷಕರಿಗೆ ಪ್ರೀತಿ ಮತ್ತು ಶಿಸ್ತುಗಳ ನಡುವೆ ಸಮತೋಲನವನ್ನು ಹೇಗೆ ಸಾಧಿಸುವುದು ಎಂದು ತಿಳಿದಿರುತ್ತದೆ. ಕೆಲವು ಮಕ್ಕಳು ತುಂಬಾ ತಂಟೆ ಮಾಡುತ್ತಾರೆ. ಅಂತಹ ಮಕ್ಕಳಿಗೆ ದೈಹಿಕವಾಗಿಯೂ ಪ್ರೀತಿಯನ್ನು ತೋರಿಸಬೇಕಾಗುತ್ತದೆ; ಬೆನ್ನು ತಟ್ಟುವ ಮೂಲಕ ಪ್ರೋತ್ಸಾಹ ನೀಡಬೇಕಾಗುತ್ತದೆ. ಅಂತಹ ಮಕ್ಕಳಲ್ಲಿ ತಮ್ಮ ಬಗ್ಗೆಯೂ ಶಿಕ್ಷಕರಿಗೆ ಪ್ರೀತಿಯಿದೆ, ಅವರು ತಮ್ಮ ಹಿತವನ್ನು ಬಯಸುತ್ತಾರೆ ಎಂಬ ವಿಶ್ವಾಸವನ್ನು ಹುಟ್ಟಿಸಬೇಕು. ಕೆಲವು ಅಂಜುಬುರುಕ ಸ್ವಭಾವದ ಮಕ್ಕಳೂ ಇರುತ್ತಾರೆ. ಅವರೊಂದಿಗೆ ಕಠಿಣವಾಗಿಯೇ ವರ್ತಿಸಬೇಕಾಗುತ್ತದೆ. ಅವರು ಹಿಂಜರಿಕೆಯನ್ನು ಮೆಟ್ಟಿನಿಂತು ಧೈರ್ಯದಿಂದ ಮುಂದೆ ಬಂದು ಮಾತನಾಡಬೇಕು ಎಂಬುದೇ ಇದರ ಉದ್ದೇಶ.

ಸಾಮಾನ್ಯವಾಗಿ, ಶಿಕ್ಷಕರು ಇದಕ್ಕೆ ವಿರುದ್ಧವಾಗಿ ವರ್ತಿಸುತ್ತಾರೆ. ಶಿಕ್ಷಕರು ತಂಟೆಕೋರ ಮಕ್ಕಳೊಂದಿಗೆ ಕಟ್ಟುನಿಟ್ಟಾಗಿರುತ್ತಾರೆ ಮತ್ತು ಸಂಕೋಚಸ್ವಭಾವದ ಮಕ್ಕಳೊಂದಿಗೆ ಉದಾರವಾಗಿ ವರ್ತಿಸುತ್ತಾರೆ. ಆಗ ಮಕ್ಕಳ ನಡವಳಿಕೆ ದೊಡ್ಡವರಾದ ಮೇಲೂ ಹಾಗೆಯೇ ಉಳಿದುಬಿಡುತ್ತದೆ. ಶಿಕ್ಷಕರು ಕಠಿಣವಾಗಿಯೂ ಇರಬೇಕು, ಪ್ರೀತಿಯಿಂದಲೂ ಇರಬೇಕು; ಇಲ್ಲದಿದ್ದರೆ, ಮಕ್ಕಳಿಗೆ ತಮ್ಮ ಗುರಿಯನ್ನು ತಲುಪಲು ಸೂಕ್ತ ಮಾರ್ಗದರ್ಶನ ನೀಡುವುದು ಕಷ್ಟವಾಗುತ್ತದೆ.

ಮಕ್ಕಳ ಮನಸ್ಸುಗಳಲ್ಲಿ ಮಾಹಿತಿಗಳನ್ನು ತುಂಬುವುದು ಮಾತ್ರ ಶಿಕ್ಷಣದ ಗುರಿಯಲ್ಲ. ಸಮಗ್ರವಾದ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯೇ ಶಿಕ್ಷಣದ ಉದ್ದೇಶ. ಮಕ್ಕಳಲ್ಲಿ ಹಂಚಿಕೊಳ್ಳುವ, ಪರಸ್ಪರ ಕಾಳಜಿ ವಹಿಸುವ ಗುಣಗಳ ಜೊತೆಗೆ ಅಹಿಂಸೆ ಮತ್ತು ಆತ್ಮೀಯತೆಯ ಮೌಲ್ಯಗಳನ್ನೂ ಬೆಳೆಸಬೇಕು.

ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರು ಯಾವಾಗಲೂ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಅವರೆಲ್ಲರೂ ಒಂದಾಗಿ ನಮ್ಮ ದೇಶದಲ್ಲಿ ಶಾಂತಿ ಮತ್ತು ಪ್ರಗತಿಯನ್ನು ಉಂಟುಮಾಡಲು ಪ್ರಯತ್ನಿಸಬೇಕು. ದೇಶದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬದಲಾವಣೆಯ ಅಲೆಯನ್ನು ತಂದವರು ಶಿಕ್ಷಕರು. ಆ ಸಂದರ್ಭದಲ್ಲಿ ಅವರು ಇಡೀ ರಾಷ್ಟ್ರಕ್ಕೆ ಸ್ಫೂರ್ತಿ ನೀಡುವ ಜವಾಬ್ದಾರಿಯನ್ನು ವಹಿಸಿಕೊಂಡರು. ಇಂದಿನ ಶಿಕ್ಷಕರೂ ಮಕ್ಕಳಿಗೆ ಅಂತಹ ಸ್ಫೂರ್ತಿಯನ್ನು ನೀಡಬೇಕು.

ಮಕ್ಕಳು ಪಾರದರ್ಶಕವಾದ ಗಾಜಿನ ಪಾತ್ರೆಗಳಂತೆ; ಅವುಗಳಲ್ಲಿ ನೀವು ಯಾವ ಜ್ಞಾನವನ್ನು ತುಂಬಿಸುತ್ತೀರೋ, ಅದೇ ಜ್ಞಾನವನ್ನು ಮಕ್ಕಳು ಪ್ರತಿಬಿಂಬಿಸುತ್ತಾರೆ, ಹಾಗೂ ಅದೇ ರೀತಿಯಲ್ಲಿ ವರ್ತಿಸುತ್ತಾರೆ. ನೀವು ಅವರಲ್ಲಿ ಭಯ ಮತ್ತು ತಪ್ಪು ವಿಚಾರಗಳನ್ನು ಬಿತ್ತಿದರೆ, ಅದಕ್ಕನುಗುಣವಾಗಿ ಅವರು ವರ್ತಿಸುತ್ತಾರೆ. ಆದರೆ, ನೀವು ಅವರಿಗೆ ಉತ್ತಮ ಆದರ್ಶಗಳನ್ನು ಮತ್ತು ಉದಾತ್ತ ಮೌಲ್ಯಗಳನ್ನು ಕಲಿಸಿದರೆ ಅವರು ಮುಂದೆ ಆದರ್ಶ ಮತ್ತು ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯುತ್ತಾರೆ. ನಾವು ಉತ್ತಮವಾದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರೆ ಆ ಮೌಲ್ಯಗಳನ್ನು ಇತರರಿಗೆ ಬೋಧಿಸುವ ಅರ್ಹತೆ ನಮಗೆ ದೊರೆಯುತ್ತದೆ. ಆದುದರಿಂದ ಶಿಕ್ಷಕರು ನುಡಿದಂತೆ ನಡೆಯುವ ಗುಣವನ್ನು ಮೈಗೂಡಿಸಿಕೊಳ್ಳುವುದು ಬಹಳ ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.