ಯಾವುದೇ ರೋಗವನ್ನು ನಿಯಂತ್ರಿಸುವ ಸಲುವಾಗಿ ಲಸಿಕೆಗಳನ್ನು ಅಭಿವೃದ್ಧಿಪಡಿಸಿದಾಗ ಅಡ್ಡಪರಿಣಾಮಗಳು ಇದ್ದೇ ಇರುತ್ತವೆ. ಸರ್ಕಾರಗಳು ಲಸಿಕೆಯಿಂದಾಗುವ ಲಾಭ ಮತ್ತು ಅಪಾಯ ಎರಡನ್ನೂ ಪರಿಶೀಲಿಸಿದ ನಂತರ ಲಸಿಕೆ ನೀಡಬೇಕು. ಆದರೆ ಅದಕ್ಕೂ ಮುನ್ನ ಲಸಿಕೆಯಲ್ಲಿನ ಅಪಾಯಗಳ ಬಗ್ಗೆ ಜನರಿಗೆ ಮಾಹಿತಿ ನೀಡಲೇಬೇಕು ಎಂದು ಕೋವಿಶೀಲ್ಡ್‌ಗೆ ಸಂಬಂಧಿಸಿದ ಶಿಫಾರಸಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿತ್ತು. ಆದರೆ ಭಾರತದಲ್ಲಿ ಕೋವಿಶೀಲ್ಡ್ ಬಳಕೆ ವೇಳೆ ಜನರಿಗೆ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ...
ಕೋವಿಶೀಲ್ಡ್‌ನಿಂದಾಗುವ ಅಡ್ಡಪರಿಣಾಮಗಳ ಲಕ್ಷಣಗಳನ್ನು ಹೇಗೆ ಗುರುತಿಸಬೇಕು ಎನ್ನುವ ಮಾಹಿತಿಯನ್ನು ಜನರಿಗೆ ನೀಡುವ ಸಲುವಾಗಿ ಲಸಿಕೆ ತಯಾರಿಕಾ ಕಂಪನಿ, ವೈದ್ಯರು ಹಾಗೂ ವಿಜ್ಞಾನಿಗಳ ಜೊತೆಗೆ ಕೇಂದ್ರ ಸರ್ಕಾರವು ಮಾತುಕತೆಯನ್ನು ಕೂಡಲೇ ನಡೆಸಬೇಕಿತ್ತು. ಆದರೆ, ಕೇಂದ್ರವು ನಿದ್ರಿಸುತ್ತಿದೆ. 2021ರಲ್ಲಿಯೇ ಯುರೋಪಿನ ಹಲವು ದೇಶಗಳು ಈ ಲಸಿಕೆಯ ಬಳಕೆಯನ್ನು ರದ್ದು ಮಾಡಿದ್ದವು. ಆದರೆ, ಕೇಂದ್ರ ಸರ್ಕಾರ ಮಾತ್ರ ಈ ಲಸಿಕೆಯನ್ನು ಪ್ರಚಾರ ಮಾಡುತ್ತಿತ್ತುಸೌರವ್ ಭಾರಧ್ವಾಜ್, ದೆಹಲಿಯ ಆರೋಗ್ಯ ಸಚಿವ
ಲಸಿಕೆ ತಯಾರಕ ಕಂಪನಿಯಿಂದ ಚುನಾವಣಾ ದೇಣಿಗೆಯನ್ನು ಸುಲಿಗೆ ಮಾಡುವ ಭರದಲ್ಲಿ ದೇಶದ ಜನರ ಜೀವವನ್ನು ಒತ್ತೆ ಇಟ್ಟಿರಿ. ಮಾರಕ ಔಷಧಗಳಿಗೆ ಒಪ್ಪಿಗೆ ನೀಡುವುದು ಎನ್ನುವುದು ವ್ಯಕ್ತಿಯೊಬ್ಬರನ್ನು ಕೊಲೆ ಮಾಡುವುದಕ್ಕೆ ಸಮ. ಆದ್ದರಿಂದ, ಯಾರು ಈ ಎಲ್ಲದಕ್ಕೂ ಹೊಣೆಗಾರರೊ ಅವರನ್ನು ಶಿಕ್ಷಿಸಬೇಕು ಮತ್ತು ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಜನರ ಜೀವದ ಜೊತೆ ಆಟವಾಡಿದವರನ್ನು ಈ ನೆಲದ ಕಾನೂನು ಮತ್ತು ಜನರು ಯಾವ ಕಾರಣಕ್ಕೂ ಕ್ಷಮಿಸುವುದಿಲ್ಲಅಖಿಲೇಶ್ ಯಾದವ್, ಸಮಾಜವಾದಿ ಪಕ್ಷದ ಮುಖ್ಯಸ್ಥ
ಮಿಸ್ಟರ್ ಪ್ರೈಮ್ ಮಿನಿಸ್ಟರ್, ಹೃದಯಾಘಾತದಿಂದ ಲಕ್ಷಾಂತರ ಸಾವು ಸಂಭವಿಸಿದೆ. ಮುಂದೆಯೂ ಲಸಿಕೆಯ ಅಡ್ಡಪರಿಣಾಮದಿಂದಾಗಿ ಸಾವು ಸಂಭವಿಸಬಹುದು. ಈ ಎಲ್ಲ ಸಾವಿಗೆ ಯಾರು ಹೊಣೆ? ಚುನಾವಣಾ ಬಾಂಡ್ ಮೂಲಕ ದೇಣಿಗೆ ಪಡೆದುಕೊಳ್ಳಲು, ಅಪಾಯಕಾರಿ ಲಸಿಕೆಯನ್ನು ಬಿಜೆಪಿಯು ದೇಶದ ಕೋಟ್ಯಂತರ ಜನರಿಗೆ ನೀಡಿದೆಆರ್ಜೆಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.