ತಿರುವನಂತಪುರ: ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆದ ಮಹಾಕುಂಭಮೇಳದ ಬಗ್ಗೆ ಅಪಹಾಸ್ಯ ಮಾಡಿದ್ದಕ್ಕಾಗಿ ಬಿಜೆಪಿ ಮುಖಂಡ, ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಮ್ಮ ಒಡೆತನದ ಪ್ರಮುಖ ಮಲಯಾಳಂ ಸುದ್ದಿವಾಹಿನಿ ಏಷ್ಯಾನೆಟ್ ನ್ಯೂಸ್ ಅನ್ನು ಬಹಿರಂಗವಾಗಿ ಟೀಕಿಸಿದ್ದಾರೆ.

ವಾಹಿನಿಯು ತನ್ನ ರಾಜಕೀಯ ‘ಕವರ್ ಸ್ಟೋರಿ’ಯಲ್ಲಿ ಕೇರಳದಲ್ಲಿ ಬಿಜೆಪಿಯ ಬೆಳವಣಿಗೆಯೊಂದಿಗೆ ಹೆಚ್ಚುತ್ತಿರುವ ಮಲಯಾಳಿಗಳ ಭಾಗವಹಿಸುವಿಕೆಯನ್ನು ಲಿಂಕ್ ಮಾಡುವ ಮೂಲಕ ಮಹಾ ಕುಂಭಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಪವಿತ್ರ ಸ್ನಾನ ಮಾಡುವ ದೃಶ್ಯಗಳೊಂದಿಗೆ ಜಾಹೀರಾತು ಎಂಬಂತೆ ನಿರೂಪಣೆ ಮಾಡಲಾಗಿತ್ತು. ಇದಕ್ಕೆ ಕೇರಳದ ಬಿಜೆಪಿ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರಿಂದಾಗಿ ಚಂದ್ರಶೇಖರ್ ಅವರು ತಮ್ಮದೇ ಚಾನೆಲ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಹಾಕುಂಭಮೇಳವನ್ನು ಅಪಹಾಸ್ಯ ಮಾಡುವ ಕಾರ್ಯಕ್ರಮಗಳಿಂದ ನಮಗೆ ನೋವಾಗಿದೆ ಎಂದು ಅನೇಕರು ನನಗೆ ಸಂದೇಶ ಕಳುಹಿಸಿದ್ದಾರೆ ಎಂದು ಚಂದ್ರಶೇಖರ್ ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಆದ್ದರಿಂದ ಚಂದ್ರಶೇಖರ್ ಅವರು ಈ ವಿಚಾರವನ್ನು ಚಾನೆಲ್ ನಾಯಕತ್ವದ ಗಮನಕ್ಕೆ ತಂದಿದ್ದು, ಲಕ್ಷಾಂತರ ಭಕ್ತರ ಧಾರ್ಮಿಕ ಕಾರ್ಯಕ್ರಮದ (ಕುಂಭಮೇಳ) ಬಗ್ಗೆ ಯಾವುದೇ ಅಚಾತುರ್ಯ ಅಥವಾ ಇತರ ಅಪಹಾಸ್ಯ ಮಾಡಬಾರದು ಎಂದು ವಿನಂತಿಸಿದ್ದಾರೆ.

‘ಯಾವುದೇ ಧರ್ಮದಲ್ಲಿರುವಂತೆ ಪ್ರತಿಯೊಬ್ಬ ಹಿಂದೂವಿಗೂ ತಮ್ಮ ನಂಬಿಕೆ ಮುಖ್ಯವಾಗಿದೆ. ದೇಶದಾದ್ಯಂತ ಮತ್ತು ಕೇರಳದಲ್ಲಿರುವ ಹಿಂದೂಗಳಿಗೆ ಇದು ಅನ್ವಯವಾಗಲಿದೆ. ಹಾಗಾಗಿ ಎಲ್ಲಾ ಧರ್ಮದವರು ಪರಸ್ಪರ ಗೌರವಿಸಬೇಕೆಂದು ವಿನಂತಿಸುತ್ತೇನೆ.

ಚಂದ್ರಶೇಖರ್ ಒಡೆತನದ ಜುಪಿಟರ್ ಎಂಟರ್ಟೈನ್ಮೆಂಟ್ ವೆಂಚರ್ಸ್ ಏಷ್ಯಾನೆಟ್ ನ್ಯೂಸ್ನಲ್ಲಿ ಪಾಲುದಾರಿಕೆ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.