ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಅಬಕಾರಿ ಹಗರಣ: 7ನೇ ಬಾರಿಯು ಇ.ಡಿ ವಿಚಾರಣೆಗೆ ಹಾಜರಾಗದ ಕೇಜ್ರಿವಾಲ್

Published 26 ಫೆಬ್ರುವರಿ 2024, 5:14 IST
Last Updated 26 ಫೆಬ್ರುವರಿ 2024, 5:14 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇ.ಡಿ) ನೀಡಿದ್ದ 7ನೇ ಸಮನ್ಸ್‌ಗೂ ಕ್ಯಾರೆ ಎನ್ನದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಇಂದೂ ಸಹ ವಿಚಾರಣೆಗೆ ಹಾಜರಾಗಿಲ್ಲ.

ಜಾರಿ ನಿರ್ದೇಶನಾಲಯವು ಸಮನ್ಸ್ ನೀಡುವುದನ್ನು ಬಿಟ್ಟು ನ್ಯಾಯಾಲಯದ ಆದೇಶಕ್ಕಾಗಿ ಕಾಯಲಿ ಎಂದು ಎಎಪಿ ಹೇಳಿದೆ.

ಏಳೂ ಸಮನ್ಸ್‌ಗಳನ್ನು ಕಾನೂನು ಬಾಹಿರ ಎಂದು ಕರೆದಿರುವ ಕೇಜ್ರಿವಾಲ್, ಒಮ್ಮೆಯೂ ವಿಚಾರಣೆಗೆ ಹಾಜರಾಗಿಲ್ಲ. ಸಮನ್ಸ್ ಹಿಂಪಡೆಯುವಂತೆ ಇ.ಡಿಗೆ ಪತ್ರವನ್ನೂ ಬರೆದಿದ್ದಾರೆ.

ಮುಖ್ಯಮಂತ್ರಿಗಳು ಇಂದೂ ಇ.ಡಿ ಮುಂದೆ ವಿಚಾರಣೆಗೆ ಹಾಜರಾಗುವುದಿಲ್ಲ. ಸಮನ್ಸ್ ಮಾನ್ಯತೆ ಕುರಿತಂತೆ ಮಾರ್ಚ್ 16ರಂದು ದೆಹಲಿ ಕೋರ್ಟ್ ವಿಚಾರಣೆ ನಡೆಸಲಿದೆ. ಸಮನ್ಸ್ ಕಳುಹಿಸುವುದನ್ನು ಬಿಟ್ಟು ನ್ಯಾಯಾಲಯದ ಆದೇಶಕ್ಕಾಗಿ ಇ.ಡಿ ಕಾಯಲಿ ಎಂದು ಎಎಪಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಕರಣವು ನ್ಯಾಯಾಲಯದ ಮುಂದೆ ವಿಚಾರಣೆಯಲ್ಲಿರುವಾಗ ಹೊಸ ಸಮನ್ಸ್ ನೀಡುವುದು ತಪ್ಪು ಎಂಬ ಕೇಜ್ರಿವಾಲ್ ವಾದವನ್ನು ತಿರಸ್ಕರಿಸಿದ್ದ ಇ.ಡಿ ಏಳನೇ ಸಮನ್ಸ್ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT