ಗುರುವಾರ, 17 ಜುಲೈ 2025
×
ADVERTISEMENT
ADVERTISEMENT

Nimisha Priya: ಕೇರಳದ ನರ್ಸ್ ನಿಮಿಷಾ ಪ್ರಿಯಾ ಗಲ್ಲುಶಿಕ್ಷೆ ಮುಂದೂಡಿಕೆ

Published : 15 ಜುಲೈ 2025, 9:17 IST
Last Updated : 15 ಜುಲೈ 2025, 9:17 IST
ಫಾಲೋ ಮಾಡಿ
Comments
ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ ಮುಂದೂಡಿಕೆ ಬಗ್ಗೆ ಅಧಿಕೃತ ಪ್ರಕಟಣೆ

ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ ಮುಂದೂಡಿಕೆ ಬಗ್ಗೆ ಅಧಿಕೃತ ಪ್ರಕಟಣೆ

ಮುಸ್ಲಿಯಾರ್ ಮಧ್ಯಪ್ರವೇಶ:
ಶಿಕ್ಷೆಯಿಂದ ಪಾರು ಮಾಡುವ ನಿಟ್ಟಿನಲ್ಲಿ ಕೇರಳದ ಪ್ರಭಾವಿ ಸುನ್ನಿ ಮುಸ್ಲಿಂ ಧಾರ್ಮಿಕ ಮುಖಂಡ ಕಾಂತಪುರಂ ಎ.ಪಿ. ಅಬೂಬಕ್ಕರ್‌ ಮುಸ್ಲಿಯಾರ್‌ ಮಧ್ಯಪ್ರವೇಶಿಸಿದ್ದರು. ‌ 94 ವರ್ಷದ ಶೇಕ್‌ ಅಬೂಬಕ್ಕರ್ ಅವರು ಯೆಮೆನ್‌ನಲ್ಲಿರುವ ಧಾರ್ಮಿಕ ಮುಖಂಡ, ಶೇಕ್‌ ಹಬೀರ್‌ ಉಮರ್‌ ನೇತೃತ್ವದಲ್ಲಿ ಸಭೆ ನಡೆಸಿದ್ದು, ಇದರಲ್ಲಿ ಮಹ್ದಿ ಕುಟುಂಬದ ಸದಸ್ಯರು ಭಾಗವಹಿಸಿದ್ದರು.
ನಿರಂತರ ಪ್ರಯತ್ನ:
ಪ್ರಿಯಾ ಕುಟುಂಬದ ಸದಸ್ಯರು ಹಾಗೂ ಸಂತ್ರಸ್ತರ ಕುಟುಂಬದ ಜೊತೆಗೆ ‘ಪರಸ್ಪರ ಒಪ್ಪುವ ಪರಿಹಾರ’ ಹುಡುಕುವ ನಿಟ್ಟಿನಲ್ಲಿ ಭಾರತ ಸರ್ಕಾರವು ಇತ್ತೀಚಿನ ದಿನಗಳಲ್ಲಿ ನಿರಂತರ ಪ್ರಯತ್ನಗಳನ್ನು ನಡೆಸಿತ್ತು. ಪ್ರಕರಣದ ಆರಂಭದಿಂದಲೂ ಭಾರತ ಸರ್ಕಾರವು ಸಾಧ್ಯವಿರುವ ಎಲ್ಲ ರೀತಿಯ ನೆರವುಗಳನ್ನು ಒದಗಿಸುತ್ತಿದೆ. ಸೂಕ್ಷ್ಮ ಪ್ರಕರಣವಾಗಿದ್ದರೂ ಕೂಡ, ಜೈಲಿನ ಅಧಿಕಾರಿಗಳು ಹಾಗೂ ಪ್ರಾಸಿಕ್ಯೂಟರ್‌ ಕಚೇರಿಯ ಜೊತೆಗೆ ನಿರಂತರ ಸಂಪರ್ಕ ಸಾಧಿಸಿ, ಗಲ್ಲುಶಿಕ್ಷೆಯನ್ನು ಮುಂದೂಡುವಂತೆ ಒತ್ತಾಯಿಸಿದ್ದರು.
ಗಲ್ಲುಶಿಕ್ಷೆ ಮುಂದೂಡಿಕೆಯಾಗಿರುವುದು ಸಂತಸ ಹಾಗೂ ಸಮಾಧಾನ ತಂದಿದೆ. ಶಿಕ್ಷೆ ತಡೆದು ಸುರಕ್ಷಿತವಾಗಿ ಭಾರತಕ್ಕೆ ಮರಳಿ ತರುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳು ಮುಂದುವರಿಯಲಿವೆ
ಟಾಮಿ ಥೋಮಸ್‌ ನಿಮಿಷಾ ಪ್ರಿಯಾ ಪತಿ
ಕುಟುಂಬಸ್ಥರ ಸಂತಸ
ನಿಮಿಷಾ ಪ್ರಿಯಾ ಗಲ್ಲುಶಿಕ್ಷೆ ಜಾರಿ ಮುಂದೂಡಿಕೆಯಾಗಿರುವುದು ಕೇರಳದಲ್ಲಿರುವ ಅವರ ಕುಟುಂಬಸ್ಥರಿಗೆ ಸಂತಸ ತಂದಿದೆ. ರಾಜ್ಯದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಧಾರ್ಮಿಕ ನಾಯಕರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ‘ನಿಮಿಷಾಳ ಗಲ್ಲುಶಿಕ್ಷೆ ಮುಂದೂಡಿಕೆಯಾಗಲು ಶ್ರಮಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಆಕೆಯ ಪತಿ ಟಾಮಿ ಥೋಮಸ್‌ ತಿಳಿಸಿದ್ದಾರೆ. ‘ಪ್ರಿಯಾಳ ತಾಯಿ ಅವರೇ ಗಲ್ಲುಶಿಕ್ಷೆ ಮುಂದೂಡಿಕೆಯಾಗಿರುವುದನ್ನು ತಿಳಿಸಿದರು. ಶಿಕ್ಷೆಯಿಂದ ಪಾರಾಗುವ ನಿಟ್ಟಿನಲ್ಲಿ ನಿರಂತರ ಹೋರಾಟ ಮುಂದುವರಿಯಲಿದೆ’ ಎಂದು ಹೇಳಿದ್ದಾರೆ. ‘ಗಲ್ಲುಶಿಕ್ಷೆ ಮುಂದೂಡಿಕೆಯಾಗಿರುವುದು ಸಮಾಧಾನ ಹಾಗೂ ಭರವಸೆಗಳನ್ನು ಹುಟ್ಟುಹಾಕಿದೆ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ. ‘ಸಹಾನುಭೂತಿ ಹೊಂದಿದ ಸಹೃದಯ ವ್ಯಕ್ತಿಗಳು ಈ ನಿಟ್ಟಿನಲ್ಲಿ ನಿರಂತರ ಕೆಲಸ ಮಾಡಿದ್ದಾರೆ. ನಿಮಿಷಾ ಅವರಿಗೆ ನ್ಯಾಯ ಒದಗಿಸಲು ಕಾಂತಪುರಂ ಎ.ಪಿ. ಅಬೂಬಕ್ಕರ್‌ ಮುಸ್ಲಿಯಾರ್‌ ಕೂಡ ನಿರಂತರ ಶ್ರಮಿಸಿದ್ದು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT