ರಾಹುಲ್ ಸೋನಿಯಾ ಕ್ಷಮೆಯಾಚಿಸಲಿ: ಬಿಜೆಪಿ
ನವದೆಹಲಿ: ಖರ್ಗೆ ಅವರು ಸಾವಿರಾರು ವರ್ಷಗಳಿಂದ ಸನಾತನ ನಂಬಿಕೆಯ ಸಂಕೇತವಾಗಿರುವ ಮಹಾಕುಂಭದ ಬಗ್ಗೆ ಜನರಿಗೆ ಇರುವ ಗೌರವವನ್ನು ‘ಅಪಹಾಸ್ಯ’ ಮಾಡಿದ್ದಾರೆ ಎಂದು ಬಿಜೆಪಿ ಸಂಸದ ಮತ್ತು ಪಕ್ಷದ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ವಾಗ್ದಾಳಿ ನಡೆಸಿದ್ದಾರೆ. ಪಕ್ಷವು ಇಂತಹ ಸನಾತನ ವಿರೋಧಿ ಚಿಂತನೆಯನ್ನು ಹೇಗೆ ಹೊಂದಿದೆ ಎಂಬುದಕ್ಕೆ ಕಾಂಗ್ರೆಸ್ ಮತ್ತು ಅದರ ನಾಯಕ ರಾಹುಲ್ ಗಾಂಧಿ ವಿವರಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ‘ಇಂತಹ ಹೇಳಿಕೆಗಾಗಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಇಡೀ ದೇಶ ಮತ್ತು ಸನಾತನ ಧರ್ಮವನ್ನು ನಂಬುವ ಪ್ರತಿಯೊಬ್ಬ ವ್ಯಕ್ತಿಯ ಕ್ಷಮೆಯಾಚಿಸಬೇಕು’ ಎಂದೂ ಒತ್ತಾಯಿಸಿದ್ದಾರೆ. ‘ಇಫ್ತಾರ್ ಕೂಟದಲ್ಲಿ ಭಾಗವಹಿಸುವುದರಿಂದ ಬಡತನ ನಿರ್ಮೂಲನೆಯಾಗುತ್ತದೆಯೇ ಎಂದು ಕೇಳುವಷ್ಟು ಧೈರ್ಯ ರಾಹುಲ್ ಮತ್ತು ಸೋನಿಯಾ ಅವರಿಗೆ ಇದೆಯೇ’ ಎಂದು ಪ್ರಶ್ನಿಸಿದ್ದಾರೆ.