ಕಾರ್ಪೊರೇಟರ್‌ಗಳು ಹೋಟೆಲ್‌ಗೆ ಸ್ಥಳಾಂತರ
ಮುಂಬೈ ಮೇಯರ್ ಪಟ್ಟಕ್ಕೆ ಪೈಪೋಟಿ ಬಿರುಸುಗೊಂಡ ಬೆನ್ನಲ್ಲೇ ಶಿವಸೇನಾ ಶಿಂದೆ ಬಣವು ಹೊಸದಾಗಿ ಆಯ್ಕೆಯಾದ ಕಾರ್ಪೊರೇಟರ್‌ಗಳನ್ನು ಹೋಟೆಲ್‌ಗೆ ಸ್ಥಳಾಂತರಿಸುವ ನಿರ್ಧಾರ ಕೈಗೊಂಡಿದೆ. ಬಿಎಂಸಿ ಮೇಯರ್ ಆಯ್ಕೆಯಲ್ಲಿ ಬಿಜೆಪಿಗೆ ಶಿಂದೆ ಬಣದ 28 ಕಾರ್ಪೊರೇಟರ್‌ಗಳು ನಿರ್ಣಾಯಕರಾಗಿದ್ದಾರೆ. ಶಿಂದೆ ಬಣವು ಮುಂಬೈ ಪಾಲಿಕೆಯ 90 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. 29ರಲ್ಲಿ ಜಯಗಳಿಸಿದೆ. ‘ಚುನಾವಣಾ ಗೆಲುವಿನ ಬೆನ್ನಲ್ಲೇ ಮನೋಲ್ಲಾಸಕ್ಕಾಗಿ ಹೊಸ ಕಾರ್ಪೊರೇಟರ್‌ಗಳನ್ನು ಬಾಂದ್ರಾದ ಐಷಾರಾಮಿ ಹೋಟೆಲ್‌ಗೆ ಸ್ಥಳಾಂತರಿಸಲಾಗಿದೆ’ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ. ಆದರೆ ಕಾರ್ಪೊರೇಟರ್‌ಗಳು ಎಷ್ಟು ದಿನ ಹೋಟೆಲ್‌ನಲ್ಲಿ ಉಳಿಯಲಿದ್ದಾರೆ ಈ ಸ್ಥಳಾಂತರದ ಹಿಂದಿನ ಉದ್ದೇಶವೇನು ಎನ್ನುವುದನ್ನು ಅವರು ಖಚಿತಪಡಿಸಿಲ್ಲ.