ಹಜಾರಿಬಾದ್ (ಜಾರ್ಖಂಡ್):  ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಭವಿಷ್ಯದಲ್ಲಿ ಯಾವುದೇ ಚುನಾವಣೆಗಳು ನಡೆಯುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದ್ದಾರೆ.
.ಮುಸ್ಲಿಂ ಮಹಿಳೆಯರ Voter ID ಪರಿಶೀಲನೆ: ಬಿಜೆಪಿ ಅಭ್ಯರ್ಥಿ ವಿರುದ್ಧ ಪ್ರಕರಣ.Lok Sabha Elections Live |ಬಹುತೇಕ ಶಾಂತಿಯುತವಾಗಿ ಕೊನೆಗೊಂಡ 4ನೇ ಹಂತ; ಶೇ 62.8ರಷ್ಟು ಮತದಾನ.
ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯವಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಗೆಲುವು ಸಾಧಿಸಿದರೆ, ಭವಿಷ್ಯದಲ್ಲಿ ಯಾವುದೇ ಚುನಾವಣೆಗಳು ನಡೆಯುವುದಿಲ್ಲ. ನಿಮಗೆ ಮೂಲಭೂತ ಹಕ್ಕುಗಳಿಲ್ಲದಿದ್ದರೆ, ಗುಲಾಮರಾಗುತ್ತೀರಿ ಎಂದು ತಿಳಿಸಿದ್ದಾರೆ.

‘ನೀವು (ಮೋದಿ) ಅದಾನಿ ಹಾಗೂ ಅಂಬಾನಿಯನ್ನು ಏಕೆ ಬಂಧಿಸುತ್ತಿಲ್ಲ? ನಿಮಗೆ ಧೈರ್ಯವಿಲ್ಲ ಆದರೆ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರನ್ನು ಬಂಧಿಸಿದ್ದೀರಿ’ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
.ನೇಪಾಳ | 100 ರೂ ನೋಟಲ್ಲಿ ಭಾರತಕ್ಕೆ ಸೇರಿದ ಭಾಗ; ವಿರೋಧಿಸಿದ ಆರ್ಥಿಕ ಸಲಹೆಗಾರ.LS Polls | ಮತದಾನದ ಮಾಹಿತಿ ಬಿಡುಗಡೆ ಕೋರಿದ್ದ ADR ಅರ್ಜಿ ವಿಚಾರಣೆ ಮೇ 17ರಂದು.
ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ಅವರು ಇಬ್ಬರು ಉದ್ಯಮಿಗಳಿಂದ ಬಾರಿ ಪ್ರಮಾಣದಲ್ಲಿ ಹಣ ಪಡೆದಿದ್ದಾರೆ ಎಂದು ಮೋದಿ ಆರೋಪಕ್ಕೆ ಖರ್ಗೆ ತಿರುಗೇಟು ನೀಡಿದ್ದಾರೆ.

ಅಧಿಕಾರ ದುರುಪಯೋಗ ಪಡಿಸಿಕೊಂಡು ವಿರೋಧ ಪಕ್ಷಗಳ ನಾಯಕರನ್ನು ಬಂಧಿಸಲಾಗಿದೆ. ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಬಂಧನಮುಕ್ತಗೊಳಿಸಲಾಗವುದು ಎಂದು ಖರ್ಗೆ ಹೇಳಿದ್ದಾರೆ.
.VIDEO | ಪ್ರಜ್ವಲ್ ಪ್ರಕರಣ: ಸರ್ಕಾರಿ ನಿವಾಸಕ್ಕೆ ಎಫ್ಎಸ್ಎಲ್ ತಂಡ ಭೇಟಿ.
ಈ ಬಾರಿ ಮೋದಿ ಅಧಿಕಾರಕ್ಕೆ ಬರುವುದು ಅಸಾಧ್ಯ ಎಂದ ಖರ್ಗೆ, ಚುನಾವಣಾ ಬಾಂಡ್ ಮೂಲಕ ಬಿಜೆಪಿಗೆ ದೇಣಿಗೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.