ನವದೆಹಲಿ: 2026ನೇ ಸಾಲಿನ ಪದ್ಮ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದೆ. ತೆರೆಮರೆಯ ಹಲವು ಸಾಧಕರಿಗೆ ಗೌರವ ಒಲಿದು ಬಂದಿದೆ.

5 ಸಾಧಕರು ‘ಪದ್ಮವಿಭೂಷಣ’, 13 ಸಾಧಕರು ‘ಪದ್ಮಭೂಷಣ’ ಮತ್ತು 113 ಮಂದಿ ತಮ್ಮ ಕ್ಷೇತ್ರಗಳಲ್ಲಿನ ಗಣನೀಯ ಸಾಧನೆಗಾಗಿ ‘ಪದ್ಮಶ್ರಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಗಣರಾಜೋತ್ಸವದ ಮುನ್ನದಿನವಾದ ಭಾನುವಾರ ಕೇಂದ್ರ ಗೃಹ ಸಚಿವಾಲಯವು ಈ ಸಾಲಿನ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಶತಾವಧಾನಿ ಆರ್. ಗಣೇಶ್ ಅವರು ‘ಪದ್ಮಭೂಷಣ’ ಗೌರವಕ್ಕೆ ಪಾತ್ರರಾಗಿದ್ದಾರೆ.

ಕರ್ನಾಟಕದ ಎಂ. ಅಂಕೇಗೌಡ, ಸುರೇಶ್ ಹನಗವಾಡಿ, ಎಸ್. ಜಿ. ಸುಶೀಲಮ್ಮ ಸೇರಿದಂತೆ ವಿವಿಧ ಕ್ಷೇತ್ರಗಳ 113 ಮಂದಿ ಸಾಧಕರಿಗೆ ‘ಪದ್ಮಶ್ರಿ’ ಗೌರವ ಲಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.