‘ಭಕ್ತರಿಗೆ ಸುಗಮ ದರ್ಶನದ ಖಾತರಿ’
ತೀರ್ಥಯಾತ್ರೆಯ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಅರುಣ್ ಎಸ್. ನಾಯರ್ ಅಧ್ಯಕ್ಷತೆಯಲ್ಲಿ ಶಬರಿಮಲೆಯಲ್ಲಿ ವಿವಿಧ ಇಲಾಖೆಗಳ ಪರಿಶೀಲನಾ ಸಭೆ ಗುರುವಾರ ನಡೆಯಿತು. ‘ಬೆಟ್ಟದ ದೇಗುಲದಲ್ಲಿ ಜನಸಂದಣಿಯನ್ನು ಈಗ ನಿಯಂತ್ರಣಕ್ಕೆ ತರಲಾಗಿದೆ. ಎಲ್ಲ ಭಕ್ತರಿಗೆ ಸುಗಮ ಮತ್ತು ಸುರಕ್ಷಿತ ದರ್ಶನವನ್ನು ಖಾತರಿಪಡಿಸಲಾಗಿದೆ. ಆರಂಭಿಕ ದಿನಗಳಲ್ಲಿ ಕಂಡುಬಂದ ನ್ಯೂನತೆಗಳನ್ನು ಸಂಪೂರ್ಣವಾಗಿ ಪರಿಹರಿಸಲಾಗಿದೆ’ ಎಂದು ಅರುಣ್ ಹೇಳಿದರು. ತುರ್ತು ವೈದ್ಯಕೀಯ ನೆರವು ಜನಸಂದಣಿ ನಿರ್ವಹಣೆ ನೈರ್ಮಲ್ಯ ಕುಡಿಯುವ ನೀರು ಮತ್ತು ಆಹಾರ ವ್ಯವಸ್ಥೆ ಕುರಿತು ಚರ್ಚಿಸಲಾಯಿತು.