ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರಿಗೆ ಚೂರಿ ಇರಿತ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಬಾಂಗ್ಲಾದೇಶಿ ಪ್ರಜೆ 30 ವರ್ಷದ ಮೊಹಮ್ಮದ್ ಶರೀಫುಲ್ ಇಸ್ಲಾಂಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
.ಸೈಫ್ ಹಲ್ಲೆ ಪ್ರಕರಣ: ಬಂಧಿತ ಬಾಂಗ್ಲಾ ವ್ಯಕ್ತಿಯ ವಿರುದ್ಧ ಸಾಕ್ಷ್ಯಗಳಿವೆ–ಪೊಲೀಸ್.
ಆತನ ಪೊಲೀಸ್ ಕಸ್ಟಡಿ ಅಂತ್ಯವಾಗಿದ್ದರಿಂದ ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಹೆಚ್ಚಿನ ವಿಚಾರಣೆಗೆ ಆತನ ಪೊಲೀಸ್ ಕಸ್ಟಡಿ ಇನ್ನೆರಡು ದಿನ ವಿಸ್ತರಿಸಬೇಕು ಎನ್ನುವ ಮನವಿಯನ್ನು ಕೋರ್ಟ್ ಮಾನ್ಯ ಮಾಡಲಿಲ್ಲ.

ಆರೋಪಿ 10 ದಿನಗಳಿಗೂ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ಎಂದು ಗಮನಿಸಿ ನ್ಯಾಯಾಲಯವು, ಪೊಲೀಸರ ಮನವಿಯನ್ನು ತಿರಸ್ಕರಿಸಿತು.
.ಚಾಕು ಇರಿತ ಪ್ರಕರಣ; ನಟ ಸೈಫ್ ಅಲಿ ಖಾನ್ ಹೇಳಿಕೆ ದಾಖಲಿಸಿಕೊಂಡ ಪೊಲೀಸರು.
ಸಲ್ಲಿಸಲಾದ ದಾಖಲೆಯು ತನಿಖೆ ಮುಗಿದಿದೆ ಎನ್ನುವುದನ್ನು ತೋರಿಸುತ್ತಿದೆ. ಕಸ್ಟಡಿಗೆ ನೀಡಲು ಯಾವುದೇ ಹೊಸ ಕಾರಣ ಕಂಡುಬಂದಿಲ್ಲ. ಹೊಸದೇನಾದರೂ ಬೆಳಕಿಗೆ ಬಂದರೆ ಅನುಮತಿ ಅವಧಿಯೊಳಗೆ ಪೊಲೀಸರು ಮತ್ತೆ ಆತನನ್ನು ಕಸ್ಟಡಿಗೆ ಪಡೆಯಬಹುದು ಎಂದು ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.

ಬಾಂದ್ರಾದದಲ್ಲಿರುವ ಅಪಾರ್ಟ್ಮೆಂಟ್ನ 12ನೇ ಮಹಡಿಯಲ್ಲಿರುವ ಸೈಫ್ ಅಲಿ ಖಾನ್ ಮನೆಗೆ ಜ. 16ರಂದು ನುಗ್ಗಿದ್ದ ಆರೋಪಿ, ಚೂರಿಯಲ್ಲಿ ಸತತವಾಗಿ ಇರಿದಿದ್ದ. ಗಾಯಗೊಂಡಿದ್ದ 54 ವರ್ಷದ ಸೈಫ್, ಲೀಲಾವತಿ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿಸಿಕೊಂಡು ಐದು ದಿನಗಳ ಬಳಿಕ ಬಿಡುಗಡೆಗೊಂಡಿದ್ದರು.

ಪೊಲೀಸರು ಆತನನ್ನು ಠಾಣೆಯಲ್ಲಿ ಬಂಧಿಸಿದ್ದು, ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ಗೆ ಬದಲಾಗಿ ಬಿಜೊಯ್ ದಾಸ್ ಎಂದು ಹೆಸರು ಬದಲಿಸಿಕೊಂಡಿದ್ದ.
.ಸೈಫ್ ‘ಸಿಂಹ’ದಂತೆ ಹೋಗಿ ‘ಹುಲಿ’ಯಂತೆ ಹೊರ ಬಂದಿದ್ದಾರೆ: ರಾಣೆಗೆ ಶೈನಾ ತಿರುಗೇಟು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.