ತಿರುವನಂತಪುರ: ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ನಡೆಸಲು ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್ಒ) ಸಾಧ್ಯವಿರುವ ಎಲ್ಲಾ ಸಹಾಯ ಮಾಡುತ್ತಿದ್ದೇವೆ. ಅವರಿಗೆ ಒತ್ತಡ ಹಾಕುವ ಉದ್ದೇಶ ಇಲ್ಲ ಎಂದು ಕೇರಳ ಮುಖ್ಯ ಚುನಾವಣಾ ಆಯುಕ್ತ ರತನ್ ಯು. ಕೇಲ್ಕರ್ ಶನಿವಾರ ಹೇಳಿದ್ದಾರೆ.
.ಎಸ್ಐಆರ್ ಅಂದರೆ ಮತದಾರರ ಪಟ್ಟಿ ಶುದ್ಧೀಕರಣ: ಅಮಿತ್ ಶಾ.
‘ಒತ್ತಡ ಹೇರಬೇಕು ಎನ್ನುವ ಉದ್ದೇಶದೊಂದಿಗೆ ಬಿಎಲ್ಒಗಳಿಗೆ ಗುರಿ ನಿಗದಿ ಪಡಿಸಿಲ್ಲ, ಆದರೆ ಎಸ್ಐಆರ್ ಅನ್ನು ನಿಗದಿತ ಸಮಯದೊಳಗೆ ಮುಗಿಸಬೇಕು ಎನ್ನುವುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ’ ಎಂದು ಅವರು ಮಾಧ್ಯಮದವರೊಂದಿಗೆ ಹೇಳಿದ್ದಾರೆ.

ಬಿಎಲ್ಒಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
.ರಾಜಸ್ಥಾನ | ಹೃದಯಾಘಾತದಿಂದ ಬಿಎಲ್ಒ ಸಾವು: ಎಸ್ಐಆರ್ ಒತ್ತಡ ಆರೋಪ.
ಕರ್ನಾಟಕ ಹಾಗೂ ತಮಿಳುನಾಡಿನ ಗಡಿಯಲ್ಲಿ ಕ್ರಮವಾಗಿ ಕನ್ನಡ ಹಾಗೂ ತಮಿಳು ಮಾತನಾಡುವ ಜನರಿದ್ದು, ಅಲ್ಲಿಯ ಜನ ಎಸ್ಐಆರ್ ನಮೂನೆಗಳನ್ನು ತುಂಬಿಸಲು ಸಹಾಯ ಮಾಡಲು ಬಿಎಲ್ಒಗಳ ಜೊತೆಗೆ ಈ ಭಾಷೆಯನ್ನು ತಿಳಿದಿರುವವನ್ನೂ ನೇಮಕ ಮಾಡಲಾಗಿದೆ. ಈವರೆಗೂ ಶೇ 70 ರಷ್ಟು ಮಂದಿ ನಮೂನೆಗಳನ್ನು ತುಂಬಿಸಿ ಹಿಂದಿರುಗಿಸಿದ್ದಾರೆ ಎಂದು ಹೇಳಿದ್ದಾರೆ.
.ಎಸ್ಐಆರ್ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಅರ್ಜಿ:ಚುನಾವಣಾ ಆಯೋಗಕ್ಕೆ ನೋಟಿಸ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.