ನವದೆಹಲಿ: ರಾಜಕೀಯ ಸಲಹಾ ಸಂಸ್ಥೆ ‘ಐ–ಪ್ಯಾಕ್’ ಕಚೇರಿಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಜನವರಿ 8ರಂದು ನಡೆಸಿದ ಶೋಧದ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಡ್ಡಿಪಡಿಸಿದ್ದು ‘ಅತಿ ಗಂಭೀರ ವಿಷಯ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಯಾವುದೇ ಗಂಭೀರ ಅಪರಾಧದ ಪ್ರಕರಣದಲ್ಲಿ ಕೇಂದ್ರೀಯ ಸಂಸ್ಥೆಗಳು ನಡೆಸುವ ತನಿಖೆಯಲ್ಲಿ ರಾಜ್ಯದ ತನಿಖಾ ಸಂಸ್ಥೆಗಳು ಮಧ್ಯಪ್ರವೇಶಿಸಬಹುದೇ ಎಂಬುದರ ಕುರಿತು ಪರಿಶೀಲನೆ ನಡೆಸಲು ಒಪ್ಪಿಗೆ ಸೂಚಿಸಿದೆ.

‘ಐ–ಪ್ಯಾಕ್’ ಕಚೇರಿ, ಸಂಸ್ಥೆಯ ನಿರ್ದೇಶಕ ಪ್ರತೀಕ್ ಜೈನ್ ಅವರ ನಿವಾಸದಲ್ಲಿ ನಡೆಸಿದ ಶೋಧಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರವು ದಾಖಲಿಸಿದ್ದ ಎಫ್ಐಆರ್ಗೆ ನ್ಯಾಯಾಲಯವು ತಡೆ ನೀಡಿದೆ. ದಾಳಿ ನಡೆಸಿದ ಸಂದರ್ಭದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂರಕ್ಷಿಸುವಂತೆ ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿದೆ.

‘ಐ–ಪ್ಯಾಕ್’ ಕಚೇರಿಯ ಮೇಲೆ ಇ.ಡಿ ದಾಳಿ ನಡೆಸಿದಾಗ ಪಶ್ಚಿಮ ಬಂಗಾಳ ಸರ್ಕಾರ ಅಡ್ಡಿಪಡಿಸಿದರ ಕುರಿತು ಸಿಬಿಐ ತನಿಖೆಗೆ ಕೋರಿ ಇ.ಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ, ವಿಪುಲ್ ಪಂಚೋಲಿ ನೇತೃತ್ವದ ನ್ಯಾಯಪೀಠವು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸರ್ಕಾರ, ಡಿಜಿಪಿ ರಾಜೀವ್ ಕುಮಾರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದೆ.

‘ನಮ್ಮ ಅಭಿಪ್ರಾಯದ ಪ್ರಕಾರ, ದೇಶದಲ್ಲಿ ಕಾನೂನಿನ ಪಾಲನೆ ಮಾಡುವುದು ಹಾಗೂ ಪ್ರತಿಯೊಂದು ಸಂಸ್ಥೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು ಅತ್ಯಗತ್ಯ. ಅಪರಾಧಿಗಳು ನಿರ್ದಿಷ್ಟ ರಾಜ್ಯಗಳ ಕಾನೂನಿನ ಸಂಸ್ಥೆಗಳಲ್ಲಿ ರಕ್ಷಣೆ ಪಡೆಯದಂತೆ ಪರಿಶೀಲಿಸುವ ಅಗತ್ಯವಿದೆ’ ಎಂದು ನ್ಯಾಯಪೀಠ ತಿಳಿಸಿದೆ.

‘ಗಂಭೀರ ಪ್ರಶ್ನೆಗಳನ್ನು ಈ ಘಟನೆ ಮೂಡಿಸಿದೆ. ಇದನ್ನು ಇತ್ಯರ್ಥಪಡಿಸದೇ ಬಿಟ್ಟರೆ, ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ಬೇರೆ ಬೇರೆ ರಾಜ್ಯ, ಸ್ಥಳಗಳಲ್ಲಿ ಬೇರೆ ಬೇರೆ ಪಕ್ಷಗಳು ಆಡಳಿತ ನಡೆಸುತ್ತಿದ್ದು, ಕಾನೂನುಬಾಹಿರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ’ ಎಂದು ಪೀಠ ಕಳವಳ ವ್ಯಕ್ತಪಡಿಸಿದೆ.

‘ಯಾವುದೇ ರಾಜಕೀಯ ಪಕ್ಷದ ಚುನಾವಣಾ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಕೇಂದ್ರದ ತನಿಖಾ ಸಂಸ್ಥೆಗೆ ಇಲ್ಲ’ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಇದೇ ಸಂದರ್ಭದಲ್ಲಿ, ‘ಯಾವುದೇ ಗಂಭೀರ ಅಪರಾಧ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ಸಂಸ್ಥೆಗಳು ಪ್ರಾಮಾಣಿಕವಾಗಿ ನಡೆಸುತ್ತಿದ್ದರೆ, ಪಕ್ಷಗಳ ಗುರಾಣಿಯ ಅಡಿಯಲ್ಲಿ ಅವುಗಳ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಬಹುದೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ’ ಎಂದು ಹೇಳಿದೆ.

ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರುವರಿ 3ಕ್ಕೆ ನಿಗದಪಡಿಸಿದೆ.

‘ಮುಖ್ಯಮಂತ್ರಿಯಾಗಿ ಹೋಗಿಲ್ಲ ಟಿಎಂಸಿ ಅಧ್ಯಕ್ಷೆಯಾಗಿ ಹೋಗಿದ್ದೆ’

‘ಟಿಎಂಸಿಯ ಚುನಾವಣಾ ಕೆಲಸ ವಹಿಸಿದ್ದ ಪ್ರತೀಕ್ ಜೈನ್ ಅವರ ‘ಐ–ಪ್ಯಾಕ್’ ಕಚೇರಿಗೆ ದಾಳಿ ನಡೆದಾಗ ಅನಧಿಕೃತ ವ್ಯಕ್ತಿಗಳು ಪ್ರವೇಶಿಸಿದ್ದಾರೆ ಎಂಬ ಮಾಹಿತಿ ತಿಳಿಯಿತು. ಹೀಗಾಗಿ ಜನವರಿ 8ರಂದು ಆ ಕಚೇರಿಗೆ ಭೇಟಿ ನೀಡಿದ್ದೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ಗೆ ತಿಳಿಸಿದ್ದಾರೆ. ‘ಐ–ಪ್ಯಾಕ್’ ಕಚೇರಿಗೆ ಮಮತಾ ಅವರು ಮುಖ್ಯಮಂತ್ರಿಯಾಗಿ ಪ್ರವೇಶಿಸಿರಲಿಲ್ಲ. ತೃಣಮೂಲ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿ ಅಲ್ಲಿಗೆ ತೆರಳಿದ್ದರು’ ಎಂದು ಅವರ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ನ್ಯಾಯಪೀಠಕ್ಕೆ ತಿಳಿಸಿದರು.

‘ಪಶ್ಚಿಮ ಬಂಗಾಳದಲ್ಲಿ ‘ಐ–ಪ್ಯಾಕ್’ ಸಂಸ್ಥೆಯು ಟಿಎಂಸಿಯ ಚುನಾವಣಾ ಮೇಲುಸ್ತುವಾರಿ ವಹಿಸಿದೆ. 2021ರಲ್ಲಿ ಸಂಸ್ಥೆಯ ಜೊತೆಗೆ ಪಕ್ಷವು ಔಪಾಚಾರಿಕ ಒಪ್ಪಂದವನ್ನು ಮಾಡಿಕೊಂಡಿದೆ. ಈ ವಿಚಾರ ಜಾರಿ ನಿರ್ದೇಶನಾಯಲದ (ಇ.ಡಿ) ಅಧಿಕಾರಿಗಳಿಗೂ ತಿಳಿದಿತ್ತು. ಅಲ್ಲಿ ದತ್ತಾಂಶಗಳನ್ನು ಸಂಗ್ರಹಿಸಿಡಲಾಗಿತ್ತು ಎಂಬುದರ ಅರಿವು ಅವರಿಗಿತ್ತು’ ಎಂದು ಸಿಬಲ್ ಹೇಳಿದರು.

‘ಚುನಾವಣೆ ಹತ್ತಿರದಲ್ಲಿರುವ ಸಂದರ್ಭದಲ್ಲಿಯೇ ಅಧಿಕಾರಿಗಳು ಅಲ್ಲಿಗೆ ಹೋಗುವ ಅಗತ್ಯವಾದರೂ ಏನಿತ್ತು? ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ 2024ರ ಫೆಬ್ರುವರಿ 24ರಂದು ಕೊನೆಯದಾಗಿ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು. ಅಂದಿನಿಂದ ಅವರು ಏನು ಮಾಡುತ್ತಿದ್ದರು? ಚುನಾವಣೆ ಹತ್ತಿರವಾದ ಸಂದರ್ಭದಲ್ಲೇ ಇಷ್ಟೊಂದು ಉತ್ಸಾಹ ಏಕೆ? ಹೀಗಾದರೆ ನಾವು ಚುನಾವಣೆ ಎದುರಿಸುವುದು ಹೇಗೆ?’ ಎಂದು ನ್ಯಾಯಪೀಠದ ಗಮನ ಸೆಳೆದರು.

‘ಟಿಎಂಸಿಯ ಅಧ್ಯಕ್ಷೆಯಾಗಿ ಅವರು (ಮಮತಾ) ಅಲ್ಲಿಗೆ ಹೋಗುವುದು ಹಕ್ಕು’ ಎಂದು ಸಿಬಲ್ ಪ್ರತಿಪಾದಿಸಿದರು. ‘ಒಂದು ಪಕ್ಷದ ಎಲ್ಲ ಮಾಹಿತಿ ಪಡೆದಿರುವ ಕಚೇರಿಗೆ ಇ.ಡಿ ಏಕೆ ಹೋಗಬೇಕು ಎಂದೂ ಅವರು ಪ್ರಶ್ನಿಸಿದರು.

ಇ.ಡಿ ಸಲ್ಲಿಸಿದ ಅರ್ಜಿಯ ಔಚಿತ್ಯವನ್ನು ಪ್ರಶ್ನಿಸಿದ ಸಿಬಲ್ ‘ಈ ವಿಷಯವನ್ನು ಕಲ್ಕತ್ತ ಹೈಕೋರ್ಟ್ ವಿಚಾರಣೆ ನಡೆಸಬೇಕು. ಚುನಾವಣೆಯ ಸಂದರ್ಭದಲ್ಲಿಯೇ ಇ.ಡಿ. ತನಿಖೆಯ ನೆಪದಲ್ಲಿ ಮಧ್ಯಪ್ರವೇಶಿಸುತ್ತಿರುವ ಉದಾಹರಣೆ ಎದುರಲ್ಲಿ ಇದೆ. ಹೈಕೋರ್ಟ್ 226ರ ವಿಧಿಯಡಿಯಲ್ಲಿ ವಿಚಾರಣೆ ನಡೆಸಬೇಕು. ಅದು ಶ್ರೇಣೀಕೃತ ವ್ಯವಸ್ಥೆಯಾಗಿದೆ. ಅವರು (ಇ.ಡಿ) ಸಮನಾಂತರ ವಿಚಾರಣೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ’ ಎಂದರು.

ಅಡ್ಡಿಪಡಿಸಿದ್ದು ಸುಳ್ಳು:

‘ದಾಳಿ ವೇಳೆ ಮಮತಾ ಅವರು ಹಸ್ತಕ್ಷೇಪ ನಡೆಸಿ ಅಡ್ಡಿಪಡಿಸಿದ್ದರು ಎಂಬ ಇ.ಡಿ ಆರೋಪವನ್ನು ಸಾರಸಗಟಾಗಿ ತಳ್ಳಿಹಾಕಿದ ಸಿಬಲ್ ಮುಖ್ಯಮಂತ್ರಿ ಅವರು ಕಚೇರಿಗೆ ಭೇಟಿ ನೀಡಿ ಎಲ್ಲ ಉಪಕರಣಗಳನ್ನು ಹೊತ್ತೊಯ್ದಿದ್ದಾರೆ ಎಂಬುದು ಸುಳ್ಳು. ಇ.ಡಿ ಅಧಿಕಾರಿಗಳು ಸಲ್ಲಿಸಿದ ಪಂಚನಾಮದಿಂದ ಎಲ್ಲವೂ ದೃಢೀಕೃತಗೊಂಡಿದೆ. ಇದು ಪೂರ್ವಗ್ರಹದಿಂದ ಸೃಷ್ಟಿಸಲಾಗಿರುವ ಸಂಗತಿ’ ಎಂದು ಈ ವೇಳೆ ನ್ಯಾಯಪೀಠದ ಗಮನಸೆಳೆದರು. ಸರ್ಕಾರದ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ‘ಮುಖ್ಯಮಂತ್ರಿಗಳು ‘ಝಡ್ಪ್ಲಸ್’ ಭದ್ರತೆ ಹೊಂದಿದ್ದು ಐ–ಪ್ಯಾಕ್ ಕಚೇರಿ ಪ್ರವೇಶಿಸುವ ವೇಳೆ ಡಿಜಿಪಿ ರಾಜೀವ್ ಕುಮಾರ್ ಜೊತೆಗಿರುವುದು ಕರ್ತವ್ಯದ ಭಾಗವಾಗಿದೆ’ ಎಂದು ತಿಳಿಸಿದರು.

ವಿಚಾರಣೆ ವೇಳೆ ಗದ್ದಲ: ಅಸಮಾಧಾನ

ನವದೆಹಲಿ: ಐ–ಪ್ಯಾಕ್ ಕಚೇರಿಯಲ್ಲಿ ಶೋಧಕ್ಕೆ ಸಂಬಂಧಿಸಿ ಜ.9ರಂದು ಕಲ್ಕತ್ತ ಹೈಕೋರ್ಟ್ನಲ್ಲಿ ನಡೆದ ವಿಚಾರಣೆ ವೇಳೆ ಉಂಟಾದ ಗದ್ದಲಕ್ಕೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ನ್ಯಾಯಾಲಯದ ಆವರಣದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸುವಂತೆ ಟಿಎಂಸಿಯ ಕಾನೂನು ವಿಭಾಗವು ವಾಟ್ಸ್ಆ್ಯಪ್ ಸಂದೇಶಗಳನ್ನು ರವಾನಿಸಿತ್ತು’ ಎಂದು ಇ.ಡಿಯ ಪರ ಹಾಜರಾದ ಸಾಲಿಟಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್ ನ್ಯಾಯಪೀಠದದ ಗಮನಸೆಳೆದರು.

‘ಪ್ರಜಾಪ್ರಭುತ್ವವು ದೊಂಬಿ ಪ್ರಭುತ್ವವಾಗಿ ಬದಲಾಯಿತು. ಇದನ್ನೇ ಹೈಕೋರ್ಟ್ನ ದಾಖಲೆಗಳು ತಿಳಿಸುತ್ತಿವೆ. ದೊಡ್ಡ ಸಂಖ್ಯೆಯಲ್ಲಿ ವಕೀಲರು ಹಾಗೂ ಇತರರು ನ್ಯಾಯಾಲಯದ ಆವರಣ ಪ್ರವೇಶಿಸಿ ಗೊಂದಲ ಸೃಷ್ಟಿಸಿದರು. ಇದರಿಂದ ವಿಚಾರಣೆ ನಡೆಸಲು ನ್ಯಾಯಪೀಠಕ್ಕೆ ಸಾಧ್ಯವಾಗಿಲ್ಲ’ ಎಂದರು.

ನಂತರ ನ್ಯಾಯಪೀಠವು ಮೌಖಿಕವಾಗಿ ‘ಎಲ್ಲರೂ ಬನ್ನಿ ಎಂದು ಕರೆಯಲು ಅದು ಜಂತರ್– ಮಂತರ್ ಹೌದೇ’ ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಮೆಹ್ತಾ ‘ಹೈಕೋರ್ಟ್ ಅನ್ನು ಜಂತರ್–ಮಂತರ್ ಅಗಿ ಬದಲಾಯಿಸಲಾಗಿತ್ತು. ಬಸ್ ಹಾಗೂ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು’ ಎಂದು ತಿಳಿಸಿದರು. ‘ಹೈಕೋರ್ಟ್ನಲ್ಲಿ ನಡೆದ ಘಟನೆಗಳು ತೀವ್ರ ತೊಂದರೆ ಉಂಟುಮಾಡಿದೆ’ ಎಂದು ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿತು. ಇದಕ್ಕೆ ಉತ್ತರಿಸಿದ ಮಮತಾ ಪರ ಹಾಜರಾದ ಕಪಿಲ್ ಸಿಬಲ್ ‘ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.