ನವದೆಹಲಿ: ಮನೆ ಕೆಲಸಗಾರರಿಗೆ ಸಮಗ್ರ ಕಾನೂನು ಚೌಕಟ್ಟು ಮತ್ತು ಕನಿಷ್ಠ ವೇತನ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.

ಅಸ್ತಿತ್ವದಲ್ಲಿರುವ ಕಾನೂನುಗಳನ್ನು ತಿದ್ದುಪಡಿ ಮಾಡುವ ಬಗ್ಗೆ ಪರಿಗಣಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕೇಳುವ ಆದೇಶ ಹೊರಡಿಸಿ, ಶಾಸಕಾಂಗದ ಕ್ಷೇತ್ರವನ್ನು ಅತಿಕ್ರಮಿಸಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.

‘ಕಾರ್ಮಿಕರ ಶೋಷಣೆ ಇರುವುದು ನಿಜ. ಆದರೆ, ಕಾರ್ಮಿಕ ಸಂಘಟನೆಗಳು ದೇಶದ ಕೈಗಾರಿಕೀಕರಣದ ಬೆಳವಣಿಗೆಗೆ ತಡೆಯನ್ನುಂಟು ಮಾಡಿವೆ. ‘ಝಂಡಾ’ ಸಂಘಟನೆಗಳಿಂದಾಗಿ ದೇಶಾದ್ಯಂತ ಎಲ್ಲಾ ಸಾಂಪ್ರದಾಯಿಕ ಕೈಗಾರಿಕೆಗಳು ಮುಚ್ಚಿವೆ. ಅವರು ಕೆಲಸ ಮಾಡಲು ಬಯಸುವುದಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅಸಮಾಧಾನ ವ್ಯಕ್ತಪಡಿಸಿದರು.

ಆದಾಗ್ಯೂ, ಕಾರ್ಮಿಕರ ದುಃಸ್ಥಿತಿಗಳ ಬಗ್ಗೆ ಎತ್ತಿ ತೋರಿಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಾಯ ಪಡೆಯುವಂತೆ ಮನೆ ಕೆಲಸಗಾರರ ಸಂಘವಾದ ಪೆಣ್ ತೊಳಿಳಾಳರ್ಗಳ್ ಸಂಘಮ್ ಸೇರಿದಂತೆ ಇತರ ಅರ್ಜಿದಾರರಿಗೆ ಕೋರ್ಟ್ ಹೇಳಿದೆ.

ಮನೆ ಕೆಲಸಗಾರರಿಗೆ ಕನಿಷ್ಠ ವೇತನ ಪಾವತಿಸದಿರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಗುರುತಿಸುವುದು, ರಾಜ್ಯಗಳಾದ್ಯಂತ ಕನಿಷ್ಠ ವೇತನ ನಿಯಮಗಳ ಜಾರಿ ಮಾಡುವುದು ಸೇರಿದಂತೆ ಹಲವು ಪರಿಹಾರಗಳನ್ನು ನೀಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.