ಪ್ರತೀ ವರ್ಷ ಡಿಸೆಂಬರ್ 26ರಂದು ‘ವೀರ ಬಾಲ ದಿವಸವನ್ನು ಆಚರಿಸಲಾಗುತ್ತದೆ. ಈ ಆಚರಣೆಯ ಹಿಂದಿನ ಇತಿಹಾಸ ಹಾಗೂ ಮಹತ್ವವೇನು ಎಂಬುವುದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಇತಿಹಾಸ:

ಮೊಘಲರ ಆಳ್ವಿಕೆಯಲ್ಲಿ ಪಂಜಾಬ್ನಲ್ಲಿ ಸಿಖ್ಖರ ಪ್ರಮುಖ ನಾಯಕರಾಗಿದ್ದ ಗುರು ಗೋವಿಂದ ಸಿಂಗ್ ಅವರು 1699 ರಲ್ಲಿ ಖಾಲ್ಸಾ ಪಂಥವನ್ನು ಸ್ಥಾಪಿಸಿದರು. ಸಿಖ್ ಸಮುದಾಯದ ಜನರನ್ನು ಧಾರ್ಮಿಕ ಕಿರುಕುಳದಿಂದ ರಕ್ಷಿಸುವ ಉದ್ದೇಶವನ್ನು ಈ ಪಂಥ ಹೊಂದಿತ್ತು.

ಗೋವಿಂದ ಸಿಂಗ್ ಅವರ ನಾಲ್ವರು ಮಕ್ಕಳಾದ ಅಜಿತ್, ಜುಝಾರ್, ಜೋರಾವರ್ ಸಿಂಗ್ ಮತ್ತು ಫತೇಹ್ ಸಿಂಗ್ ಇವರೆಲ್ಲರೂ ಖಾಲ್ಸಾದ ಭಾಗವಾಗಿದ್ದರು. ಅವರನ್ನು ಚಾರ್ ಸಾಹಿಬ್ಜಾದಾ ಖಾಲ್ಸಾ ಎಂದೇ ಕರೆಯಲಾಗುತ್ತಿತ್ತು. ಆದರೆ ಈ ನಾಲ್ವರನ್ನು ಮೊಘಲ್ ಅರಸರು ಗಲ್ಲಿಗೇರಿಸಿದ್ದರು.

ಮೊಘಲ್ ಅರಸರಿಂದ ಗಲ್ಲಿಗೇರಿದ 10ನೇ ಸಿಖ್ ಗುರು ಗೋವಿಂದ ಸಿಂಗ್ ಅವರ ನಾಲ್ವರು ಪುತ್ರರ ಸ್ಮರಣಾರ್ಥ ಡಿಸೆಂಬರ್ 26 ಅನ್ನು ಇನ್ನು ಮುಂದೆ ‘ವೀರ ಬಾಲ ದಿವಸ’ ಎಂದು ಆಚರಿಸಲಾಗುವುದು ಎಂದು 2022ರ ಜನವರಿ 9ರಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಅಂದಿನಿಂದ ವೀರ ಬಾಲ ದಿವಸವನ್ನು ಆಚರಿಸಲಾಗುತ್ತಿದೆ.
.ಡಿಸೆಂಬರ್ 26 ಇನ್ನು ‘ವೀರ ಬಾಲ ದಿವಸ’: ಗುರು ಗೋವಿಂದ ಸಿಂಗ್ ಸ್ಮರಣಾರ್ಥ .
ಗೋವಿಂದ ಸಿಂಗ್ ಜನ್ಮ ದಿನಾಚರಣೆಯ ವೇಳೆ( 2022ರ ಜನವರಿ 9) ಪ್ರಧಾನಿ ಅವರು ಈ ಪ್ರಕಟಣೆ ನೀಡಿದ್ದರು. ‘ಗುರುವಿನ ಮಕ್ಕಳ ತ್ಯಾಗ ಮತ್ತು ಅವರ ಸಾವಿಗೆ ನ್ಯಾಯ ಒದಗಿಸಲು ಅವರಿಗೆ ಸಲ್ಲಿಸುತ್ತಿರುವ ಗೌರವವಾಗಿದೆ. ಸಾಹಿಬ್ಜಾದಾ ಜೋರಾವರ್ ಸಿಂಗ್ ಜಿ ಮತ್ತು ಸಾಹಿಬ್ಜಾದಾ ಫತೇಹ್ ಸಿಂಗ್ ಜಿ ಅವರನ್ನು ಜೀವಂತವಾಗಿ ಹೂತು ಹಾಕಿದ ದಿನವೂ ಇದಾಗಿದೆ’ ಎಂದು ಪ್ರಧಾನಿ ಸ್ಮರಿಸಿದ್ದರು.

ಮಹತ್ವ:

ಗುರು ಗೋವಿಂದ ಸಿಂಗ್ ಅವರ ಮಕ್ಕಳ ತ್ಯಾಗವನ್ನು ಸ್ಮರಿಸಲು ಈ ದಿನದಂದು ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ದಿನವು ಸಿಖ್ ಧರ್ಮದ ಅನುಯಾಯಿಗಳಿಗೆ ಮಾತ್ರವಲ್ಲದೆ ಎಲ್ಲಾ ಭಾರತೀಯರಿಗೆ ಸ್ಫೂರ್ತಿದಾಯಕ ದಿನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.