ಮೈಸೂರು: ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹಿರಿಯ ಸಹೋದರಿ ದಿವಂಗತ ಗಾಯತ್ರಿದೇವಿ ಅವರ ಮೊಮ್ಮಗ ಯದುವೀರ್ ಗೋಪಾಲ್ರಾಜ್ ಅರಸ್ (23) ಅವರನ್ನು ದತ್ತು ಸ್ವೀಕರಿಸಲು ರಾಜಮನೆತನದವರೆಲ್ಲರೂ ಒಮ್ಮತದಿಂದ ನಿರ್ಧರಿಸಿದ್ದು, ಫೆ. 23ರಂದು ದತ್ತು ಸ್ವೀಕಾರ ನಡೆಯಲಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.

ನಗರದ ಅಂಬಾವಿಲಾಸ ಅರಮನೆಯಲ್ಲಿ ಕುಲದೇವತೆ ಚಾಮುಂಡೇಶ್ವರಿ ದೇವಿ ಮತ್ತು ಮನೆತನದ ಕುಲಪುರುಷ ಶ್ರೀಕೃಷ್ಣಗೆ ನಮಿಸಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಯದುವೀರ್ ಅವರನ್ನು ನಿಯೋಜಿತ ದತ್ತುಪತ್ರ ಎಂದು ಘೋಷಿಸಲು ಸಂತೋಷಪಡುತ್ತೇನೆ’ ಎಂದು ಗದ್ಗದಿತರಾದರು. ಉಮ್ಮಳಿಸಿ ಬಂದ ದುಃಖದ ನಡುವೆಯೂ ಕಣ್ಣಾಲಿಗಳನ್ನು ಒರೆಸಿಕೊಳ್ಳುತ್ತಲೇ ಪ್ರಕಟಣಾ ಪತ್ರವನ್ನು ಓದಿದ ಅವರು, ನಮ್ಮ ಈ ನಿರ್ಧಾರಕ್ಕೆ ಪತಿ ಶ್ರೀಕಂಠದತ್ತರ ಅನಮೋದನೆ ಮತ್ತು ಆಶೀರ್ವಾದ ಇದೆ ಎಂಬುದು ನನ್ನ ಅಚಲವಾದ ನಂಬಿಕೆ. ಪತಿಯ ಸಹೋದರಿಯರು ಮತ್ತು ಕುಟುಂಬದವರೆಲ್ಲರೂ ಸೇರಿಯೇ ಈ ತೀರ್ಮಾನ ಕೈಗೊಂಡಿದ್ದೇವೆ. ಯದುವಂಶದ ಪರಂಪರೆ, ರೀತಿ–ರಿವಾಜುಗಳಿಗೆ ಅನುಗುಣವಾಗಿ ದತ್ತು ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.