ತಿಪಟೂರು: ‘ಶ್ರಮಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬ ಭರವಸೆ ಇದೆ. ಅದು ಸಿಕ್ಕೇ ಸಿಗುತ್ತದೆ ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶುಕ್ರವಾರ ಇಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತುಮಕೂರು ಜಿಲ್ಲೆ ತಿಪಟೂರಿನಲ್ಲಿ ಈ ಕುರಿತು ಮಾತನಾಡಿರುವ ಅವರು, ‘ಶಿವರಾತ್ರಿ ಹಬ್ಬದ ನಂತರ ಶುಭವಾಗಲಿದೆ. ಎಲ್ಲರಿಗೂ ಒಳ್ಳೆಯದಾಗಲಿದೆ’ ಎಂದು ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರು, ‘ಸರ್, ದೆಹಲಿ ಭೇಟಿಯ ನಂತರ ನೀವು ಹೆಚ್ಚು ಆತ್ಮವಿಶ್ವಾಸದಿಂದ ಇದ್ದಂತೆ ಕಾಣುತ್ತಿದೆ. ನಿಮ್ಮ ಭೇಟಿಗೆ ಫಲ ಸಿಕ್ಕಿದೆಯೇ’ ಎಂದು ಗಮನಸೆಳೆದಾಗ, ನಸುನಗುತ್ತಾ, ‘ಏನೇನಾಯಿತು ಎಂದು ಹೇಳಲಿಕ್ಕಾಗುವುದಿಲ್ಲ. ಶ್ರಮಕ್ಕೆ ಯಶಸ್ಸು ಸಿಗುತ್ತದೆ’ ಎಂದಷ್ಟೇ ಉತ್ತರಿಸಿದರು.

‘ನಿಮ್ಮನ್ನು ಮತ್ತು ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಸಭೆಗೆ ಕರೆದಿದೆಯೇ’ ಎಂದು ಪ್ರಶ್ನಿಸಿದಾಗ, ‘ಆ ಬಗ್ಗೆ ನಾನೇನೂ ಹೇಳುವುದಿಲ್ಲ’ ಎಂದರು.

ಪಕ್ಕದಲ್ಲಿದ್ದರೂ ಮಾತಿಲ್ಲ: ಇದಕ್ಕೂ ಮುನ್ನ ಅಂತರರಾಷ್ಟ್ರೀಯ ಅಣೆಕಟ್ಟೆ ಸುರಕ್ಷತೆ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಭಾಗವಹಿಸಿದ್ದರು.

ಉಭಯ ನಾಯಕರು ವೇದಿಕೆಯಲ್ಲಿ ಅಕ್ಕ–ಪಕ್ಕವೇ ಕುಳಿತಿದ್ದರು. ಆದರೆ ಇಬ್ಬರು ನಾಯಕರೂ ಪರಸ್ಪರ ಹೆಚ್ಚು ಮಾತನಾಡಲಿಲ್ಲ.

ತಿಪಟೂರಿನ ತಾಲ್ಲೂಕಿನ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ್ದ ಅವರು ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ‘ಮುಂದೆ ಏನಾಗುತ್ತದೆ ಎಂದು ಚರ್ಚಿಸುವುದಿಲ್ಲ. ಏನು ಮಾಡಬೇಕು ಎಂದು ಚಿಂತಿಸುತ್ತೇನೆ’ ಎಂದರು.

‘ಅಜ್ಜಯ್ಯ ಅವರೊಂದಿಗೆ ವಿಶೇಷ ಸಂಬಂಧವಿದೆ. ಈ ಕ್ಷೇತ್ರದ ಶಕ್ತಿ ಎಲ್ಲರಿಗೂ ಗೊತ್ತಿದೆ. ಇದೇ ಶಕ್ತಿ, ಅಜ್ಜಯನ ಆಶೀರ್ವಾದದಿಂದ ನಮ್ಮ ಸರ್ಕಾರ ಸ್ಥಾಪನೆಯಾಗಿ, ಮುಂದುವರಿದಿದೆ’ ಎಂದು ತಿಳಿಸಿದರು.

‘ಸಿಎಂ ಸ್ಥಾನ: ಡಿಕೆಶಿ–ಸಿದ್ದರಾಮಯ್ಯ ಬಗೆಹರಿಸಿಕೊಳ್ಳಲಿ’

‘ಸಿಎಂ ಸ್ಥಾನ ಬದಲಾವಣೆ ಕುರಿತು ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಏನು ಮಾತನಾಡಿಕೊಂಡಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಅವರಿಬ್ಬರಿಗಷ್ಟೆ ಅದು ಗೊತ್ತಿದ್ದು ಅವರೇ ಬಗೆಹರಿಸಿಕೊಳ್ಳಲಿ' ಎಂದು ಸಚಿವ ಕೆ.ಎಚ್.ಮುನಿಯಪ್ಪ ಪ್ರತಿಪಾದಿಸಿದರು. ‘ನಾಯಕತ್ವ ಬದಲಾವಣೆ ವಿಷಯ ನಮ್ಮ ಮಟ್ಟದಲ್ಲಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ' ಎಂದು ನಗರದಲ್ಲಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು. ಶಾಸಕರ ವಿದೇಶ ಪ್ರವಾಸ ಕುರಿತ ಪ್ರಶ್ನೆಗೆ ‘ಶಾಸಕರು ವೈಯಕ್ತಿಕವಾಗಿ ಪ್ರವಾಸ ಹೋದರೆ ಪ್ರಶ್ನಿಸುವ ಅವಶ್ಯಕತೆ ಎಲ್ಲಿದೆ' ಎಂದು ಪ್ರಶ್ನಿಸಿದರು.

2028ಕ್ಕೆ ವಿಜಯೇಂದ್ರ ಮುಖ್ಯಮಂತ್ರಿ –ಶಾಂತಗೌಡ ಪಾಟೀಲ

‘ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ 2028ಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಸಿ.ಎಂ ಆಗುವುದು ಅಷ್ಟೇ ಸತ್ಯ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ ಇಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಬೀಳಗಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಬಿ ಜಿ ರಾಮ್ಜಿ ಕಾಯ್ದೆ ಕುರಿತ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ವಿಜಯೇಂದ್ರ ಅವರು ಹೋದಲೆಲ್ಲ ಜನರು ನಮ್ಮ ಯಡಿಯೂರಪ್ಪನವ್ರು ನಮ್ಮ ಯಡಿಯೂರಪ್ಪನವರ ಮಗ ನಮ್ಮ ಅಧ್ಯಕ್ಷರು ಎಂದು ಪ್ರೀತಿ ತೋರಿಸುತ್ತಿದ್ದಾರೆ’ ಎಂದರು. ‘ಯಡಿಯೂರಪ್ಪನವರು ಇಲ್ಲಿಗೆ ಬಂದು ಹೋದ ಬಳಿಕ ಮುಖ್ಯಮಂತ್ರಿ ಆಗಿದ್ದರು. ಈಗ ನೀವು ಬಂದಿದ್ದೀರಿ. ನೀವೂ ಮುಖ್ಯಮಂತ್ರಿಯಾಗುತ್ತೀರಿ ಎಂದು ಪ್ರತಿ ಗ್ರಾಮದಲ್ಲಿ ಜನರು ಹೇಳುತ್ತಿದ್ದಾರೆ. ಅವರ ಪ್ರೀತಿ ನೋಡಿದರೆ ನೀವು ಮುಖ್ಯಮಂತ್ರಿ ಆಗುವುದು ಖಚಿತ’ ಎಂದರು.

‘ಡಿಕೆಶಿ–ಸಿದ್ದರಾಮಯ್ಯ ಬಗೆಹರಿಸಿಕೊಳ್ಳಲಿ’

ಹಾಸನ: ‘ಸಿ.ಎಂ ಸ್ಥಾನ ಬದಲಾವಣೆ ಕುರಿತು ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಏನು ಮಾತನಾಡಿ ಕೊಂಡಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಅವರಿಬ್ಬರಿಗಷ್ಟೆ ಅದು ಗೊತ್ತಿದ್ದು, ಅವರೇ ಬಗೆಹರಿಸಿಕೊಳ್ಳಲಿ’ ಎಂದು ಸಚಿವ ಕೆ.ಎಚ್.ಮುನಿಯಪ್ಪ ಪ್ರತಿಪಾದಿಸಿದರು.

‘ನಾಯಕತ್ವ ಬದಲಾವಣೆ ವಿಷಯ ನಮ್ಮ ಮಟ್ಟದಲ್ಲಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ’ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ಶಾಸಕರ ವಿದೇಶ ಪ್ರವಾಸ ಕುರಿತ ಪ್ರಶ್ನೆಗೆ, ‘ಶಾಸಕರು ವೈಯಕ್ತಿಕವಾಗಿ ಪ್ರವಾಸ ಹೋದರೆ, ಪ್ರಶ್ನಿಸುವ ಅವಶ್ಯಕತೆ ಎಲ್ಲಿದೆ’ ಎಂದು ಪ್ರಶ್ನಿಸಿದರು.

‘2028ಕ್ಕೆ ವಿಜಯೇಂದ್ರ ಮುಖ್ಯಮಂತ್ರಿ’

ಬೀಳಗಿ (ಬಾಗಲಕೋಟೆ ಜಿಲ್ಲೆ): ‘ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, 2028ಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಸಿ.ಎಂ ಆಗುವುದು ಅಷ್ಟೇ ಸತ್ಯ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು.

ಬೀಳಗಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಬಿ ಜಿ ರಾಮ್ಜಿ ಕಾಯ್ದೆ ಕುರಿತ ಜನಜಾಗೃತಿ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ‘ವಿಜಯೇಂದ್ರ ನಮ್ಮ ಯಡಿಯೂರಪ್ಪ ಅವರ ಮಗ, ನಮ್ಮ ಅಧ್ಯಕ್ಷರು ಎಂದು ಪ್ರೀತಿ ತೋರಿಸುತ್ತಿದ್ದಾರೆ’ ಎಂದರು.

‘ಯಡಿಯೂರಪ್ಪನವರು ಇಲ್ಲಿಗೆ ಬಂದು ಹೋದ ಬಳಿಕ ಮುಖ್ಯಮಂತ್ರಿ ಆಗಿದ್ದರು. ಈಗ ನೀವು ಬಂದಿದ್ದೀರಿ. ನೀವೂ ಮುಖ್ಯಮಂತ್ರಿಯಾಗುತ್ತೀರಿ ಎಂದು ಪ್ರತಿ ಗ್ರಾಮದಲ್ಲಿ ಜನರು ಹೇಳುತ್ತಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.