‘ಶಿರೂರು, ವಯನಾಡ್ ಭೂಕುಸಿತ ನಂತರವೂ ಪಾಠ ಕಲಿತಿಲ್ಲ’
‘ಪರಿಷ್ಕೃತ ಪ್ರಸ್ತಾವನೆ ಯಾವ ಮಾರ್ಗದಲ್ಲಿ ಹಾದುಹೋಗಲಿದೆ ಎಂಬ ಮಾಹಿತಿ ನನಗಿಲ್ಲ. ಪಶ್ಚಿಮ ಘಟ್ಟದ ಮೂಲಕವೇ ಹೊಸ ಪ್ರಸ್ತಾವಿತ ಮಾರ್ಗದ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದ್ದರೆ ನನ್ನ ಸ್ಪಷ್ಟ ವಿರೋಧ ಇರಲಿದೆ. ಶಿರೂರು, ವಯನಾಡ್ ಭೂಕುಸಿತ ಘಟನೆಗಳ ನಂತರವೂ ಸರ್ಕಾರ ಪಾಠ ಕಲಿತಂತಿಲ್ಲ. ಪಶ್ಚಿಮ ಘಟ್ಟಗಳಲ್ಲಿ ಇಂತಹ ಯೋಜನೆಗಳನ್ನು ರೂಪಿಸಲಾಗುತ್ತಿರುವುದರ
ಕುರಿತು ನಾವೆಲ್ಲರೂ ಅವಲೋಕನ ಮಾಡಿಕೊಳ್ಳುವ ತುರ್ತು ಅಗತ್ಯ ಇದೆ’ ಎಂದು ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ್ ಕುಲಕರ್ಣಿ ಹೇಳಿದರು. ಈ ಯೋಜನೆ ವಿರೋಧಿಸಿ ಗಿರಿಧರ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.