ಕರಾಚಿ/ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ರೈಲಿನ ಮೇಲೆ ದಾಳಿ ನಡೆಸಿದ್ದ ಉಗ್ರರು ಒಟ್ಟು 21 ಮಂದಿ ಪ್ರಯಾಣಿಕರನ್ನು ಹಾಗೂ ಅರೆಸೇನಾ ಪಡೆಯ ನಾಲ್ಕು ಮಂದಿಯನ್ನು ಹತ್ಯೆ ಮಾಡಿದ್ದಾರೆ.

ರೈಲು ಪ್ರಯಾಣಿಕರನ್ನು ರಕ್ಷಿಸುವ ಉದ್ದೇಶದಿಂದ ನಡೆಸಿದ ಸೇನಾ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲಿ ಇದ್ದ 33 ಮಂದಿ ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ ಎಂದು ಪಾಕಿಸ್ತಾನ ಸೇನೆಯ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶರೀಫ್ ಅವರು ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

‘ರೈಲಿನಲ್ಲಿ ಒಟ್ಟು 440 ಮಂದಿ ಪ್ರಯಾಣಿಕರಿದ್ದರು. ರಕ್ಷಣಾ ಕಾರ್ಯಾಚರಣೆಯನ್ನು ಪಾಕಿಸ್ತಾನದ ಭದ್ರತಾ ಪಡೆಗಳು ಅಪಾರ ಕೌಶಲದೊಂದಿಗೆ ನಡೆಸಿವೆ’ ಎಂದು ಪಾಕಿಸ್ತಾನದ ಸಚಿವ ಅತಾವುಲ್ಲಾ ತರಾರ್ ಹೇಳಿದ್ದಾರೆ.

‘ಎಲ್ಲ ಉಗ್ರರನ್ನು ಹೊಡೆದುರುಳಿಸಿ, ಎಲ್ಲ ಪ್ರಯಾಣಿಕರನ್ನು ರಕ್ಷಿಸಿ ಸಶಸ್ತ್ರ ಪಡೆಗಳು ರಕ್ಷಣಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ’ ಎಂದು ಶರೀಫ್ ಹೇಳಿದ್ದಾರೆ.

ಜಾಫರ್ ಎಕ್ಸ್ಪ್ರೆಸ್ ಹೆಸರಿನ ಈ ರೈಲು ಕ್ವೆಟ್ಟಾದಿಂದ ಪೆಶಾವರ ಕಡೆ ತೆರಳುತ್ತಿತ್ತು. ಆಗ ಸ್ಫೋಟಕ ಬಳಸಿ ಉಗ್ರರು ರೈಲಿನ ಹಳಿ ತಪ್ಪಿಸಿದರು. ನಂತರ ಅದನ್ನು ಅಪಹರಿಸಿದ್ದರು.

ರೈಲಿನ ಮೇಲೆ ದಾಳಿ ನಡೆಸಿದ್ದು ತಾನು ಎಂದು ಬಲೂಚಿಸ್ತಾನ ಮುಕ್ತಿ ಸೇನೆ (ಬಿಎಲ್ಎ) ಹೇಳಿಕೊಂಡಿತ್ತು. ಉಗ್ರರು ಆರಂಭದಲ್ಲಿ ಒತ್ತೆಯಾಳುಗಳನ್ನು ಮಾನವ ಗುರಾಣಿ ರೀತಿಯಲ್ಲಿ ಬಳಸಿಕೊಂಡಿದ್ದರು.

ಸೇನಾ ಕಾರ್ಯಾಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಉಗ್ರರು ತಮಗೆ ಆಫ್ಗಾನಿಸ್ತಾನದಿಂದ ನೆರವು ಒದಗಿಸುವವರ ಜೊತೆ ಉಪಗ್ರಹ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದರು. ಅಂದರೆ, ಅವರಿಗೆ ವಿದೇಶಿ ನೆರವು ಇತ್ತು ಎಂಬುದನ್ನು ಇದು ತೋರಿಸುತ್ತದೆ ಎಂದು ಶರೀಫ್ ವಿವರಿಸಿದ್ದಾರೆ.

ಒತ್ತೆಯಾಳುಗಳನ್ನು ಮಾನವ ಗುರಾಣಿಗಳಂತೆ ಉಗ್ರರು ಬಳಸಿದ ಕಾರಣದಿಂದಾಗಿ ರಕ್ಷಣಾ ಕಾರ್ಯಾಚರಣೆ ತುಸು ವಿಳಂಬ ಆಯಿತು ಎಂದು ಶರೀಫ್ ಹೇಳಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಯಾವುದೇ ಪ್ರಯಾಣಿಕರಿಗೆ ಹಾನಿ ಆಗಿಲ್ಲ ಎಂದಿದ್ದಾರೆ.

ಉಗ್ರರು ಹಾಗೂ ಅವರಿಗೆ ನೆರವು ನೀಡಿದವರು ಎಲ್ಲಿಯೇ ಇದ್ದರೂ ಅವರನ್ನು ಹುಡುಕಿ ಕೊಲ್ಲಲಾಗುವುದು ಎಂದು ಶರೀಫ್ ಎಚ್ಚರಿಕೆ ನೀಡಿದ್ದಾರೆ.

ಭಾರತದ ಮಾಧ್ಯಮಗಳ ವಿರುದ್ಧ ಕಿಡಿ

ಮಾಹಿತಿ ಸಚಿವ ತರಾರ್ ಅವರು ಭಾರತದ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ. ಭಾರತದ ಮಾಧ್ಯಮಗಳು ತಪ್ಪು ಮಾಹಿತಿಯ ಪ್ರಚಾರಾಂದೋಲನದಲ್ಲಿ ತೊಡಗಿವೆ ಎಂದು ಅವರು ದೂರಿದ್ದಾರೆ. ‘ಕೆಲವು ರಾಜಕೀಯ ಶಕ್ತಿಗಳೂ ಈ ದುರಂತವನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿವೆ’ ಎಂದು ಹೇಳಿದ್ದಾರೆ.

ಕರಾಳ ಘಟನೆ ಬಿಚ್ಚಿಟ್ಟ ಪ್ರಯಾಣಿಕರು

ಮ್ಯಾಕ್, ಸಿಬಿ (ಪಾಕಿಸ್ತಾನ): ಪಾಕಿಸ್ತಾನ ಭದ್ರತಾ ಪಡೆಗಳು ರಕ್ಷಿಸಿರುವ 190 ಪ್ರಯಾಣಿಕರಲ್ಲಿ ಒಬ್ಬರಾದ ಮುಷ್ತಾಕ್ ಮುಹಮ್ಮದ್, ಜಾಫರ್ ಎಕ್ಸ್ಪ್ರೆಸ್ ಮೇಲಿನ ಉಗ್ರರ ದಾಳಿಯ ಕ್ಷಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ‘ಅಲ್ಲಿ ಭಾರಿ ಸ್ಫೋಟ ಮತ್ತು ಗುಂಡಿನ ದಾಳಿ ನಡೆದಿದೆ. ಅದು ಎಂದಿಗೂ ಮರೆಯಲಾಗದ ದೃಶ್ಯ’ ಎಂದು ಹೇಳಿದರು.

ಈ ರೈಲಿನ ಮೂರನೇ ಬೋಗಿಯಲ್ಲಿದ್ದ ಮುಷ್ತಾಕ್, ‘ಮೊದಲು ಭಾರಿ ಸ್ಫೋಟ, ನಂತರ ಒಂದು ಗಂಟೆ ಗುಂಡಿನ ಮೊರೆತ ಕೇಳಿಸಿತು. ನಂತರ ಶಸ್ತ್ರ
ಧಾರಿಗಳು ಬೋಗಿಗಳನ್ನು ಪ್ರವೇಶಿಸಿದರು. ಮೂವರು ಉಗ್ರರು ನಮ್ಮ ಬೋಗಿಯ ಬಾಗಿಲಿಗೆ ಕಾವಲಿದ್ದರು. ನಾಗರಿಕರು, ಮಹಿಳೆಯರು, ವೃದ್ಧರು ಮತ್ತು ಬಲೂಚ್ ಜನರಿಗೆ ಏನೂ ಮಾಡುವುದಿಲ್ಲವೆಂದು ಅವರು ಅಭಯ ನೀಡಿದರು’ ಎಂದು ಮುಸ್ತಾಕ್ ತಿಳಿಸಿದ್ದಾಗಿ ‘ಬಿಬಿಸಿ ಉರ್ದು’ ಮಾಧ್ಯಮ ವರದಿ ಮಾಡಿದೆ.

ತನ್ನ ಇಬ್ಬರು ಮಕ್ಕಳು ಮತ್ತು ಪತ್ನಿ ಸಮೇತ ಪಾರಾಗಿ ಬಂದಿರುವ ಐಶಾಕ್ ನೂರ್ ಹೇಳುವ ಪ್ರಕಾರ, ‘ಸ್ಫೋಟ ಎಷ್ಟು ತೀವ್ರವಾಗಿತ್ತೆಂದರೆ ರೈಲಿನ ಕಿಟಕಿಗಳು ಮತ್ತು ಬಾಗಿಲುಗಳು ನಡುಗಿವೆ. ಅವರ ಬಳಿ ಕುಳಿತಿದ್ದ ಮಕ್ಕಳಲ್ಲಿ ಒಬ್ಬ ಕೆಳಗೆ ಬಿದ್ದಿದ್ದಾನೆ’. ‘ಬೋಗಿಗಳಿಗೆ ಗುಂಡಿನ ಏಟುಗಳು ಬೀಳುತ್ತಿರುವುದನ್ನು ನೋಡಿದ ಮೇಲೆ, ಗುಂಡು ನಮಗೆ ತಗುಲಿದರೂ ಮಕ್ಕಳು ಬದುಕುಳಿಯಲಿ ಎಂದು ಒಂದೊಂದು ಮಗುವನ್ನು ಅವುಚಿ ಕುಳಿತೆವು’ ಎಂದು ತಿಳಿಸಿದ್ದಾರೆ.

‘ಉಗ್ರರು ನಮ್ಮ ಬೋಗಿಯಿಂದ 11 ಪ್ರಯಾಣಿಕರನ್ನು ಕೆಳಗಿಳಿಸಿದರು. ಅವರು ಭದ್ರತಾ ಸಿಬ್ಬಂದಿ ಇರಬಹುದು. ಅವರಲ್ಲಿ ಒಬ್ಬ ಪ್ರತಿರೋಧ ತೋರಿದ್ದಕ್ಕೆ ಆತನಿಗೆ ಚಿತ್ರಹಿಂಸೆ ನೀಡಿ, ಕೆಳಗಿಳಿಸಿದರು. ನಂತರ ಗುಂಡಿನ ಸದ್ದು ಕೇಳಿಸಿತು. ಆ ನಂತರ, ನಮ್ಮ ಬೋಗಿಯಲ್ಲಿದ್ದವರೆಲ್ಲರೂ ಅವರ ಸೂಚನೆ ಪಾಲಿಸಿದೆವು. ಸಂಜೆ ವೇಳೆಗೆ ಬಲೂಚಿಗರು, ಮಹಿಳೆಯರು, ಮಕ್ಕಳು ಮತ್ತು ವೃದ್ಧ ಪ್ರಯಾಣಿಕರನ್ನು ಅವರು ಬಿಡುಗಡೆ ಮಾಡಿದರು’ ಎಂದು ಐಸಾಕ್ ತಿಳಿಸಿದರು.

ಮತ್ತೊಬ್ಬ ಪ್ರಯಾಣಿಕ ಮುಹಮ್ಮದ್ ಅಶ್ರಫ್, ‘ನನ್ನ ಅಂದಾಜಿನ ಪ್ರಕಾರ, ಅವರು (ಉಗ್ರಗಾಮಿಗಳು) ಸುಮಾರು 250 ಪ್ರಯಾಣಿಕರನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ. ದಾಳಿಕೋರರು ಸುಮಾರು 1,100 ಮಂದಿ ಇದ್ದರು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.