ಜೆರುಸಲೇಂ: ಲೆಬನಾನ್ನಲ್ಲಿರುವ ಹಿಜ್ಬಲ್ಲಾ ಸಂಘಟನೆಯನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವುದಾಗಿ ಇಸ್ರೇಲ್ ಸೇನೆ ಹೇಳಿಕೆ ನೀಡಿದೆ.

ಶನಿವಾರ ತನ್ನ ಪ್ರದೇಶಗಳ ಮೇಲೆ ನಡೆದ ರಾಕೆಟ್ ದಾಳಿಗೆ ಪ್ರತಿಯಾಗಿ ಈ ದಾಳಿ ನಡೆಸುತ್ತಿರುವುದಾಗಿ ತಿಳಿಸಿದೆ.

ಲೆಬನಾನ್ನಲ್ಲಿರುವ ಹಿಜ್ಬುಲ್ಲಾ ಸಂಘಟನೆಯನ್ನು ಗುರಿಯಾಗಿಸಿ ದಾಳಿ ನಡೆಸುವಂತೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಆದೇಶಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ದಾಳಿಯಿಂದಾಗಿ ದಕ್ಷಿಣ ನಗರ ಟೌಲಿನ್ನಲ್ಲಿ ಐವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಲೆಬನಾನ್ನ ರಾಷ್ಟ್ರೀಯ ಸುದ್ದಿಸಂಸ್ಥೆ ವರದಿ ಮಾಡಿದೆ.

ಕಳೆದ ವರ್ಷ ನವೆಂಬರ್ 27ರ ಕದನ ವಿರಾಮ ಘೋಷಣೆ ಬಳಿಕ ನಡೆದ ಅತಿದೊಡ್ಡ ದಾಳಿ ಇದಾಗಿದೆ.

ಇಸ್ರೇಲ್ ಮೇಲೆ ಶನಿವಾರ ನಡೆದ ದಾಳಿಯ ಹೊಣೆ ಹೊತ್ತುಕೊಳ್ಳಲು ಹಿಜ್ಬುಲ್ಲಾ ಸಂಘಟನೆ ನಿರಾಕರಿಸಿದೆ.
.ಒತ್ತೆಯಾಳುಗಳ ಬಿಡುಗಡೆ ಆಗದಿದ್ದರೆ ದಾಳಿ ಬಿರುಸು: ಹಮಾಸ್ಗೆ ಇಸ್ರೇಲ್ ಎಚ್ಚರಿಕೆ.ಗಾಜಾ ಮೇಲೆ ಇಸ್ರೇಲ್ ದಾಳಿ: ಹಮಾಸ್ ನಾಯಕ ಸೇರಿ 19 ಮಂದಿ ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.