ಮಾಸ್ಕೊ: ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೋಮವಾರ ಕ್ರೆಮ್ಲಿನ್ನಲ್ಲಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರನ್ನು ಭೇಟಿ ಮಾಡಿ, ಅಮೆರಿಕದ ದಾಳಿಯನ್ನು ಸಂಪೂರ್ಣವಾಗಿ ಅಪ್ರಚೋದಿತ ಆಕ್ರಮಣ ಎಂದು ಕರೆದಿದ್ದಾರೆ. ಇರಾನ್ಗೆ ರಷ್ಯಾದ ಬೆಂಬಲವನ್ನು ಪುನರುಚ್ಚರಿಸಿದ್ದಾರೆ.

ಇದು ಇರಾನ್ ವಿರುದ್ಧ ಸಂಪೂರ್ಣವಾಗಿ ಅಪ್ರಚೋದಿತ ಆಕ್ರಮಣವಾಗಿದೆ. ಇದಕ್ಕೆ ಯಾವುದೇ ಸಮರ್ಥನೆ ಇಲ್ಲ ಎಂದು ಪುಟಿನ್ ಸೋಮವಾರದ ಸಭೆಯಲ್ಲಿ ತಿಳಿಸಿದ್ದಾರೆ.

ನಾವು ಇರಾನ್ ಜನರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇವೆ. ರಷ್ಯಾ, ಇರಾನ್ನೊಂದಿಗೆ ದೀರ್ಘಕಾಲದ, ಉತ್ತಮ, ವಿಶ್ವಾಸಾರ್ಹ ಸಂಬಂಧಗಳನ್ನು ಹೊಂದಿದೆ ಎಂದು ಪುಟಿನ್ ಹೇಳಿದ್ದಾರೆ.

ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕ ದಾಳಿಯನ್ನು ಖಂಡಿಸಿದ್ದಕ್ಕಾಗಿ ಅರಾಘ್ಚಿ ರಷ್ಯಾಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಇಸ್ರೇಲ್ ಮತ್ತು ಅಮೆರಿಕದ ಈ ಆಕ್ರಮಣಕಾರಿ ಕ್ರಮಗಳು ಸಂಪೂರ್ಣವಾಗಿ ಕಾನೂನುಬಾಹಿರ ಮತ್ತು ಅಂತರರಾಷ್ಟ್ರೀಯ ನಿಯಮಗಳು ಹಾಗೂ ಅಂತರರಾಷ್ಟ್ರೀಯ ಮಾನದಂಡಗಳನ್ನು ಉಲ್ಲಂಘಿಸುತ್ತವೆ. ನಾವು ನಮ್ಮ ಸಾರ್ವಭೌಮತ್ವ, ದೇಶವನ್ನು ರಕ್ಷಿಸುತ್ತಿದ್ದೇವೆ. ನಮ್ಮ ರಕ್ಷಣೆಗಾಗಿ ನಾವು ಮಾಡುತ್ತಿರುವ ಹೋರಾಟ ಕಾನೂನುಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

ಶಾಂತಿಯುತ ಪರಮಾಣು ಇಂಧನ ವಲಯದಲ್ಲಿ ರಷ್ಯಾ, ಇರಾನ್ನ ಪಾಲುದಾರ ರಾಷ್ಟ್ರವಾಗಿದ್ದು, ಟೆಹರಾನ್ನ ಪರಮಾಣು ಯೋಜನೆಯ ಕುರಿತ ಮಾತುಕತೆಗಳಲ್ಲಿ ಸಕಾರಾತ್ಮಕ ಪಾತ್ರವನ್ನು ವಹಿಸಿದೆ ಎಂದು ಅರಾಘ್ಚಿ ತಿಳಿಸಿದ್ದಾರೆ.

ಇರಾನ್ನ ಪರಮಾಣು ಯೋಜನೆಯಲ್ಲಿ ರಷ್ಯಾ ಪಾಲುದಾರ ರಾಷ್ಟ್ರವಾಗಿದೆ. ಬಶೇರ್ ಪರಮಾಣು ವಿದ್ಯುತ್ ಸ್ಥಾವರವನ್ನು ರಷ್ಯಾ ನಿರ್ಮಿಸಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.