ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ನ ಕೀವ್, ಹಾರ್ಕೀವ್ ಮೇಲೆ ರಷ್ಯಾ ಕ್ಷಿಪಣಿ ದಾಳಿ: 5 ಸಾವು, 130 ಮಂದಿ ಗಾಯ

Published 3 ಜನವರಿ 2024, 3:14 IST
Last Updated 3 ಜನವರಿ 2024, 3:14 IST
ಅಕ್ಷರ ಗಾತ್ರ

ಕೀವ್: ಉಕ್ರೇನ್‌ನ ಕೀವ್‌ ಹಾಗೂ ಹಾರ್ಕಿವ್ ನಗರದ ಮೇಲೆ ಮಂಗಳವಾರ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಐವರು ಸಾವಿಗೀಡಾಗಿದ್ದು, 130 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಬ್ದಕ್ಕಿಂತ 10 ಪಟ್ಟು ವೇಗದಲ್ಲಿ ಸಂಚರಿಸುವ ಕಿಂಝಲ್ ಕ್ಷಿಪಣಿ ಮೂಲಕ ರಷ್ಯಾ ದಾಳಿ ನಡೆಸಿದ್ದು, ಎಲ್ಲಾ 10 ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನಿನ ಕಮಾಂಡರ್‌ ಇನ್ ಚೀಫ್‌ ವ್ಯಾಲೆರಿ ಜಲುಜ್ನಿ ತಿಳಿಸಿದ್ದಾರೆ.

ಕೀವ್‌ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ 4 ಮಂದಿ ಮೃತಪಟ್ಟಿದ್ದು, 70 ಮಂದಿ ಗಾಯಗೊಂಡಿದ್ದಾರೆ. ಹಾರ್ಕಿವ್ ಪ್ರದೇಶದಲ್ಲಿ ಒಬ್ಬರು ಸಾವಿಗೀಡಾಗಿದ್ದು, 60 ಮಂದಿ ಗಾಯಗೊಂಡಿದ್ದಾರೆ. ಎಂದು ಆಂತರಿಕ ಸಚಿವಾಲಯ ತಿಳಿಸಿದೆ.

Kh-47M2 Kinzhal ಖಂಡಾಂತರ ಕ್ಷಿಪಣಿಯಾಗಿದ್ದು, ದುಬಾರಿ ವೆಚ್ಚ ಮತ್ತು ಸೀಮಿತ ದಾಸ್ತಾನಿನ ಕಾರಣದಿಂದಾಗಿ ರಷ್ಯಾ ಪಡೆಗಳು ವಿರಳವಾಗಿ ಬಳಸುತ್ತವೆ. ಮಂಗಳವಾರದ ದಾಳಿಯು ಯುದ್ಧ ಪ್ರಾರಂಭವಾದ ನಂತರ ಒಂದು ದಾಳಿಯಲ್ಲಿ ಬಳಸಲಾದ ಅತಿ ಹೆಚ್ಚಿನ ಸಂಖ್ಯೆಯಾಗಿದೆ ಎಂದು ಉಕ್ರೇನ್ ವಾಯುಪಡೆಯ ವಕ್ತಾರ ಯೂರಿ ಇಹ್ನಾತ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT