ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತೆಯಾಳುಗಳ ಬಿಡುಗಡೆಗೆ ಹೆಚ್ಚಿದ ಒತ್ತಡ; ಸೇನಾ ಕಚೇರಿ ಮುಂದೆ ಪ್ರತಿಭಟನೆ

Published 5 ನವೆಂಬರ್ 2023, 3:24 IST
Last Updated 5 ನವೆಂಬರ್ 2023, 3:24 IST
ಅಕ್ಷರ ಗಾತ್ರ

ಟೆಲ್‌ ಅವಿಲ್‌: ಹಮಾಸ್ ಬಂಡುಕೋರರಿಂದ ಬಂಧಿತರಾಗಿರುವ ಒತ್ತೆಯಾಳುಗಳ ಬಿಡುಗಡೆಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಶನಿವಾರ ರಾತ್ರಿ ಇಸ್ರೇಲ್‌ನ ಟೆಲ್ ಅವಿವ್‌ನಲ್ಲಿರುವ ಸೇನಾ ಪ್ರಧಾನ ಕಚೇರಿಯ ಮುಂದೆ ಒತ್ತೆಯಾಳುಗಳ ಕುಟುಂಬ ಸದಸ್ಯರು ಸೇರಿದಂತೆ ಸಾವಿರಾರು ಜನ ಪ್ರತಿಭಟನೆ ನಡೆಸಿದ್ದಾರೆ.

‘ತಮ್ಮ ಪೋಷಕರ, ಮಕ್ಕಳು, ಮೊಮ್ಮಕ್ಕಳಿಗಾಗಿ ಕಾಯುತ್ತಿದ್ದೇವೆ. ಅವರನ್ನು ಮನೆಗೆ ವಾಪಾಸ್ಸು ಕರೆ ತನ್ನಿ’ ಎಂದು ಒತ್ತೆಯಾಳುಗಳ ಕುಟುಂಬ ಸದಸ್ಯರು ಕಂಬನಿ ಮಿಡಿದಿದ್ದಾರೆ.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೆಬೆಕಾ ಬ್ರಿಂಡ್ಜಾ ಮಾತನಾಡಿ, ‘ಇದು ಸರ್ಕಾರ ವಿರೋಧಿ ಪ್ರತಿಭಟನೆಯಲ್ಲ. ಒತ್ತೆಯಾಳುಗಳನ್ನು ಮರಳಿ ಕರೆತರಲು ಸರ್ಕಾರ ಶ್ರಮಿಸುತ್ತಿದೆ ಎಂಬ ಬಗ್ಗೆ ನಮಗೆ ಅನುಮಾನವಿಲ್ಲ. ಆದರೆ ಅವರು(ಸರ್ಕಾರ) ಸರಿಯಾದ ಮಾರ್ಗದಲ್ಲಿಯೇ ಹೋಗುತ್ತಿದ್ದಾರೆಯೇ ಎಂಬುವುದು ನಮ್ಮ ಪ್ರಶ್ನೆ’ ಎಂದು ಹೇಳಿದರು.

‘ಇಸ್ರೇಲ್‌ ಸರ್ಕಾರ ವೈಮಾನಿಕ ದಾಳಿ ನಡೆಸುವ ಮೂಲಕ ಒತ್ತೆಯಾಳುಗಳನ್ನು ಕರೆ ತರಲು ಪ್ರಯತ್ನಿಸುತ್ತಿದೆ. ಒತ್ತೆಯಾಳುಗಳನ್ನು ತಲುಪಬೇಕಾದರೆ ಭೂ ದಾಳಿ ನಡೆಸಬೇಕು. ಇದಕ್ಕಿಂತ ಬೇರೆ ಮಾರ್ಗವಿಲ್ಲ. ಒತ್ತೆಯಾಳುಗಳಿಗಾಗಿ ನಾವಿಲ್ಲಿ ಕಾಯುತ್ತಿದ್ದೇವೆ’ ಎಂದು ಪ್ರತಿಭಟನಾಗಾರ್ತಿ ಮಾಯನ್‌ ಮಠಾನ್‌ ತಿಳಿಸಿದ್ದಾರೆ.

‘ಕದನ ವಿರಾಮ ಎಲ್ಲ ಸಮಸ್ಯೆಗೆ ಪರಿಹಾರ ಎಂದು ನನಗನ್ನಿಸುತ್ತದೆ’ ಎಂದು 62 ವರ್ಷದ ಟೆಲ್ ಅವಿವ್ ನಿವಾಸಿ ನಿಮ್ರೋಡ್ ಕೆರೆಟ್ ಹೇಳಿದರು.

ಅಕ್ಟೋಬರ್ 7ರಂದು ಇಸ್ರೇಲ್‌ ಮೇಲೆ ಹಮಾಸ್ ಬಂಡುಕೋರರು ನಡೆಸಿದ ದಾಳಿಯಲ್ಲಿ ಸುಮಾರು 1,400 ಮಂದಿ ಸಾವನ್ನಪ್ಪಿದ್ದರು. 240 ಮಂದಿಯನ್ನು ಒತ್ತೆಯಾಳುಗಳನ್ನಾಗಿ ಕರೆದುಕೊಂಡು ಹೋಗಿದ್ದರು. ಇವರಲ್ಲಿ ನಾಲ್ಕು ಮಂದಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT