ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವಿಧ ದೇಶಗಳ ಮೇಲೆ ಹೇರಿರುವ ಹೆಚ್ಚುವರಿ ಪ್ರತಿಸುಂಕವನ್ನು ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಈ ತೀರ್ಪು ಟ್ರಂಪ್ ಅಡಳಿತಕ್ಕೆ ಬಲುದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗಿದೆ.

ಟ್ರಂಪ್ ಅವರು ಹೇರಿರುವ ಹೆಚ್ಚುವರಿ ಸುಂಕದ ಕಾನೂನುಬದ್ಧತೆಯನ್ನು ಪ್ರಶ್ನಿಸಿರುವ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ 6:3 ಬಹುಮತದ ತೀರ್ಪು ನೀಡಿತು.

‘ಸುಂಕಗಳನ್ನು ಒಳಗೊಂಡಂತೆ ಎಲ್ಲ ರೀತಿಯ ತೆರಿಗೆಗಳನ್ನು ವಿಧಿಸುವ ಅಧಿಕಾರವು ಕಾಂಗ್ರೆಸ್ಗೆ (ಸಂಸತ್ತು) ಮಾತ್ರ ಇದೆ ಎಂಬುದನ್ನು ಸಂವಿಧಾನದಲ್ಲಿ ‘ಬಹಳ ಸ್ಪಷ್ಟವಾಗಿ’ ಹೇಳಲಾಗಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರು ತೀರ್ಪಿನಲ್ಲಿ ತಿಳಿಸಿದ್ದಾರೆ.

ರಾಷ್ಟ್ರೀಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಳಸುವ 1977ರ ಆರ್ಥಿಕ ಅಧಿಕಾರ ಕಾಯ್ದೆ ಮೂಲಕ ಟ್ರಂಪ್ ಅವರು ಅಧ್ಯಕ್ಷರ ಅಧಿಕಾರದ ವ್ಯಾಪ್ತಿಯನ್ನು ಮೀರಿದ್ದಾರೆ ಎಂಬ ಫೆಡರಲ್ ನ್ಯಾಯಾಲಯದ ತೀರ್ಪನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಬಹುಮತದಿಂದ ಎತ್ತಿಹಿಡಿದರು.

‘ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರಗಳ ಕಾಯ್ದೆ ಅಡಿ (ಐಇಇಪಿಎ) ಸುಂಕ ವಿಧಿಸುವ ಅಧಿಕಾರವು ಅಧ್ಯಕ್ಷರಿಗೆ ಇದೆ ಎಂಬ ಟ್ರಂಪ್ ಆಡಳಿತದ ವ್ಯಾಖ್ಯಾನವು ಕಾಂಗ್ರೆಸ್ನ ಅಧಿಕಾರದಲ್ಲಿ ಹಸ್ತಕ್ಷೇಪ ನಡೆಸಿದಂತೆ’ ಎಂದು ಹೇಳಿತು. ‘ಆದರೆ ಇತರ ಕಾನೂನುಗಳಡಿ ತೆರಿಗೆ ವಿಧಿಸುವ ಅಧ್ಯಕ್ಷರ ಅಧಿಕಾರಕ್ಕೆ ಯಾವುದೇ ತಡೆ ವಿಧಿಸುವುದಿಲ್ಲ’ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ.

ನ್ಯಾಯಮೂರ್ತಿಗಳಾದ ಸ್ಯಾಮ್ಯುಯೆಲ್ ಅಲಿಟೊ, ಕ್ಲಾರೆನ್ಸ್ ಥಾಮಸ್ ಮತ್ತು ಬ್ರೆಟ್ ಕ್ಯಾವನಾ ಅವರು ತೀರ್ಪಿಗೆ ಅಸಮ್ಮತಿ ಸೂಚಿಸಿದರು. ‘ಸುಂಕ ಹೇರಿಕೆಯು ವಿವೇಕದ ನೀತಿ ಆಗಿರಬಹುದು ಅಥವಾ ಇಲ್ಲದಿರ ಬಹುದು. ಆದರೆ ಇತಿಹಾಸ ಮತ್ತು ಪೂರ್ವನಿದರ್ಶನಗಳನ್ನು ನೋಡಿದರೆ ಅಧ್ಯಕ್ಷರು ತೆಗೆದುಕೊಂಡ ನಿರ್ಧಾರವು ಕಾನೂನುಬದ್ಧವಾಗಿಯೇ ಇದೆ’ ಎಂದು ಕ್ಯಾವನಾ ಅವರು ಭಿನ್ನ ತೀರ್ಪಿನಲ್ಲಿ ತಿಳಿಸಿದ್ದಾರೆ.

‘ರಷ್ಯಾದಿಂದ ತೈಲ ಖರೀದಿಸಿದ್ದಕ್ಕೆಭಾರತದ ಮೇಲೆ ಹೆಚ್ಚುವರಿ ಸುಂಕ ವಿಧಿಸಲಾಗಿದೆ’ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.

ಸುಂಕ ಹೇರಿಕೆ ವಿಚಾರದಲ್ಲಿ ಟ್ರಂಪ್ ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾರೆ ಎಂದು ಅಮೆರಿಕದ ಕೆಳ ನ್ಯಾಯಾಲಯಗಳು ಈ ಹಿಂದೆಯೇ ತೀರ್ಪು ನೀಡಿದ್ದವು.

‘ಅಮೆರಿಕ ಮೊದಲು’ ನೀತಿಯ ಭಾಗವಾಗಿ ಟ್ರಂಪ್ ಅವರು ತಮಗಿರುವ ಅಧಿಕಾರ ಬಳಸಿ ಸುಂಕಗಳ ಕುರಿತ ನಿರ್ಧಾರ ಕೈಗೊಂಡಿದ್ದರು. ‘ಒಂದು ವೇಳೆ ನಮ್ಮ ಸುಂಕ ವಿಧಿಸುವ ಅಧಿಕಾರವನ್ನು ಮೊಟಕುಗೊಳಿಸಿದರೆ, ದೇಶದ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ’ ಎಂದು ಸರ್ಕಾರವು ನ್ಯಾಯಾಲಯದಲ್ಲಿ ವಾದಿಸಿತ್ತು.

₹15.89 ಲಕ್ಷ ಕೋಟಿ ಸಂಗ್ರಹ?

ಟ್ರಂಪ್ ಆಡಳಿತವು ಕಳೆದ ಡಿಸೆಂಬರ್ 14ರಿಂದ ಸಂಗ್ರಹಿಸಿದ ಸುಂಕದ ಮಾಹಿತಿಯನ್ನು ಒದಗಿಸಿಲ್ಲ. ಆದರೆ ‘ಪೆನ್ ವಾರ್ಟನ್ ಬಜೆಟ್ ಮಾಡೆಲ್’
ಅರ್ಥ ಶಾಸ್ತ್ರಜ್ಞರು ಅಂದಾಜಿಸಿದ ಪ್ರಕಾರ ಈ ಅವಧಿಯಲ್ಲಿ 175 ಬಿಲಿಯನ್ ಡಾಲರ್ (ಅಂದಾಜು ₹15.89 ಲಕ್ಷ ಕೋಟಿ) ಸುಂಕ ಸಂಗ್ರಹಿಸಿದೆ.
ಇದೀಗ, ಐಇಇಪಿಎ ಆಧಾರಿತ ಸುಂಕ ಸಂಗ್ರಹದ ವಿರುದ್ಧ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದರಿಂದ ಈ ಮೊತ್ತವನ್ನು ಆಯಾ ದೇಶಗಳಿಗೆ ಮರುಪಾವತಿ ಮಾಡಬೇಕಾಗುತ್ತದೆ.

ಮಾರುಕಟ್ಟೆಯಲ್ಲಿ ಸ್ಥಿರತೆ

ಜಾಗತಿಕ ಮಾರುಕಟ್ಟೆಯು ಅಮೆರಿಕದ ಸುಪ್ರೀಂ ಕೋರ್ಟ್ ಆದೇಶಕ್ಕೆ ಪೂರಕವಾಗಿ ಸ್ಪಂದಿಸಿದೆ. ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಸ್ಥಿರತೆ ಕಂಡುಬಂತು. ಕಳೆದ ವರ್ಷ ಟ್ರಂಪ್ ವಿವಿಧ ದೇಶಗಳ ಮೇಲೆ ಹೆಚ್ಚುವರಿ ಸುಂಕವನ್ನು ಹೇರಿದಾಗ ಮಾರುಕಟ್ಟೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿತ್ತು.

ಕೆನಡಾದ ಷೇರುಪೇಟೆ ಸೂಚ್ಯಂಕ ದಾಖಲೆ ಏರಿಕೆ ಕಂಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲೂ ಅಲ್ಪ ಏರಿಕೆ ಕಂಡುಬಂದಿದೆ. ಸ್ವೀಡನ್ನ ವಾಣಿಜ್ಯೋದ್ಯಮ ಸಂಸ್ಥೆಗಳು ತೀರ್ಪನ್ನು ಸ್ವಾಗತಿಸಿವೆ. ‘ನ್ಯಾಯಾಲಯದ ಆದೇಶವು ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚಿಸುತ್ತದೆ’ ಎಂದು ಬ್ರಿಟಿಷ್ ಚೇಂಬರ್ ಆಫ್ ಕಾಮರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.