ಕರ್ನಾಟಕದಲ್ಲೂ ಗಮನಾರ್ಹ ಪ್ರಮಾಣದಲ್ಲಿ ಜನರು ಕೃಷಿಯಿಂದ ದೂರ ಸರಿಯುತ್ತಿದ್ದಾರೆ. ತಮ್ಮ ಸಾಂಪ್ರದಾಯಿಕ ಕಸುಬು ತೊರೆಯುತ್ತಿರುವ ಕೃಷಿಕರಿಗೆ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಸಲುವಾಗಿ ಗ್ರಾಮೀಣ ಸಂಪನ್ಮೂಲಗಳನ್ನು ಕೃಷಿ ಕ್ಷೇತ್ರದಿಂದ ಹೊರಗೆ ವಿನಿಯೋಗಿಸುವುದು ಅಗತ್ಯವಾಗಿದೆ. ಕೃಷಿ ವಲಯದ ಬಂಡವಾಳವನ್ನು ಉತ್ಪಾದನಾ ವಲಯ ಮತ್ತು ಸೇವಾ ವಲಯಕ್ಕೆ ವಿನಿಯೋಗಿಸುವುದು ಸದ್ಯ ಕೆಲವೇ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ.