ಉತ್ತರಾಖಂಡದಲ್ಲಿ ಜೂನ್ 15ರಂದು ನಡೆದ ಹೆಲಿಕಾಪ್ಟರ್ ಅಪಘಾತಕ್ಕೆ ಪ್ರತಿಕೂಲ ಹವಾಮಾನ, ತಾಂತ್ರಿಕ ಸಮಸ್ಯೆಗಳು ಅಥವಾ ಪೈಲಟ್ನ ಲೋಪ ಕಾರಣ ಆಗಿರಬಹುದು. ಈ ಅಪಘಾತದಲ್ಲಿ, ಹೆಲಿಕಾಪ್ಟರ್ನಲ್ಲಿ ಇದ್ದ ಏಳೂ ಮಂದಿ ಜೀವ ಕಳೆದುಕೊಂಡಿದ್ದಾರೆ. ಪ್ರಾಕೃತಿಕ ಹಾಗೂ ಮಾನವಕೃತ ವಿಕೋಪಗಳಿಗೆ ಬಹಳ ಸುಲಭವಾಗಿ ತುತ್ತಾಗುವ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವು ಹಿಂದೆ–ಮುಂದೆ ಆಲೋಚಿಸದೆ ಉತ್ಸಾಹದಿಂದ ಕ್ರಮ ಕೈಗೊಳ್ಳುತ್ತಿರುವುದು ಈ ಅಪಘಾತಕ್ಕೆ ನಿಜವಾದ ಕಾರಣವೆಂಬಂತೆ ತೋರುತ್ತಿದೆ. ‘ಬೆಲ್ 407’ ಮಾದರಿಯ ಹೆಲಿಕಾಪ್ಟರ್ ಕೇದಾರನಾಥದಿಂದ ಗುಪ್ತಕಾಶಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಗೌರೀಕುಂಡದ ಬಳಿ ಅಪಘಾತಕ್ಕೆ ಈಡಾಗಿದೆ. ಇದು ಹಿಮಾಲಯ ಪರ್ವತ ಪ್ರದೇಶದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಬಹಳ ವೇಗವಾಗಿ ಅಭಿವೃದ್ಧಿಪಡಿಸುವುದರಿಂದ ಆಗುವ ಅಪಾಯಗಳನ್ನು ಇನ್ನೊಮ್ಮೆ ನೆನಪಿಸಿಕೊಟ್ಟಿದೆ. ಕಳೆದ ಆರು ವಾರಗಳ ಅವಧಿಯಲ್ಲಿ ಇದೇ ಮಾರ್ಗದಲ್ಲಿ ಒಟ್ಟು ಐದು ಹೆಲಿಕಾಪ್ಟರ್ಗಳು ಅಪಘಾತಕ್ಕೆ ತುತ್ತಾಗಿವೆ. ಈ ಅಪಘಾತಗಳ ಪೈಕಿ ಒಂದರಲ್ಲಿ ಆರು ಮಂದಿ ಜೀವ ಕಳೆದುಕೊಂಡರು. ಇನ್ನುಳಿದ ಅಪಘಾತಗಳು,ಹೆಲಿಕಾಪ್ಟರ್ನಲ್ಲಿ ದೋಷ ಕಂಡುಬಂದು ತುರ್ತು ಭೂಸ್ಪರ್ಶ ಮಾಡಿದ ಪ್ರಕರಣಗಳು. ಚಾರ್ ಧಾಮ್ ಪ್ರವಾಸಕ್ಕೆ ಹೆಲಿಕಾಪ್ಟರ್ ಸೇವೆ ಒದಗಿಸುತ್ತಿರುವ ಕ್ರಮವು ಅಧಿಕಾರಿಗಳು ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿಲ್ಲ ಎಂಬುದನ್ನು ಕೂಡ ಹೇಳುತ್ತಿದೆ.

ಹಿಂದೂಗಳು ಬಹಳ ಪವಿತ್ರ ಎಂದು ಭಾವಿಸಿರುವ ಹಲವು ಸ್ಥಳಗಳು ಈ ಪ್ರದೇಶದಲ್ಲಿ ಇವೆ. ಕೇಂದ್ರ ಸರ್ಕಾರದ ನೆರವು ಪಡೆದು ರಾಜ್ಯ ಸರ್ಕಾರವು ಇಲ್ಲಿ ಯಾವ ನಿಯಂತ್ರಣವೂ ಇಲ್ಲದೆ ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತಿದೆ. ಈ ಪ್ರವಾಸೋದ್ಯಮವು ಉತ್ತರಾಖಂಡ ರಾಜ್ಯ ಸರ್ಕಾರಕ್ಕೆ ವರಮಾನದ ದೊಡ್ಡ ಮೂಲ. ಆದರೆ ಈ ಪ್ರವಾಸೋದ್ಯಮದ ಜೊತೆ ಒಂದಿಷ್ಟು ರಾಜಕೀಯ ಹಿತಾಸಕ್ತಿಗಳೂ ಅಡಗಿವೆ. ಚಾರ್ ಧಾಮ್ ಮಾರ್ಗ ಹಾಗೂ ಧಾರ್ಮಿಕ ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ಮೂಲಸೌಕರ್ಯಕ್ಕೆ ಮಾಡಿದ ಹೂಡಿಕೆಗಳನ್ನು ಬಳಸಿಕೊಂಡು ರಾಜಕೀಯ ಲಾಭ ಪಡೆದುಕೊಳ್ಳಲು ಸರ್ಕಾರಗಳು ಬಯಸುತ್ತಿವೆ. ಈ ಕಾರಣಕ್ಕಾಗಿಯೇ ಅವು ತಜ್ಞರ ಮಾತುಗಳಿಗೆ ಕಿವಿಗೊಡುತ್ತಿಲ್ಲ, ಈ ಪ್ರದೇಶದ ಸೂಕ್ಷ್ಮ ಪರಿಸರಕ್ಕೆ ಧಕ್ಕೆ ಉಂಟುಮಾಡುವ ನಿರ್ಮಾಣ ಚಟುವಟಿಕೆಗಳನ್ನು ಕೈಗೊಳ್ಳಬಾರದು ಎಂದು ನ್ಯಾಯಾಲಯಗಳು ನೀಡಿರುವ ಆದೇಶಗಳನ್ನು ಕೂಡ ಅವು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈ ಪ್ರದೇಶದಲ್ಲಿ ಭೂಕಂಪನದ ಸಾಧ್ಯತೆಗಳು ಹೆಚ್ಚಿವೆ. ಭಾರಿ ಗಾತ್ರದ ಅಣೆಕಟ್ಟುಗಳು, ವಿಶಾಲವಾದ ರಸ್ತೆಗಳು, ಬೃಹತ್ ಹೋಟೆಲ್ಗಳನ್ನು ಈ ಭೂಪ್ರದೇಶದಲ್ಲಿ ನಿರ್ಮಿಸುವುದು ಗಂಭೀರ ಸ್ವರೂಪದ ಅಪಾಯವನ್ನು ಸೃಷ್ಟಿಸುತ್ತದೆ. ಹವಾಮಾನ ಬದಲಾವಣೆಯು ಈ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. 2013ರಲ್ಲಿ ಆರು ಸಾವಿರಕ್ಕೂ ಹೆಚ್ಚು ಜನರ ಜೀವ ಕಿತ್ತುಕೊಂಡ, ಮೂರು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಅಪಾಯಕ್ಕೆ ಸಿಲುಕಿಸಿದ್ದ ಪ್ರವಾಹವು ಅಧಿಕಾರಿಗಳಿಗೆ ಎಚ್ಚರಿಕೆಯ ಕರೆಗಂಟೆಯಂತೆ ಕಂಡಿಲ್ಲ. ಪಟ್ಟಣಗಳಲ್ಲಿ ಬಿರುಕು ಮೂಡಿರುವುದು, ಕಟ್ಟಡಗಳು ಕುಸಿದಿರುವುದು ಹಾಗೂ ಹವಾಮಾನದಲ್ಲಿ ಬದಲಾವಣೆ ಆಗಿರುವುದು ಕೂಡ ಇತರ ಕೆಲವು ಅಪಾಯ ಸೂಚಕಗಳು.

ಪರ್ವತಗಳಿಂದ ಕೂಡಿರುವ ಭೂಪ್ರದೇಶ ಹಾಗೂ ಹವಾಮಾನದಲ್ಲಿನ ವೈಪರೀತ್ಯಗಳು ವೈಮಾನಿಕ ಮಾರ್ಗಗಳನ್ನು ಅಪಾಯಕಾರಿ ಆಗಿಸಿವೆ. ಸುರಕ್ಷತಾ ಮಾನದಂಡಗಳ ವಿಚಾರದಲ್ಲಿ ಯಾವುದೇ ರಾಜಿಯನ್ನು ಸಹಿಸಿಕೊಳ್ಳಲು ಆಗದು ಎಂದು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಹೆಲಿಕಾಪ್ಟರ್ ಸೇವೆ ಒದಗಿಸುವವರಿಗೆ ಈಚೆಗೆ ಹೇಳಿದ್ದರು. ಹೆಲಿಕಾಪ್ಟರ್ ಕಾರ್ಯಾಚರಣೆಗಳ ಬಗ್ಗೆ ವಿಶೇಷ ಪರಿಶೀಲನೆ ಆಗಬೇಕು ಮತ್ತು ಅವುಗಳ ಕಾರ್ಯಾಚರಣೆಯ ಬಗ್ಗೆ ವಿಶೇಷ ನಿಗಾ ಇರಿಸಬೇಕು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಆದೇಶಿಸಿತ್ತು. ಆದರೆ ಇಂತಹ ಸೇವೆಗಳನ್ನು ಒದಗಿಸುವವರಿಗೆ ಈ ಬಗೆಯ ಆದೇಶಗಳು ಇಷ್ಟವಾಗುವುದಿಲ್ಲ, ಅವರು ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸುತ್ತಾರೆ, ಲಾಭವನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಅವರು ಎಚ್ಚರಿಕೆಯ ಮಾತುಗಳನ್ನು ಉಪೇಕ್ಷಿಸುವುದೂ ಇದೆ. ರಸ್ತೆ ಮಾರ್ಗವೂ ಇಲ್ಲಿ ಅಪಾಯಕಾರಿ ಆಗಿದೆ. ನಿಯಂತ್ರಣ, ಮೇಲ್ವಿಚಾರಣೆ ಮತ್ತು ನಿಗಾದಂತಹ ಪದಗಳು ಬಹಳ ಚೆನ್ನಾಗಿ ಕೇಳಿಸುತ್ತವೆ. ಆದರೆ ವಿವಿಧ ಕಾರಣಗಳಿಂದಾಗಿ ಇವುಗಳನ್ನು ಅನುಷ್ಠಾನಕ್ಕೆ ತರುವುದೇ ಇಲ್ಲ. ರಾಜಕೀಯ ಹಾಗೂ ವರಮಾನದ ಒತ್ತಡಗಳಿಗೆ ಸರ್ಕಾರ ಮಣಿಯಬಾರದು. ಪರಿಸರ ಸುರಕ್ಷತಾ ಕ್ರಮಗಳು ಹೆಚ್ಚಿನ ಮಟ್ಟದಲ್ಲಿ ಬೇಕಿರುವ ಪ್ರದೇಶದಲ್ಲಿ ಜನರ ಜೀವವನ್ನು ಅಪಾಯಕ್ಕೆ ಸಿಲುಕಿಸುವ ಕೆಲಸ ಆಗಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.