ದುಬೈ: ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು ‘ಸ್ಪಿನ್ ತ್ರಿವಳಿ’ಯ ಮೇಲೆ ಅಪಾರವಾಗಿ ಅವಲಂಬಿತವಾಗಿದೆ.

ಭಾನುವಾರ ಇಲ್ಲಿ ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ವಿಭಾಗದ ಪಂದ್ಯದಲ್ಲಿ ಭಾರತ ತಂಡವು ತನ್ನ ‘ಬದ್ಧ ಪ್ರತಿಸ್ಪರ್ಧಿ’ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಈ ಟೂರ್ನಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿರುವ ಎರಡನೇ ಪಂದ್ಯ ಇದಾಗಿದೆ.

ಹೋದವಾರ ನಡೆದಿದ್ದ ಗುಂಪು ಹಂತದ ಪಂದ್ಯದಲ್ಲಿ ಭಾರತದ ಆಟಗಾರರು ಪಾಕ್ ತಂಡದವರ ಕೈಕುಲುಕದೇ ಇದ್ದದ್ದು ವಿವಾದಕ್ಕೆ ಕಾರಣವಾಗಿತ್ತು. ಅದೇ ’ನೀತಿ’ಯನ್ನು ಸೂರ್ಯ ಬಳಗವು ಭಾನುವಾರದ ಪಂದ್ಯದಲ್ಲಿಯೂ ಮುಂದುವರಿಸುವ ಸಾಧ್ಯತೆ ಇದೆ. ಇನ್ನೊಂದೆಡೆ ಪಾಕ್ ಆಟಗಾರರು ಮತ್ತು ಅಭಿಮಾನಿಗಳಿಗೆ ಇದು ‘ಸೇಡಿನ ಪಂದ್ಯ’ ಆಗಿದೆ.

ಈ ಟೂರ್ನಿಯಲ್ಲಿ ಸೂರ್ಯ ಅವರು ಶ್ರೇಷ್ಠ ಬ್ಯಾಟರ್ ಆಗಿದ್ದಾರೆ. ತಾಂತ್ರಿಕ ಕೌಶಲದಲ್ಲಿ ಅಸಾಧಾರಣ ಪ್ರತಿಭಾನ್ವಿತರು ಮತ್ತು ದೇಶದ ರಾಯಭಾರಿಯೂ ಆಗಿರುವ ಅವರ ನಾಯಕತ್ವದಲ್ಲಿ ತಂಡವು ಗುಂಪು ಹಂತದಲ್ಲಿ ಪಾಕ್ ಎದುರು 7 ವಿಕೆಟ್ಗಳಿಂದ ಗೆದ್ದಿತ್ತು.

ಒಮಾನ್ ಎದುರಿನ ಪಂದ್ಯದಲ್ಲಿ ಕ್ಯಾಚ್ ಪಡೆಯುವ ಪ್ರಯತ್ನಲ್ಲಿ ಅಕ್ಷರ್ ಪಟೇಲ್ ಅವರ ತಲೆಗೆ ಚೆಂಡು ಬಿದ್ದು ಗಾಯವಾಗಿದೆ. ಅವರು ಫಿಟ್ ಆಗಿ ಈ ಪಂದ್ಯಕ್ಕೆ ಮರಳುವರೋ ಇಲ್ಲವೋ ಎಂಬ ಆತಂಕದಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಇದ್ದಾರೆ. ಆದರೆ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರ ಪ್ರಕಾರ; ಆಲ್ರೌಂಡರ್ ಅಕ್ಷರ್ ಚೇತರಿಸಿಕೊಳ್ಳುತ್ತಿದ್ದಾರೆ. ಒಂದೊಮ್ಮೆ ಅಕ್ಷರ್ ಆಡಲು ಸಮರ್ಥರಾಗದಿದ್ದರೆ ವಾಷಿಂಗ್ಟನ್ ಸುಂದರ್ ಅಥವಾ ರಿಯಾನ್ ಪರಾಗ್ ಅವರಲ್ಲೊಬ್ಬರಿಗೆ ಅವಕಾಶ ಸಿಗಲಿದೆ.

ಪಾಕ್ ಎದುರಿನ ಪಂದ್ಯಕ್ಕೂ ಮುನ್ನ ಸೂರ್ಯ ಅವರು ತಮ್ಮ ತಂಡದ ಬೌಲರ್ಗಳ ಸಾಮರ್ಥ್ಯವನ್ನು ಪರೀಕ್ಷೆಗೊಡ್ಡಿದರು. ಶುಕ್ರವಾರ ಮಾನ್ ವಿರುದ್ಧದ ಪಂದ್ಯದಲ್ಲಿ ಹರ್ಷಿತ್ ರಾಣಾ ಮತ್ತು ಅರ್ಷದೀಪ್ ಸಿಂಗ್ ಅವರನ್ನು ಬ್ಯಾಟರ್ಗಳು ಲೀಲಾಜಾಲವಾಗಿ ಆಡಿದರು. ಒಮಾನ್ ತಂಡದಲ್ಲಿ ಆಡುವ ಪಾಕ್ ಮೂಲದವರು ಹಾಗೂ 43 ವರ್ಷದ ಅಮೀರ್ ಖಲೀಂ ಮತ್ತು ಹಮದ್ ಮಿರ್ಝಾ ಅವರು ರಾಣಾ ಮತ್ತು ಸಿಂಗ್ ಅವರಿಗೆ ಬಿಸಿ ಮುಟ್ಟಿಸಿದರು.

ಭಾನುವಾರ ಜಸ್ಪ್ರೀತ್ ಬೂಮ್ರಾ ಅವರು ಕಣಕ್ಕಿಳಿಯಲಿರುವುದು ಸಮಾಧಾನದ ಸಂಗತಿ. ಇದು ತಂಡದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ವರುಣ್ ಚಕ್ರವರ್ತಿ, ಕುಲದೀಪ್ ಯಾದವ್ ಅವರು ತಮ್ಮ ಯಶಸ್ಸಿನ ಓಟ ಮುಂದುವರಿಸಿದರೆ ಪಾಕ್ ತಂಡಕ್ಕೆ ಹಾದಿ ಕಠಿಣವಾಗಲಿದೆ.

ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರು ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದರೆ ಹಾಗೂ ಅವರಿಗೆ ಶುಭಮನ್ ಗಿಲ್ ಕೂಡ ಜೊತೆಯಾದರೆ ಇನಿಂಗ್ಸ್ಗೆ ಗಟ್ಟಿ ಅಡಿಪಾಯ ಸಾಧ್ಯವಿದೆ. ಸೂರ್ಯಕುಮಾರ್, ಸಂಜು ಸ್ಯಾಮ್ಸನ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ ಅವರು ಮಧ್ಯಮ ಕ್ರಮಾಂಕದಲ್ಲಿ ರನ್ಗಳನ್ನು ಹರಿಸಬಲ್ಲರು.

ಆದರೆ ಪಾಕ್ ತಂಡ ಸಮತೋಲನವಾಗಿಲ್ಲ. ದಶಕಗಳ ಹಿಂದೆ ಜಾವೆದ್ ಮಿಯಾಂದಾದ್, ಇಂಜಾಮಾಮ್ ಉಲ್ ಹಕ್, ಸಲೀಮ್ ಮಲಿಕ್ ಮತ್ತು ಇಜಾಜ್ ಅಹಮದ್ ಅವರಂತಹ ಖ್ಯಾತನಾಮರು ಆಡಿದ ತಂಡದಲ್ಲಿರುವ ಇಂದಿನ ಬಹುತೇಕ ಆಟಗಾರರಲ್ಲಿ ತಾಂತ್ರಿಕ ಕೌಶಲದ ಕೊರತೆ ಎದ್ದು ಕಾಣುತ್ತಿದೆ. ಆರಂಭಿಕ ಬ್ಯಾಟರ್ ಸೈಮ್ ಅಯೂಬ್ ಅವರು ಕಳೆದ ಎರಡೂ ಪಂದ್ಯಗಳಲ್ಲಿ ಶೂನ್ಯ ಸುತ್ತಿದ್ದಾರೆ. ಸಾಹಿಬ್ಝಾದಾ ಫರ್ಹಾನ್, ಹಸನ್ ನವಾಜ್ ಅವರು ಲಯಕ್ಕೆ ಮರಳುವ ಪ್ರಯತ್ನದಲ್ಲಿದ್ದಾರೆ.

ಅನುಭವಿಗಳಾದ ಫಕಾರ್ ಜಮಾನ್ ಮತ್ತು ಶಾಹೀನ್ ಅಫ್ರಿದಿ ಅವರ ಮೇಲೆ ತಂಡಕ್ಕೆ ಹೆಚ್ಚಿನ ನಿರೀಕ್ಷೆ ಇದೆ.

ಹೋಟೆಲ್ ಕೋಣೆಯ ಕಿಟಕಿ ಬಾಗಿಲು ಮುಚ್ಚುವುದು ಮೊಬೈಲ್ ಬಂದ್ ಮಾಡುವುದು. ಮುಸುಕೆಳೆದುಕೊಂಡು ಮಲಗುವುದು ‘ಬಾಹ್ಯದ ಗೌಜಿ’ಯನ್ನು ದೂರ ಮಾಡಲು ಉತ್ತಮ ಕ್ರಮಗಳು. ಆದರೆ ಇದು ಅಷ್ಟೇನೂ ಸುಲಭವಲ್ಲ.
–ಸೂರ್ಯಕುಮಾರ್ ಯಾದವ್, ಭಾರತ ತಂಡದ ನಾಯಕ

ಪಂದ್ಯ ಆರಂಭ: ರಾತ್ರಿ 8

ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ಟೆನ್ 1 ಮತ್ತು ಟೆನ್ 5.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.