ಲಖನೌ: ರವಿಚಂದ್ರನ್ ಸ್ಮರಣ್ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಎರಡನೇ ಶತಕ ಗಳಿಸಿದರು. ಇದರಿಂದಾಗಿ ಕರ್ನಾಟಕ ತಂಡವು ಉತ್ತರಾಖಂಡ ಎದುರು ಒಟ್ಟು 802 ರನ್ಗಳ ಮುನ್ನಡೆ ಸಾಧಿಸಿದೆ.

ಪಂದ್ಯದ ನಾಲ್ಕನೇ ದಿನವಾದ ಬುಧವಾರ ಬೆಳಿಗ್ಗೆ ಉತ್ತರಾಖಂಡ ತಂಡವನ್ನು 233 ರನ್ಗಳಿಗೆ ಕಟ್ಟಿಹಾಕಿದ ಕರ್ನಾಟಕ ತಂಡವು ಮೊದಲ ಇನಿಂಗ್ಸ್ನಲ್ಲಿ 503 ರನ್ಗಳ ಬೃಹತ್ ಮುನ್ನಡೆ ಸಾಧಿಸಿತು. ಎರಡನೇ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡವು ದಿನದಾಟದ ಮುಕ್ತಾಯಕ್ಕೆ 6 ವಿಕೆಟ್ಗಳಿಗೆ 299 ರನ್ ಗಳಿಸಿದೆ. ಕೆ.ಎಲ್. ರಾಹುಲ್ (ಬ್ಯಾಟಿಂಗ್ 70) ಕ್ರೀಸ್ನಲ್ಲಿದ್ದಾರೆ.

ಕರ್ನಾಟಕ ತಂಡವು ಮೊದಲ ಇನಿಂಗ್ಸ್ನಲ್ಲಿ 739 ರನ್ ಗಳಿಸಲು ದೇವದತ್ತ ಪಡಿಕ್ಕಲ್ ದ್ವಿಶತಕ, ರಾಹುಲ್ ಮತ್ತು ಸ್ಮರಣ್ ಶತಕಗಳು ಕಾರಣವಾಗಿದ್ದವು. ಎರಡನೇ ಇನಿಂಗ್ಸ್ನಲ್ಲಿ ಐದನೇ ಕ್ರಮಾಂಕದಲ್ಲಿ ಬಂದ ಸ್ಮರಣ್ (127;
149ಎಸೆತ, 4X12, 6X3) ಮತ್ತೆ ಶತಕ ಗಳಿಸಿದರು. ಅಲ್ಲದೇ ಅವರು ರಾಹುಲ್ ಜೊತೆಗೆ ಐದನೇ ವಿಕೆಟ್ ಜೊತೆಯಾಟದಲ್ಲಿ 168 ರನ್ ಸೇರಿಸಿದರು. 22 ವರ್ಷದ ಸ್ಮರಣ್ ಅವರಿಗೆ ಇದು ಆರನೇ ಶತಕ.

ಒಂದೊಮ್ಮೆ ಕರ್ನಾಟಕ ತಂಡವು ಕೊನೆಯ ದಿನವಾದ ಗುರುವಾರ ಬೆಳಿಗ್ಗೆ ಡಿಕ್ಲೇರ್ ಮಾಡಿಕೊಂಡು ಉತ್ತರಾಖಂಡ ತಂಡವನ್ನು ಆಲೌಟ್ ಮಾಡಿ ಗೆಲುವಿಗೆ ಪ್ರಯತ್ನಿಸಬಹುದು. ಇಲ್ಲದಿದ್ದರೆ ಪಂದ್ಯ ಡ್ರಾ ಆಗಬಹುದು. ಒಟ್ಟಿನಲ್ಲಿ ಕರ್ನಾಟಕ ತಂಡವು ಫೈನಲ್ ಪ್ರವೇಶಿಸುವುದು ಖಚಿತವಾಗಿದೆ. ಇದೇ 24ರಿಂದ ನಡೆಯುವ ಫೈನಲ್ನಲ್ಲಿ ಜಮ್ಮು–ಕಾಶ್ಮೀರವನ್ನು ಎದುರಿಸಲಿದೆ.

ವೈಶಾಖ–ವಿದ್ಯಾಧರ್ ಮಿಂಚು

ಮಂಗಳವಾರ ದಿನದಾಟದ ಅಂತ್ಯಕ್ಕೆ ಉತ್ತರಾಖಂಡ 5 ವಿಕೆಟ್ಗಳಿಗೆ 149 ರನ್ ಗಳಿಸಿತ್ತು. ಕ್ರೀಸ್ನಲ್ಲಿ ಲಕ್ಷ್ಯ ರಾಯಚಂದಾನಿ ಮತ್ತು ಸೌರಭ್ ರಾವತ್ ಅವರಿದ್ದರು.

ದಿನದ ಮೊದಲ ಓವರ್ನಲ್ಲಿ ವೇಗಿ ವೈಶಾಖ ವಿಜಯಕುಮಾರ್ ಅವರು ರಾವತ್ (14) ವಿಕೆಟ್ ಗಳಿಸಿದರು. ವೈಶಾಖ ಅವರ ಬೌಲಿಂಗ್ನಲ್ಲಿಯೇ ರಾಯಚಂದಾನಿ ಅವರ ಇನಿಂಗ್ಸ್ ಕೂಡ ಕೊನೆಯಾಯಿತು. 175 ರನ್ಗಳಾಗುವಷ್ಟರಲ್ಲಿ ತಂಡವು 9 ವಿಕೆಟ್ ಕಳೆದುಕೊಂಡಿತು. ಆದಿತ್ಯ ರಾವತ್ (45; 38ಎ) ಅವರ ಏಕಾಂಗಿ ಹೋರಾಟದಿಂದಾಗಿ ತಂಡವು 200ರ ಗಡಿ ದಾಟಿತು.

ವೈಶಾಖ ಮತ್ತು ವಿದ್ಯಾಧರ್ ಪಾಟೀಲ ಅವರು ಒಟ್ಟು ಆರು ವಿಕೆಟ್ ಹಂಚಿಕೊಂಡರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಕರ್ನಾಟಕ: 739. ಉತ್ತರಾಖಂಡ: 88.5 ಓವರ್ಗಳಲ್ಲಿ 233 (ಲಕ್ಷ್ಯ ರಾಯಚಂದಾನಿ 55, ಆದಿತ್ಯ ರಾವತ್ ಔಟಾಗದೇ 45, ವೈಶಾಖ ವಿಜಯಕುಮಾರ್ 45ಕ್ಕೆ3, ವಿದ್ಯಾಧರ್ ಪಾಟೀಲ 40ಕ್ಕೆ3) ಎರಡನೇ ಇನಿಂಗ್ಸ್: ಕರ್ನಾಟಕ: 63.5 ಓವರ್ಗಳಲ್ಲಿ 6ಕ್ಕೆ299 (ಆರ್. ಸ್ಮರಣ್ 127, ಕೆ.ಎಲ್. ರಾಹುಲ್ ಬ್ಯಾಟಿಂಗ್ 70, ಕೃತಿಕ್ ಕೃಷ್ಣ 52, ಅಭಯ್ ನೇಗಿ 53ಕ್ಕೆ2)

ಫೈನಲ್ ಪಂದ್ಯ ಎಲ್ಲಿ?

ಹತ್ತು ವರ್ಷಗಳ ನಂತರ ಕರ್ನಾಟಕ ತಂಡವು ರಣಜಿ ಟ್ರೋಫಿ ಫೈನಲ್ ಪ್ರವೇಶಿಸಲಿರುವುದು ಕ್ರಿಕೆಟ್ ಪ್ರೇಮಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಅಲ್ಲದೇ ಜಮ್ಮು ಮತ್ತು ಕಾಶ್ಮೀರ ಎದುರಿನ ಪಂದ್ಯವು ಕರ್ನಾಟಕದ ಆತಿಥ್ಯದಲ್ಲಿ ನಡೆಯುವುದು ಕೂಡ ಖಚಿತವಾಗಿದೆ. 15 ವರ್ಷಗಳ ನಂತರ ಕೆಎಸ್ಸಿಎಗೆ ರಣಜಿ ಟ್ರೋಫಿ ಫೈನಲ್ಗೆ ಆತಿಥ್ಯ ವಹಿಸುವ ಅವಕಾಶ ಸಿಗಲಿದೆ. ಆದರೆ ಯಾವ ಕ್ರೀಡಾಂಗಣದಲ್ಲಿ ಎಂಬುದು ಗುರುವಾರ ಖಚಿತವಾಗಲಿದೆ. 2013–14 ಹಾಗೂ 2014–15ರ ಸತತ ಎರಡು ಋತುಗಳಲ್ಲಿ ವಿನಯಕುಮಾರ್ ನಾಯಕತ್ವದ ಕರ್ನಾಟಕ ಟ್ರೋಫಿ ಜಯಿಸಿತ್ತು. ಅದರ ನಂತರ ಫೈನಲ್ ಪ್ರವೇಶಿಸಿರಲಿಲ್ಲ. ಕೆಲವು ಟೂರ್ನಿಗಳಲ್ಲಿ ನಾಕೌಟ್ ಹಂತದಲ್ಲಿ ನಿರಾಸೆ ಅನುಭವಿಸಿತ್ತು. 2009–10ರ ಋತುವಿನಲ್ಲಿ ಮೈಸೂರಿನಲ್ಲಿ ಫೈನಲ್ ನಡೆದಿತ್ತು. ಅದರಲ್ಲಿ ಕರ್ನಾಟಕ ತಂಡವು ಮುಂಬೈ ಎದುರು ಸೋತಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನವೀಕರಣ ಕಾರ್ಯ ನಡೆಯುತ್ತಿರುವುದರಿಂದ ಪಂದ್ಯ ನಡೆಸಲು ಸಾಧ್ಯವಾಗುವುದಿಲ್ಲ. ಅದರಿಂದಾಗಿ ಮೈಸೂರಿನ ಗಂಗೋತ್ರಿ ಗ್ಲೇಡ್ಸ್ ಹುಬ್ಬಳ್ಳಿಯ ರಾಜನಗರದ ಕೆಎಸ್ಸಿಎ ಮೈದಾನ ಶಿವಮೊಗ್ಗದ ನವುಲೆ ಕ್ರೀಡಾಂಗಣ ಅಥವಾ ಬೆಂಗಳೂರು ಹೊರವಲಯದ ಆಲೂರಿನ ಕ್ರೀಡಾಂಗಣದಲ್ಲಿ ಪಂದ್ಯ ನಡೆಸುವ ಸಾಧ್ಯತೆ ಹೆಚ್ಚಿದೆ. ‘ಗುರುವಾರ ಬಿಸಿಸಿಐ ಜೊತೆ ಸಭೆ ಇದೆ. ನಂತರವಷ್ಟೇ ಪಂದ್ಯವನ್ನು ಯಾವ ಮೈದಾನದಲ್ಲಿ ನಡೆಸಬೇಕು ಎನ್ನುವ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಕೆಎಸ್ಸಿಎ ವಕ್ತಾರ ವಿನಯ್ ಮೃತ್ಯುಂಜಯ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.