ಸೆಮಿಫೈನಲ್: ಪಾಕ್‌ಗೆ ಹೀಗಿದೆ ಲೆಕ್ಕಾಚಾರ
ಪಾಕಿಸ್ತಾನ ತಂಡವು ಶನಿವಾರ ನಡೆಯುವ ಎರಡನೇ ಗುಂಪಿನ ಸೂಪರ್ ಎಂಟರ ಹಂತದ ಕೊನೆಯ ಪಂದ್ಯದಲ್ಲಿ
ಆತಿಥೇಯ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಈ ಪಂದ್ಯ ಪಾಕಿಸ್ತಾನದ ಪಾಲಿಗಷ್ಟೇ ಮಹತ್ವದ್ದು.
ಶ್ರೀಲಂಕಾ ಈಗಾಗಲೇ ನಾಕೌಟ್ ಹಾದಿಯಿಂದ ಹೊರಬಿದ್ದಿದೆ. ಇಂಗ್ಲೆಂಡ್ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಸೋತಿರುವ ಕಾರಣ ಪಾಕಿಸ್ತಾನದ ಸೆಮಿಫೈನಲ್ ಆಸೆ ಜೀವಂತವಾಗಿ ಉಳಿದಿದೆ. ಆದರೆ ಪಾಕಿಸ್ತಾನ ಗೆಲುವಷ್ಟೇ ಸಾಲದು. ಅದು 64 ರನ್‌ಗಳ ಅಂತರದಿಂದ ಗೆಲ್ಲಬೇಕು. ಎರಡನೇಯದಾಗಿ ಬ್ಯಾಟ್ ಮಾಡಿದಲ್ಲಿ ಕನಿಷ್ಠ 13.1 ಓವರುಗಳಲ್ಲಿ ಶ್ರೀಲಂಕಾ ನಿಗದಿಪಡಿಸಿದ ಗುರಿ ಸಾಧಿಸಬೇಕಾಗುತ್ತದೆ.