ಸಿಡ್ನಿ: ಬಾರ್ಡರ್ ಗಾವಾಸ್ಕರ್ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲನುಭವಿಸಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) ಫೈನಲ್ಗೆ ಹೋಗುವಲ್ಲಿ ಟೀಂ ಇಂಡಿಯಾ ವಿಫಲವಾಗಿದೆ.

ಈ ಐತಿಹಾಸಿಕ ಗೆಲುವಿನೊಂದಿಗೆ ಕಾಂಗರೂ ಪಡೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯೂಟಿಸಿ) ಫೈನಲ್ಗೆ ಲಗ್ಗೆ ಇಟ್ಟಿದೆ. ಜೂನ್ನಲ್ಲಿ ಇಂಗ್ಲೆಂಡ್ನ ಲಾರ್ಡ್ಸ್ನಲ್ಲಿ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
.ಸಿಡ್ನಿ ಟೆಸ್ಟ್ನಲ್ಲಿ ಭಾರತಕ್ಕೆ ಸೋಲು: ಕೈತಪ್ಪಿದ ಬಾರ್ಡರ್–ಗವಾಸ್ಕರ್ ಟ್ರೋಫಿ.ಡಬ್ಲ್ಯುಟಿಸಿ ಫೈನಲ್: ವಿಜೇತ ತಂಡಕ್ಕೆ ₹ 11.71 ಕೋಟಿ ಬಹುಮಾನ.
ಭಾರತ ತಂಡವು ಈ ಪಂದ್ಯ ಸೋತ ನಂತರ ಪಾಯಿಂಟ್ ಪರ್ಸಂಟೇಜ್ (ಪಿಸಿಟಿ) 50ಕ್ಕೆ ಕುಸಿದೆ. ದಕ್ಷಿಣ ಆಫ್ರಿಕಾ 66.67 ಹಾಗೂ ಆಸ್ಟ್ರೇಲಿಯಾದ ಪಿಸಿಟಿಯು 63.73ಕ್ಕೇರಿದೆ.

ಕಾಂಗೂರು ಪಡೆಗೆ ಶ್ರೀಲಂಕಾ ಎದುರು ಇನ್ನು ಎರಡು ಟೆಸ್ಟ್ ಪಂದ್ಯಗಳು ಇರುವುದರಿಂದ ಅದರ ಪಿಟಿಸಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಭಾರತಕ್ಕೆ ಈ ಆವೃತ್ತಿಯಲ್ಲಿ ಯಾವುದೇ ಟೆಸ್ಟ್ ಪಂದ್ಯ ಇಲ್ಲದಿರುವುದರಿಂದ ಫೈನಲ್ನಿಂದ ಹೊರಬಿದ್ದಿದೆ.

ಬಾರ್ಡರ್ ಗಾವಾಸ್ಕರ್ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲನುಭವಿಸಿದೆ. ಭಾರತ ನೀಡಿದ 162 ರನ್ ಗುರಿಯನ್ನು ನಾಲ್ಕು ವಿಕೆಟ್ ಕಳೆದುಕೊಂಡು ಆಸ್ಟ್ರೇಲಿಯಾ ಬೆನ್ನಟ್ಟಿತು. ಆ ಮೂಲಕ 5 ಪಂದ್ಯಗಳ ಸರಣಿಯನ್ನು 3–1 ಅಂತರದಿಂದ ಆಸ್ಟ್ರೇಲಿಯಾ ಕೈವಶ ಮಾಡಿಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.