ಗೋಕಾಕ: ಘಟಪ್ರಭಾ ನದಿಯ ಹಿನ್ನೀರಿನಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹದಲ್ಲಿ ಏರಿಕೆ ಉಂಟಾಗುತ್ತಿರುವ ಪರಿಣಾಮ ಗೋಕಾಕ–ಶಿಂಗಳಾಪುರ ಸೇತುವೆ ಶುಕ್ರವಾರ ಸಂಜೆ ಪ್ರವಾಹದಲ್ಲಿ ಮುಳುಗಡೆ ಆಗಿದೆ.
ಬ್ರಿಜ್ ಕಂ ಬ್ಯಾರೇಜ್ ಪ್ರವಾಹದಲ್ಲಿ ಮುಳುಗಿದ್ದರಿಂದ ಶಿಂಗಳಾಪುರ ಮತ್ತು ಟಕ್ಕೆ ನಿವಾಸಿಗಳು ಅಪಾಯವನ್ನೂ ಲೆಕ್ಕಿಸದೇ ಪ್ರವಾಹದ ಮಧ್ಯೆಯೇ ಸೇತುವೆ ದಾಟುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಈ ಹಿನ್ನೆಲೆಯಲ್ಲಿ ತಹಶೀಲ್ದಾರ ಮೋಹನ ಭಸ್ಮೆ ಸ್ಥಳಕ್ಕೆ ಭೇಟಿ ನೀಡಿದರು. ಪೊಲೀಸ್ ಬಂದೋಬಸ್ತ್ ಕಲ್ಪಿಸಲು ಗೋಕಾಕ ಶಹರ ಮತ್ತು ಘಟಪ್ರಭಾ ಪೊಲೀಸರಿಗೆ ಸೂಚನೆ ನೀಡಿದ್ದಾರೆ.