ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರೋದ್‌ ವಾದಕ ಪಂಡಿತ್ ರಾಜೀವ ತಾರನಾಥ ಆಸ್ಪತ್ರೆಗೆ ದಾಖಲು

Published 25 ಮೇ 2024, 15:27 IST
Last Updated 25 ಮೇ 2024, 15:27 IST
ಅಕ್ಷರ ಗಾತ್ರ

ಮೈಸೂರು: ಸರೋದ್‌ ವಾದಕ ಪಂಡಿತ್‌ ರಾಜೀವ ತಾರನಾಥ ಅವರು ಇಲ್ಲಿನ ಕುವೆಂಪುನಗರದ ನಿವಾಸದಲ್ಲಿ ಕುಸಿದು ಬಿದ್ದು ಮಣಿಪಾಲ್‌ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.

‘23 ದಿನಗಳ ಹಿಂದೆ ಬಿದ್ದ ಅವರ ತೊಡೆ ಮೂಳೆ ಮುರಿದಿತ್ತು. ವೈದ್ಯ ಪ್ರಶಾಂತ್‌ ಶಸ್ತ್ರಚಿಕಿತ್ಸೆ ನಡೆಸಿದ್ದು, ಯಶಸ್ವಿಯಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ’ ಎಂದು ಅವರ ಆಪ್ತ, ಲೇಖಕ ಟಿ.ಎಸ್‌.ವೇಣುಗೋಪಾಲ್ ‘ಪ್ರಜಾವಾಣಿ’ಗೆ ಶುಕ್ರವಾರ ತಿಳಿಸಿದರು.

‘ಎರಡು ದಿನದ ಹಿಂದೆ ಮೂತ್ರಕೋಶದ ಸೋಂಕು ಉಂಟಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅವರು ಈಗ ನಿತ್ಯ ಭೇಟಿಯಾಗುವ ಸಂಗೀತಗಾರರು ಹಾಗೂ ಲೇಖಕರೊಂದಿಗೆ ಮಾತನಾಡುತ್ತಿದ್ದಾರೆ’ ಎಂದು ಹೇಳಿದರು.

‘ಗುರುವಾರವಷ್ಟೇ ಪಂಡಿತ್ ವೆಂಕಟೇಶ್‌ ಕುಮಾರ್ ಬಂದಿದ್ದರು. ಅವರಿಂದ ಹಾಡಿಸಿ, ತಾವೂ ಹಾಡಿದರು. 93 ವರ್ಷವಾದ್ದರಿಂದ ಚೇತರಿಕೆ ನಿಧಾನವಾಗಿದೆ. ಇನ್ನೂ ಒಂದು ವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಬಿಡುಗಡೆ ಬಗ್ಗೆ ವೈದ್ಯರೇನೂ ಹೇಳಿಲ್ಲ’ ಎಂದರು. 

‘ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಬೇಕಿತ್ತು. ಶನಿವಾರ ಬರುವೆನೆಂದು ಹೇಳಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT