ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಗರ್ ಹುಕುಂ ಕಾಯ್ದೆ ಸಮರ್ಪಕ ಜಾರಿಗೆ ಆಗ್ರಹ: ರೈತರ ಪ್ರತಿಭಟನೆ

Published : 12 ಜುಲೈ 2024, 16:22 IST
Last Updated : 12 ಜುಲೈ 2024, 16:22 IST
ಫಾಲೋ ಮಾಡಿ
Comments

ರಾಯಚೂರು: ಸರ್ಕಾರಿ ಹಾಗೂ ಪಾಳುಬಿದ್ದ ಭೂಮಿಯನ್ನು ಮೂರು ತಲೆಮಾರುಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಭೂ ಮಂಜೂರು ಮಾಡಬೇಕು ಹಾಗೂ ಸರ್ಕಾರಿ ಜಾಗದಲ್ಲಿ ವಾಸಿಸುವ ನಿವಾಸಿಗಳಿಗೆ ವಸತಿ ನಿವೇಶನ ಹಕ್ಕು ಪತ್ರ ನೀಡಬೇಕು ಎಂದು ಒತ್ತಾಯಿಸಿ ಶುಕ್ರವಾರ ಕರ್ನಾಟಕ ರೈತ ಸಂಘ(ಕೆಆರ್‌ಎಸ್-ಎಐಕೆಕೆಎಸ್) ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ರೈತರು ಪ್ರತಿಭಟನೆ ನಡೆಸಿದರು.

ಆನಂತರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. 2018ರಲ್ಲಿ ಫಾರಂ-57ಅಡಿಯಲ್ಲಿ ಅರ್ಜಿ ಸಲ್ಲಿಸಿದ ಲಕ್ಷಾಂತರ ಬಡ ರೈತರಿಗೆ ಭೂ ಮಂಜೂರಾತಿ ನೀಡಿಲ್ಲ. 2018ರಂದು ಜಾರಿ ಮಾಡಿದ ಅಕ್ರಮ-ಸಕ್ರಮ(ಬಗರ್ ಹುಕುಂ) ಕಾಯ್ದೆ ಕಾಯ್ದೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಹಿಂದೆ ಫಾರಂ ನಂಬರ್ 50, 53 ಅಡಿಯಲ್ಲಿ ಅರ್ಜಿ ಸಲ್ಲಿಸಿದ ಸಾಗುವಳಿದಾರರಿಗೂ ಪಟ್ಟಾ ಸಿಕ್ಕಿಲ್ಲ. 2019ರಿಂದ 2023ರವೆಗೆ ಅಧಿಕಾರ ವಹಿಸಿಕೊಂಡಿದ್ದ ಬಿಜೆಪಿಯ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರದಲ್ಲಿಯೂ ಬಡ ರೈತರಿಗೆ ಭೂ ಮಂಜೂರಾತಿ ಕಾರ್ಯವನ್ನೂ ಮಾಡಿಲ್ಲ ಎಂದು ದೂರಿದರು.

ಜಿಲ್ಲೆಯ ಸರ್ಕಾರಿ ಜಾಗದಲ್ಲಿ ವಾಸಿಸುವ ಮತ್ತು 94ಸಿ, 94ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಜನರಿಗೆ ನಿವೇಶನ ಹಕ್ಕು ನೀಡಬೇಕು. ಸಿಂಧನೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಭೂ ಮಂಜೂರಾತಿ ನೀಡಬೇಕು ಎಂದು ಆಗ್ರಹಿಸಿದರು.

ಸಿರವಾರ ತಾಲ್ಲೂಕಿನ  ಸರ್ವೆ ನಂಬರ್ 12ರ 920.10 ಎಕರೆ ಸರ್ಕಾರಿ ಹೆಚ್ಚುವರಿ  ಭೂಮಿಯನ್ನು ಸಾಗುವಳಿ ರೈತರನ್ನು ಈಗಾಗಲೇ ಟ್ರಿಮಿನ್ ಕಾಯ್ದೆ ಪ್ರಕಾರ ಜಮೀನಿನ ಸ್ಥಳ ಜಿಪಿಎಸ್ ಪಂಚನಾಮೆ ಮಾಡಿದ್ದ ಕಡತವನ್ನು ಸಹಾಯಕ ಆಯುಕ್ತ ಕಾರ್ಯಾಲಯಕ್ಕೆ ವರ್ಗಾವಣೆ  ಮಾಡಿಸಬೇಕು ಎಂದು ಒತ್ತಾಯಿಸಿದರು.

ಸಿರವಾರ ಹಾಗೂ ಮಾನ್ವಿ ತಾಲ್ಲೂಕಿನ ಭೂ ನ್ಯಾಯಮಂಡಳಿ ಸಮಿತಿ ರಚನೆ ಮಾಡಬೇಕು ಎನ್ನುವುದು ಸೇರಿದಂತೆ  ವಿವಿಧ ಬೇಡಿಕೆಗಳ ಈಡೆರಿಕೆಗೆ ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿಪಿಐಎಂಎಲ್‍ನ ರಾಜ್ಯ ಕಾರ್ಯದರ್ಶಿ ಡಿ.ಎಚ್. ಪೂಜಾರ, ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ನಿಲೋಗಲ್, ಪದಾಧಿಕಾರಿಗಳಾದ ಚಿಟ್ಟಿಬಾಬು, ರಮೇಶ ಪಾಟೀಲ ಬೇರ್ಗಿ, ಶಿವರಾಜ, ಶೇಖರಯ್ಯ, ನಾಗರಾಜ , ಹನುಮಂತ, ಹುಲಿಗೆಪ್ಪ, ವೀರೇಶ ನಾಯಕ, ಗೌಸಖಾನ್, ರೇಣುಕಮ್ಮ, ಯಮನೂರಪ್ಪ, ಬಸನಗೌಡ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT