ಶುಕ್ರವಾರ ಸಂಜೆ ದೆಹಲಿ ಶಾಸಕರ ನಿಯೋಗ ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಜ್ಞಾಪಕ ಪತ್ರ ಸಲ್ಲಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಆರನೇ ದೆಹಲಿ ಹಣಕಾಸು ಆಯೋಗ ರಚಿಸದೇ ಇರುವ ಹಾಗೂ ವಿಧಾನಸಭೆಯಲ್ಲಿ ಸಿ.ಎ.ಜಿ ವರದಿ ಮಂಡಿಸದೇ ಇರುವುದನ್ನೂ ಇದೇ ವೇಳೆ ಪ್ರಸ್ತಾಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ದೆಹಲಿಯ ಕೇಜ್ರಿವಾಲ್ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ. ಆಡಳಿತ ವ್ಯವಸ್ಥೆ ಪತನಗೊಂಡಿದೆ ಎಂದು ಗುಪ್ತಾ ಇದೇ ವೇಳೆ ಆರೋಪಿಸಿದ್ದಾರೆ.